ಒಟ್ಟು 10 ಕಡೆಗಳಲ್ಲಿ , 7 ದಾಸರು , 10 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕ್ಷೀರಶರಧಿಶಯನ ನಾರಾಯಣ ಪ ತೋರೊ ಎನ್ನಲಿ ಕರುಣ ನಾರಾಯಣ ಅ.ಪ ಕ್ಷಿತಿಯೊಳೆನಗೆ ಸ್ಥಿತಿ ಗತಿಯು ಬೇರಿಲ್ಲವೊ ಶ್ರಿತಜನ ಕಲ್ಪತರು ಶ್ರೀರಮಣ 1 ಅರಿಷಡ್ಪರ್ಗವ ಮುರಿದು ಎನಗೆ ನಿನ್ನ ವರ ಸೇವೆಯ ನೀಡೊ ಶ್ರೀ ನರಹರಿ 2 ಪಾಮರ ಭಕುತರ ಕ್ಷೇಮವಹಿಸಿ ಅವರ ಕಾಮಿತಗಳ ನೀಡೊ ಕಾಮಧೇನು 3 ಸಂತತ ಹೃದಯದಿ ನೆಲೆಸಿ ಎನಗೆ ಮನ ಶಾಂತಿಯ ದಯಮಾಡೊ ಚಿಂತಾಮಣಿ 4 ನಿನ್ನ ದಾಸರದಾಸನೆನ್ನಲಿ ದಯದಿ ಪ್ರ ಸನ್ನ ನಾಗೊ ಶ್ರೀಶ ಲಕ್ಷ್ಮೀಶ5
--------------
ವಿದ್ಯಾಪ್ರಸನ್ನತೀರ್ಥರು
ಜಯಮಂಗಳಂ ಶ್ರೀ ರಘುಕುಲಾಬ್ಧಿಚಂದ್ರ ಭವತು ತೇ ಶುಭಮಂಗಳಂ ಶ್ರೀರಘುಕುಲಾಬ್ದಿಚಂದ್ರ ಪ. ಸುರರಿಪುಶಮನ | ಕ್ಷೀರಶರಧಿಶಯನಾ ಕರಿವರನಮನ ಮುರಹರ ಶ್ರೀ | ಸುರವೈರಿಭಯಂಕರ ಮಾವರಶ್ರೀ | ಸರಸಿಜಾಕ್ಷ ಸಾಧುಪಕ್ಷ ದುರಳಶಿಕ್ಷ ಶ್ರೀಕಟಾಕ್ಷ 1 ಹರಣ ಭುವಿರ ಜಾರಮಣ ಭಯಹರ | ಪವನಾತ್ಮಜ ಕವಿಜನಾಳಿಪೂರ್ಣಕಾಮ 2 ದಾಸ ಹೃದಯಾವಾಸ | ದಶಶಿರಧ್ವಂಸ ಶಶಿನಿಭಹಾಸ | ದಶರಥಸುತ | ಶ್ರೀ ವಸುಮತೀಶ ಕುಲವಿಭೂಷ | ಶೇಷಶೈಲ ಶಿಖರಾವಾಸ ಜಯಮಂಗಳಂ3
--------------
ನಂಜನಗೂಡು ತಿರುಮಲಾಂಬಾ
ತೋರುವ ಜಗದಯನೆ ಪ ಕ್ಷೀರಶರಧಿ ಸುಕುಮಾರಿಣಿ ಹರಿಸಹ ಚಾರಿಣಿ ಭುವನ ವಿದಾರಿಣಿ ರುಕ್ಮಿಣಿ ಅ.ಪ ಮಂದಹಾಸ ವಿಜಿತೇಂದುಕಿರಣೆ ಗಜ ಮಂದಗಮನೆ ಸಂಕ್ರಂದನ ವಂದಿತೆ 1 ಮಾರಜನನಿ ಕಂಸಾರಿಯ ರಾಣಿ 2 ಪಾಲಿಸು ಕಲ್ಯಾಣಿ ಲೀಲೆಯಿಂದ ವನಮಾಲಿಯುರದಿ ನಿ ತ್ಯಾಲಯಗೈದಿಹ ಬಾಲೆ ವರದನುತೆ 3
--------------
ವೆಂಕಟವರದಾರ್ಯರು
ನಿನ್ನ ನಾನೇನೆಂದೆನೋ ರಾಮೇಶ್ವರನಿನ್ನ ನಾನೇನೆಂದೆನೋ ಸಕಲ ಲೋಕವನ್ನು ಪೊರೆವ ಪಾರ್ವತೀಶನೆಂದೆನಲ್ಲದೆ ಪ ತಾರಕಾಸುರನ ಪುತ್ರರ ಬಾಧೆಯನು ತಾಳಲಾರದೆ ಹರಿಮುಖ್ಯ ನಿರ್ಜರರುಶ್ರೀರುದ್ರ ಸಲಹೆಂದು ಪಾದಕೆ ಮಕುಟವ-ನೂರೆ ಪೊರೆದ ತ್ರಿಪುರಾರಿಯೆಂದೆನಲ್ಲದೆ ವಿಧಿ ಶಿರವ ಕೈ-ಯ್ಯಾರೆ ಕಡಿದನೆಂದೆನೆ ಭಕ್ತವತ್ಸಲವಾರಿಜಭವನುತಿಲೋಲನೆಂದೆನಲ್ಲದೆ 1 ನಾರದಸಹಿತ ಮತ್ಯಾರು ಕಾಣದಂದದಿಓರುಗಲ್ಲರಸಿನ ಮನೆಗೆ ಪೋಗಿತೋರುವ ಭಿತ್ತಿಯ ಕೊರೆದಾತನಿಷ್ಟವಪೂರಿಸಿದನುಪಮಮಹಿಮನೆಂದೆನಲ್ಲದೆಚೋರರ ಗುರುವೆಂದೆನೆ ಪಾರ್ಥಚಾಪದಿಂ-ದೇರುವಡೆದನೆಂದೆನೆ ಬತ್ತಲೆಮದವೇರಿ ಕುಣಿದನೆಂದೆನೆ ಅರ್ಜುನಗೊಲಿದಾರಾಜಿಸುವ ಮಹಾನಟನೆಂದೆನಲ್ಲದೆ2 ಸುರರು ದಾನವರೆಲ್ಲ ನೆರೆದು ವಾದಿಸಿ ಕ್ಷೀರಶರಧಿ ಮಥನವ ವಿರಚಿಸಲುಉರು ಹಾಲಾಹಲಮೊಗೆದುರುಹಲು ಸರ್ವರಪೊರೆದ ಶ್ರೀನೀಲಕಂಧರನೆಂದೆನಲ್ಲದೆಗರವ ಕುಡಿದನೆಂದೆನೆ ಪೆಣ್ಣಿತ್ತನಶಿರವನರಿದನೆಂದೆನೆ ಊರೂರೊಳುತಿರಿದುಗರುವನೆಂದೆನೆ ದುಷ್ಟ ಶಿಕ್ಷಕವರ ಕೆಳದಿಯ ರಾಮೇಶ್ವರನೆಂದೆನಲ್ಲದೆ3
--------------
ಕೆಳದಿ ವೆಂಕಣ್ಣ ಕವಿ
ಪಾಲಿಸೆನ್ನ ಪಾಲನಶೀಲೆ ಪಾಲಿತ ಸುರನರಜಾಲ ಸುಶೀಲೆ ಪ ಕ್ಷೀರಶರಧಿ ಸುಕುಮಾರಿಣಿ ಲಕ್ಷ್ಮೀ ವಾರಿಜಮುಖಿ ಸಿತವಾರಿರುಹಾಕ್ಷಿ 1 ಅಂಬೆ ಭುವನಕುಟುಂಬೆ ರಮಾಂಬೆ ನಂಬಿ ಭಜಿಸುವದು ಡಾಂಬಿಕಮೆಂಬೆ 2 ಯುಕ್ತಿಯು ಶಕ್ತಿ ವಿರಕ್ತಿಗಳಿಲ್ಲ ಉಕ್ತಿ ಮಾತ್ರದಿಂದ ಭಕ್ತಿಕೊಡೆಲ್ಲ 3 ಜಯಕರುಣಾಲಯೆ ಜಯಮಣಿವಲಯೆ ಜಯನಿಸ್ತುಲಯೆ ಜಡಮತಿಗೊಲಿಯೆ 4 ಧರೆಯೊಳುತ್ತಮ ಪುಲಿಗಿರಿಯೊಳಿರುವನೆ ಶರಣರ ಪೊರೆಯುವ ವರದವಿಠಲನ [ರಾಣಿಯೆ] 5
