ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಳಯಜಲದಲಿ ನೀನಾಲದೆಲೆಯ ಮ್ಯಾಲೆ ಹಲವು ಜೀವರು ನಿನ್ನ ಹೃದಯದೊಳಿರಲು ಕೆಲವುದಿನದಿ ಯೋಗನಿದ್ರೆಯೊಳಿರೆ ಒಲವಿಂದ ಸೃಜಿಸುವೆನೆಂದು ನೇಮಿಸುವೆ1 ಪ್ರಕೃತಿಯ ಮೂಲಕಾರಣವನು ಮಾಡಿ ಸಕಲತತ್ವಗಳ ಸಮ್ಮೋಹದಿ ಕೂಡಿ ವಿಕಳಿಸದಂತೆ ತನ್ಮಾತ್ರೆಯ ಕೂಡಿ ಅಖಿಳೇಶ ಮಹತತ್ವಗಳ ನಿರ್ಮಿಸಿದೆ 2 ಮಹತತ್ವದಿಂದಹಂಕಾರವ ಪುಟ್ಟಿಸಿ ಅಹಂಕಾರದಿಂದ ವೈಕಾರಿಕ ಮೊದಲಾದ ತ್ರಿವಿಧತತ್ವಗಳ ನಿರ್ಮಾಣವÀ ಮಾಡ್ದೆ ಮಹಮಹಿಮೆಯ ಮೆರೆದೆ ಜಗವರಿಯೆ 3 ಇಪ್ಪತ್ತುನಾಲ್ಕು ಅಯಿದಾರುತತ್ವಗಳಿಂದ ತÀಪ್ಪದೆ ಬೊಮ್ಮಾಂಡವ ನಿರ್ಮಿಸಿದೆ ಸರ್ಪಶಯನನಾಗಿ ನಾಭಿಕಮಲದಿಂದ ಅಪ್ಪಬ್ರಹ್ಮನ ಪ್ರಸವಿಸಿದೆ ನೀನೆಂದು 4 ಒಂದು ಮೂರುತಿಯಿಂದ ಸೃಷ್ಟಿಯ ಮಾಡಿ ಮತ್ತೊಂದು ಮೂರುತಿಯಿಂದ ಪಾಲನೆ ಮಾಡಿ ಒಂದು ಮೂರುತಿಯಿಂದ ಸಂಹರನೆ ಮಾಡಿ ಒಂದೊಂದು ಮಹಿಮೆಯು ಅನಂತಾದ್ಭುತವು 5 ಒಂದು ರೋಮಕೂಪದಲಿ ಬ್ರಹ್ಮಾಂಡ ಇಂದಿರೆ ಅನಂತಕೋಟಿ ನಾಮಗಳಲ್ಲಿ ಬಂದು ಗೋಕುಲದಲ್ಲಿ ಶಿಶುವಾಗಿ ತೋರಿದೆ ಆ- ಸುರರು 6 ಜನನಮರಣ ಭಯದಿಂದ ದೇವತೆಗಳು ಅನುದಿನ ನಿನ್ನ ಪೂಜೆಯ [ಮಾಡೇವೆನಲು] ಪುನರಾವೃತ್ತಿ ರಹಿತವಾದ ಫಲವೆತ್ತಿ ಮನುಜನಂತೆ ತೋರುವುದೇನುಚಿತವೊ 7 ಒಮ್ಮೆಕಾಣಲು ಸಿರಿರಮ್ಮೆ ಚೆಲುವನ ಒಮ್ಮನದಿಂದ ನೋಡೇನೆಂಬ ಭಯದಿಂದ ರಮ್ಮೆ ಮೊಗವ ತಗ್ಗಿಸಿ ನಾಚಿಸಿದಳೆ 8 ದÀಶದಿಕ್ಕು ನೋಡುತ್ತ ಭಯದಿಂದ ಕಮಲಜ ಶಶಿನಾಳದೊಳಗಿದ್ದ ದಾರಿಯ ಕಾಣದೆ ದಶಶತವರುಷ ನಿಮ್ಮನು ಧ್ಯಾನಿಸುತಿರೆ ವಸುಧೀಶ ನಿಮ್ಮ ನಿಜವ ತೋರಿದಿರಿ 9 ಆಲೋಚನೆಯಿಂದ ಸರ್ವ ವಿಷಯದಿಂದ ಲೀಲೆಯಿಂದ ಪಾಡಿ ಕಮಲಸಂಭವನ ವೋಳು ಮಾಡದಂತೆ ಒಳಿತಾಗಿ ತಲೆವಾಗೆ ಮೂಲ್ಲೋಕವ ಕೃಪೆಯಿಂದ ಪಾಲಿಸಿದೆ 10 ನಂದ ಯಶೋದೆ ವಸುದೇವ ದೇವಕಿಯರು ಸುಕೃತ ಫಲವಾಯಿತೆಂದು ಬಂದ ಬ್ರಾಹ್ಮಣರ ದ್ರವ್ಯದಿ ದಣಿಸಿದರು 11 ಜಾತಕರ್ಮವ ಮಾಡಿ ಮಧುವ ಬಾಯೊಳಗಿಟ್ಟು ಒತ್ತುಮೊರನ ಗೊಟ್ಟಿನಲಿ ಮಲಗಿದ್ದು ಸಾ- ಕ್ಷಾತ್ ಶ್ರೀ ನಾರಾಯಣನ ಅವತಾರವೆಂದು ಮಾತೆಯ ಮೊಲೆವಾಲನುಂಡ ಬೇಗದಲಿ 12 ವಾರುಣಿ ಶ- ಚಿ ರತಿ ಮೊದಲಾದ ಸತಿಯರು ನಾರಾಯಣ ಪರದೇವತೆಯೆಂದು ನಾರಿಯರೆಲ್ಲ ಪಾಡಿದರತಿ ಹರುಷದಲಿ 13 ನಾಮಕರಣ ದಿವಸ ಬ್ರಹ್ಮಾದಿ ಸುರರು ಈ ಮಹಾಶಿಶುವ ನೋಡೇವೆಂಬ ಭರದಿಂದ ಆ ಮಹಾಸ್ತೋಮವೆಲ್ಲ ಕೂಡಿಬರ- ಲೀ ಮಹಾಶಿಶುವ ನೋಡಿದರೆ ಅರ್ಥಿಯಲಿ 14 ವ್ಯಾಸ ಧೌಮ್ಯಾಚಾರ್ಯರೊಲಿದು ಮಂತ್ರಗಳಿಂದ ಸಾಸಿರಕೋಟ್ಯನಂತ ನಾಮಗಳುಳ್ಳ ವಾಸುದೇವ ಕೃಷ್ಣನೆಂಬ ನಾಮಗಳಿಟ್ಟು ಸೂಸಿದರಕ್ಷತೆ ಸುಮೂಹೂರ್ತದಲಿ 15 ಕ್ಷೀರಾಂಬುಧಿಯನ್ನೆ ತೊಟ್ಟಿಲು ಮಾಡಿ ಓರಂತೆ ನಾಲ್ಕುವೇದಗಳ ನೇಣನೆ ಮಾಡಿ ಧೀರಶೇಷನು ಬಂದು ಹಾಸಿಕೆ ಹಾಕಲು ನಾರಿಯರೊಡನೆ ಮಲಗಿದೆಯೊ ಹಯವದನ 16
--------------
ವಾದಿರಾಜ
ರಾಜೀವದಳನೇತ್ರ ರಾಮಚಂದ್ರನೆ ಶುಭ- ನಾಮಧೇಯನೆ ನಿನಗಾನಮಿಸುವೆನು ಪ ರಾಮರಾಕ್ಷಸಕುಲ ಭಯಂಕರ ರಾಮದಶರಥ ಪುತ್ರನೆ ವರ ಸಾಮಗಾನ ವಿಲೋಲ ಶ್ರೀವರ ರಾಮ ಭರತ ಶತ್ರುಘ್ನ ಪಾಲಕ ಅ.ಪ ಸುರರೆಲ್ಲ ನೆರೆದು ಋಷಿವರರೆಲ್ಲ ಒಂದಾಗಿ ವರ ಕ್ಷೀರಾಂಬುಧಿಯ ಸಾರುತ ವೇಗದಿ ಪರಮಾತ್ಮ ನಿನ ಕಂಡು ಪರಿಪರಿ ಸ್ಮರಿಸುತ ನೆರೆದರು ದೇವ ಗಂಧರ್ವ ನಾರದರೆಲ್ಲ ಗರುಡ ಗಮನನೆ ಉರಗಶಯನನೆ ಪರಮ ಪುರುಷನೆ ಪುಣ್ಯಚರಿತನೆ ತ್ವರದಿ ಎಮ್ಮಯ ಮೊರೆಯ ಕೇಳೆಂದು ಭರದಿ ಪ್ರಾರ್ಥನೆ ಮಾಡುತಿಹರು 1 ಖೂಳ ದೈತ್ಯರು ನಮ್ಮ ಬಾಳಗೊಡರೊ ದೇವ ಭಾಳ ವ್ಯಾಕುಲರಾಗಿ ದು:ಖಿಪೆವು ಕೇಳಿ ತಡಮಾಡದೆ ಪಾಲಿಸಿ ಸಲಹಯ್ಯ ಶ್ರೀಲೋಲ ಶ್ರೀವರ ಶ್ರೀವತ್ಸಲಾಂಛನ ಶ್ರೀಶ ಶ್ರೀ ಭೂದೇವಿ ರಮಣನೆ ಮಾತುಳಾಂತಕ ಮದನಜನಕನೆ ವಾಸುದೇವನೆ ಭಜಿಪ ಭಕ್ತರ ಸೋಸಿನಲಿ ರಕ್ಷಿಸುತ ಪೊರೆಯುವೆ 2 ಭಕ್ತವತ್ಸಲ ಸ್ವಾಮಿ ಭಕ್ತರ ಸುರಧೇನು ಯುಕ್ತ ಮಾತುಗಳಾಡಿ ಸಂತಯಿಸಿ ಸತ್ಯ ಸಂಕಲ್ಪನು ಮತ್ತವರನು ಕಳುಹಿ ಸತ್ಯಸಂಧನ ದಶರಥನುದರದಿ ಪುಟ್ಟಿ ಮತ್ತೆ ವಿಶ್ವಾಮಿತ್ರ ಬರಲು ಅರ್ಥಿಯಲಿ ಯಾಗವನೆ ನಡೆಸಲು ಸುತ್ತಿ ಬರುವ ಸುರರನೆ ಸದೆದು ಮತ್ತೆ ಯಾಗ ನಿರ್ವಿಘ್ನ ಮಾಡಿದ 3 ಸೀತಾಸ್ವಯಂವರಕ್ಕಾಗಿ ಬರುತಿರಲಾಗವರು ಗೌತಮ ಸತಿಯ ಶಾಪಹರಿಸಿ ಪಾತಕಿ ತಾಟಕಿಯನು ಕೊಂದು ಹರುಷದಿ ನಿ- ರ್ಭೀತನಾಗಿ ಮಿಥಿಲಾಪುರಕೆ ಸೇರಲು ಬಂದು ಆತ ಲಕ್ಷ್ಮಣನೊಡನೆ ಶಿವಧನು ನೀತಿಯಿಂದೆತ್ತುತಲಿ ಸೀತೆಯು ಪ್ರೀತಿಯಲಿ ವನಮಾಲೆ ಹಾಕಲು ಆಕೆಯ ಕೈಪಿಡಿದ ರಾಮನೆ 4 ರಾಮಲಕ್ಷ್ಮಣ ಭರತ ಶತ್ರುಘ್ನರಿಗೆ ಲಗ್ನ ನೇಮದಿಂದಲಿ ಮಾಡಿ ಕಳುಹಲಾಗ ಸಾಮಜವರ ಅಯೋಧ್ಯಾಪುರದಿ ಭಕ್ತ- ಸ್ತೋಮವನೆರಹಿ ರಾಜ್ಯಾಭಿಷೇಕವ ನಡಸೆ ಆ ಮಹಾಮುನಿ ಸ್ತೋಮ ಸುರಗಣ ರಾಮನಿಗೆ ಪಟ್ಟವೆನುತ ಹರುಷಿಸೆ ಆ ಮಹಾಕೈಕೆ ವರವ ಬೇಡುತ ರಾಮನಿಗೆ ವನವಾಸವೆನಲು 5 ವನವನ ಚರಿಸುತ ಘನರಕ್ಕಸರ ಕೊಂದು ವನಜಾಕ್ಷಿ ಮಾಯಾಮೃಗವೆ ಬೇಡಲು ವನಮೃಗ ಬೆನ್ನಟ್ಟಿ ತರುವೆನೆನುತ ಪೋಗಿ ಬಣಗು ರಾವಣ ಸೀತಾಹರಣವ ಮಾಡಲು ಕುರುಹು ಕಾಣದೆ ಸೀತೆಯ ವನವನದಿ ಚರಿಸುವ ಸಮಯದಲಿ ಕಪಿ ವರರ ಸೈನ್ಯವ ಕಳುಹಿ ಮುದ್ರಿಕೆ ಇತ್ತು ಜನಕ ಜಾತೆಯ ನೋಡಿ ಬರಲು 6 ಕಡಲ ಕಟ್ಟುತ ಸೈನ್ಯ ನಡಿಸಿ ಯುದ್ಧವ ಮಾಡೆ ಬಿಡದೆ ರಾವಣ ಸಹಿತೆಲ್ಲರನು ಕೊಂದು ಕಡು ಭಕ್ತನಿಗೆ ಲಂಕಾಪುರದಲಿ ಪಟ್ಟವ ಕಟ್ಟಿ ಮಡದಿ ಸಹಿತ ಪುಷ್ಪಕವನೇರಿ ಬರುತಿರೆ ಸಡಗರದಿ ಹನುಮಂತ ಭರತಗೆ ಒಡೆಯ ಬರುತಿಹನೆಂದು ಪೇಳಲು ಕಡುಹರುಷದಿ ಅಯೋಧ್ಯೆಯನಾಳಿದ ಕಡಲೊಡೆಯ ಕಮಲನಾಭ ವಿಠ್ಠಲನೆ 7 ಬಂದ ಶ್ರೀರಾಮಚಂದ್ರ ಭಾಗವತರ ಕೂಡಿಇಂದಿರೆ ಜಾನಕಿ ಸೌಮಿತ್ರಿ ಸಹಿತದಿ
--------------
ನಿಡಗುರುಕಿ ಜೀವೂಬಾಯಿ
ಗುರುರಾಘವೇಂದ್ರರಚರಣಕಮಲವನ್ನುಕರೆಕರೆಗೊಳಿಸುವದುರಿತದುಷ್ಕøತವೆಲ್ಲಗುರುಮಧ್ವಮತವೆಂಬವರಕ್ಷೀರಾಂಬುಧಿಯಲ್ಲಿಹರಿಯೆ ಸರ್ವೋತ್ತಮ ಸಿರಿಯು ಆತನ ರಾಣಿಅಂಧಕರಿಗೆ ಚಕ್ಷು ವಂದ್ಯರಿಗೆಸುರತರುರಾ ಎನ್ನೆ ದುರಿತರಾಶಿಗಳ ದಹಿಸುವವರತುಂಗಾತೀರ ಮಂತ್ರಾಲಯ ಪುರದಲ್ಲಿ
--------------
ಗೋಪಾಲದಾಸರು
