ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉದಯ ಕಾಲವಿದು ನಮ್ಮ ಪದುಮನಾಭನ ಉದಯಕಾಲವಿದು ಪ ಉದಯಕಾಲವಿದು ಪದುಮನಾಭನ ದಿವ್ಯ ವಿಧವಿಧ ಸೃಷ್ಟಿಯ ಮುದದಿ ಸಾಗಿಸುವಂಥ ಅ.ಪ ಪರಮ ಕರುಣಿ ದೇವ ತನ್ನ ಚರಣದಾಸರ ಕಾವ ಮರವೆ ಮಾಯದೊಳು ಹೊರಳುತ ಒರಲುವ ನರರಿಗರಿವನಿತ್ತು ವರವ ಪಾಲಿಸುವ 1 ಅನ್ನ ಆಹಾರವಿತ್ತು ಸೃಷ್ಟಿಯ ಭಿನ್ನವಿಲ್ಲದೆ ಪೊತ್ತು ಬನ್ನಬಡುತ ಬಲು ಕುನ್ನಿಪ್ರಾಣಿಗಳ್ಗೆ ಉನ್ನತ ಸುಖವಿತ್ತು ತನ್ನಂತೆ ನೋಡುವ 2 ಮಾಧವ ಸುಜನರ ಪಾಲಿಸುವ ನಿಜಮನದೊಳು ತನ್ನ ಭಜಿಸುವ ಜನರಿಗೆ ಸಾಯುಜ್ಯ ನೀಡುವ 3 ಯೋಗಿ ಜನರ ಪ್ರಿಯ ಕ್ಷೀರಸಾಗರಕನ್ಯೆಯೊಡೆಯ ಬಾಗಿ ಸದೃಢದಿ ಸುರಾಗದಿ ಪಾಡುವ ಭಾಗವತರ ನಿಜ ಯೋಗಕ್ಷೇಮ ಕೇಳ್ವ 4 ಶಾಮಸುಂದರಾಂಗ ಪುಣ್ಯನಾಮ ಕೋಮಲಾಂಗ ಕಾಮಿತಜನಪೂರ್ಣ ಕಾಮಜನಕ ತ್ರಿ ಭೂಮಿಗಧಿಕ ಮಮಸ್ವಾಮಿ ಶ್ರೀರಾಮ 5
--------------
ರಾಮದಾಸರು