ಶೋಭನ ಶೋಭನವೆ ನಮ್ಮಶ್ರೀ ಭೂದೇವಿಯರ ಅರಸು ವೆಂಕಟಗೆ ಪ.ಅಂದು ಕ್ಷೀರಾಂಬುಧಿಯನ್ನು ಮಥಿಸಲಾಗಇಂದಿರೆ ಹರುಷದಿಂದುದಿಸಿ ಬಂದು ||ಮಂದಾರ ಮಾಲೆಯ ಹಾಕಿದ ದೇವಗೆಕಂದರ್ಪಕೋಟಿ ಲಾವಣ್ಯ ಮೂರುತಿಗೆ 1ಜನಕನ ಮನೆಯಲ್ಲಿ ರಾಜಾಧಿರಾಜರುಎಣಿಕೆಯಿಲ್ಲದೆ ಬಂದಿರಲಾಗಿ ||ಸನಕಾದಿವಂದ್ಯನ ಕಂಡು ಸಂತೋಷದಿಜನಕಜೆ ಮಾಲೆಯ ಹಾಕಿದ ರಾಮಗೆ 2ರುಕುಮನು ಶಿಶುಪಾಲಗೀವೆನೆಂಬ ಮಾತಿಗೆಸಕಲ ರಾಯರು ಬಂದಿರಲಾಗಿ ||ಭಕುತಿ ವತ್ಸಲನ ಕಂಡು ಸಂತೋಷದಿರುಕುಮಿಣಿ ಮಾಲೆಯ ಹಾಕಿದ ಕೃಷ್ಣೆಗೆ 3ಸತ್ಯಭಾಮೆ ನೀಳಾ ಭದ್ರಾ ಕಾಳಿಂದಿಯುಮಿತ್ರವಿಂದಾ ಲಕ್ಷಣಾ ಜಾಂಬವತಿ ||ಮತ್ತೆ ಸೋಳಾಸಾಸಿರ ಗೋಪಿಕೆಯರಪ್ರತ್ಯಕ್ಷವಾಳಿದ ಕಲ್ಯಾಣಗೆ 4ಪದ್ಮದೇಶದಲೊಬ್ಬ ದೇವಾಂಗನೆಯುಪದ್ಮಮುಖಿಯು ಶ್ರುತಕೀರ್ತಿಯಾಗಿ ||ಪದ್ಮನಾಭ ಶ್ರೀ ಪುರಂದರವಿಠಲಗೆಪದ್ಮಾವತೀ ಪ್ರಿಯ ಶ್ರೀನಿವಾಸಗೆ 5
--------------
ಪುರಂದರದಾಸರು
ಶ್ರೀ ನಾಮಗಿರಿ ಅಮ್ಮ63ಶ್ರೀ ನಾಮಗಿರಿ ಅಮ್ಮ ನಿನ್ನ ನಾ ನಂಬಿದೆ ಸಲಹೆನ್ನಶ್ರೀ ನರಸಿಂಹನ ನಿಜಸತಿ ಶುಭಕರಿವನರುಹಜಾಂಡದಜನನಿಭೂಅಂಭ್ರಣಿಅ.ಪಬೊಮ್ಮನ ಪ್ರಳಯದಲಿ ಕಮಲಜ ಆಲದ ಎಲೆಯಾಗಿಸ್ವಾಮಿ ಸ್ವಾಪ್ಯನ ಬಹುನಂದದಿ ಸ್ತುತಿಸಿಸಮಸ್ತಜಗತ್ ಸತ್ಸøಷ್ಟಿಯ ಗೈಸಿದೆ 1ಕ್ಷೀರಾಂಬುಧಿಯಿಂದ ತೋರಿ ನೀ ಸರ್ವಜನರ ಮುಂದೆನಾರಅಜಿತ ಸರ್ವೋತ್ತಮ ಹರಿಗೆ ನೀನಿರಂತರ ನಿಜಸತಿಯೆಂದು ಪ್ರಕಟಿಸಿದೆ 2ಘನಬಾಲಭಕ್ತನಿಗೆ ಒಲಿದ ವೃತಿತಿಜಾಸನ ಪಿತನುಹನುಮವಂದಿತ ಶ್ರೀ ಪ್ರಸನ್ನ ಶ್ರೀನಿವಾಸನರಸಿಂಹನ ಸಹ ಭಕ್ತಜನರ ಪೊರೆವೆ 3
--------------
ಪ್ರಸನ್ನ ಶ್ರೀನಿವಾಸದಾಸರು