--------------
ವೆಂಕಟವರದಾರ್ಯರು
ಮಾರಜನಕ ಮುರಾರಿ ಕಾಣಮ್ಮ ಪ ಅರುಣ ಚರಣ ಕಳದಿರವು ಅಂಕುಶಧ್ವಜ ಅರವಿಂದ ರೇಖಾಂಕ ಪುರುಷನಾರಮ್ಮ ಉರಗಶಯನ ಕರಸರೋಜ ಮಧ್ಯದೊಳಿಟ್ಟು ಸುರರಿಂದರ್ಚನೆಗೊಂಬ ಹರಿಯು ಕಾಣಮ್ಮ 1 ಪೊಳೆವ ಉದಯ ಶಶಿ ಬೆಳಗು ಸೋಲಿಪ ನಾಖಾ ವಳಿಯಿಂದ ಒಪ್ಪುವ ಚಲುವನಾರಮ್ಮಾ ಕುಲಿಶ ಪಾಣಿಗೆ ಒಲಿದಿಳೆಯೊಳು ಬಂದು ಖಂ ಜಲಧಿ ಕಾಣಮ್ಮ 2 ಅಂದುಗೆ ಗೆಜ್ಜೆ ಕಡಗ ಪೊನ್ನೂಪುರ ತೊಡಂದ ಬರುತಿಹ ಪ್ರೌಢನಾರಮ್ಮ ದೃಢ ಭಕ್ತರೆಡೆಯಲಿ ಬಿಡದೆ ನಲಿಯುತಲಿಪ್ಪ ಮೃಡಸುರಪಾದ್ಯರ ಪತಿಯು ಕಾಣಮ್ಮ 3 ಕರಿಗಲ್ಲಿನಂತೆ ಸುಂದರ ಜಂಘೆ ಜಾನುಗ ಳೆರಡು ತರಣಿಯಂತೆ ಇವನಾರಮ್ಮಾ ಪರಮೇಷ್ಠಿ ಪ್ರಳಯದಿ ಸಿರಿಯಿಂದ ನುತಿಗೊಂಬ ಪರಮ ಪುರುಷ ನರಹರಿಯು ಕಾಣಮ್ಮ 4 ಇಭವರಕರದಂತೆ ಉಭಯ ಊರು ಕಟಿ ಪ್ರಭ ವಸನವನುಟ್ಟ ಸುಭಗನಾರಮ್ಮಾ ರಭಸದಿಂದಲಿ ಕಂಭ ಬಿಗಿದು ಪ್ರಹ್ಲಾದಗೆ ಅಭಯವಿತ್ತ ಸುರಪ್ರಭುವು ಕಾಣಮ್ಮ 5 ವಲಿವಿೂಕ ಬಿಲದಂತೆ ಸುಳಿನಾಭಿ ಜಠರತ್ರಿ ವಳಿಗಳಿಂದಲಿ ಬಲು ಪೊಳೆವನಾರಮ್ಮಾ ನಳಿನೋದ್ಭವನ ಪುತ್ರಾಖಿಳ ಲೋಕ ತಾಳಿದಾ ಹಾಲಾಹಲಕಂಠನ ಗೆಳೆಯ ಕಾಣಮ್ಮಾ 6 ಕೌಸ್ತುಭ ವೈಜಯಂತೀ ಸರ ಸಿರಿಯಿಂದಲೊಪ್ಪೋ ನಿರಯನಾರಮ್ಮ ವರಭೃಗುಮುನಿಪನ ಸ್ಪರುಶವನು ತಾಳ್ದ ಕರುಣ ಸಾಗರ ಸಿರಿಧರನು ಕಾಣಮ್ಮ 7 ಅರಿ ಶಂಖ ಸತತ ಪಿಡಿದಿಹ ಚತುರನಾರಮ್ಮ ದಿತಿಜರ ಸದೆದು ದೇವತೆಗಳ ಸಲಹಿದ ಚತುರಾಸ್ಯ ಕೃತಿದೇವಿ ಪತಿಯು ಕಾಣಮ್ಮ 8 ಧರದಿಂದೊಪ್ಪುತಲಿಹ ಪಿರಿಯ ನಾರಮ್ಮಾ ಸಿರಿಯೊಡನೆ ಕ್ಷೀರಶರಧಿ ಯೊಳೊರಗಿಪ್ಪ ವಜ್ರ ಪಂಜರವನು ಕಾಣಮ್ಮ 9 ಸುರಕಪೋಲ ನಾಸ ಸರಸಿಜನಯನ ಪು ಕುಂಡಲಿ ಯುಗಧರನು ಆರಮ್ಮಾ ಶರಧಿ ಮಥನದಲ್ಲಿ ತರುಣಿಯಾಗಿ ಅಸು ರರ ಮೋಹಿಸಿದ ಅಜರನು ಕಾಣಮ್ಮ10 ಬಾಲಶಶಿಯಂತೆ ಫಾಲಕಸ್ತೂರಿನಾಮ ಮೌಳಿ ಸುಳಿಕೇಶ ಬಾಲನಾರಮ್ಮಾ ಮೂಲೇಶನಾದ ಜಗನ್ನಾಥ ವಿಠ್ಠಲ ಮೂರ್ಲೋಕಾಧಿಪ ಶ್ರೀ ಗೋಪಾಲ ಕಾಣಮ್ಮ11
--------------
ಜಗನ್ನಾಥದಾಸರು
ಮುರಳಿಯ ಧ್ವನಿಯು ಕರೆಯುತಲಿರುವುದು ಪೋಗುವ ಬಾರೆ ಸಖಿ ಪ ಪೋಗುವ ಬಾರೆ ಸಖಿ ಬೇಸರ ನೀಗುವ ಬಾರೆ ಸಖಿ ವಿಧ ವಿಧ ಭೋಗವ ಪಡುವ ಸಖೀ ಅ.ಪ ವರವಂಶದಿ ಜನಿಸಿದ ಭಾಗ್ಯವ ಈ ಮುರಳಿಯು ತಂದಿತು ಕೇಳೆ ಸಖಿ ಪರಮ ಪ್ರೇಯಸಿ ಇವಳಂತರಂಗವ ಮರೆ ಮಾಚುವ ರಸಿಕಾಗ್ರಣಿ ಕೃಷ್ಣನ 1 ಕ್ಷೀರಶರಧಿತನಯಳ ವೈಭವ ಈ ನೀರಸಳಿಗೆ ಇದು ಅಚ್ಚರಿಯು ಕೋರಿ ಚುಂಬಿಸುವ ಕೃಷ್ಣನಧರ ಸುಧೆ ಧಾರೆಯೊ ಸೂರೆಯೊ ಶೌರಿಯ 2 ಹುಲ್ಲೆ ಹುಲಿಯ ಭಯ ತೊರೆದು ಕೇಳುತಿದೆ ಕಲ್ಲು ಕರಗಿ ಮೃದುವಾಗಿರುವಂತೆ ನಲ್ಲೆ ಎನ್ನ ಹೃದಯವು ಕರಗಿತು ನಾ ನಿಲ್ಲಿ ಎನ್ನ ಮನವಲ್ಲಿ ಪ್ರಸನ್ನನ 3
--------------
ವಿದ್ಯಾಪ್ರಸನ್ನತೀರ್ಥರು
ಯತಿಗಳು ಶ್ರೀಜಯತೀರ್ಥರು ಕರುಣಿಸೊ ಜಯರಾಯಾ ಗುರುವರ್ಯ ಚರಣವೆ ಗತಿಯಯ್ಯ ಹೇ ಜಿಯಾ ಪ ರಘುನಾಥನ ಪುತ್ರ ಪವಿತ್ರ ರಾಘವನ ಪ್ರೀತಪ್ರಾತ್ರ ಚರಿತ್ರ ಮಘವನಾ ನೀ ನಘದೂರ ಶ್ರೀ ರಘುರಾಮನ ಕಿಂಕರನ ಅಮೋಘ ಸೇವಕನೊ 1 ಕುಕರ್ವಿಣಿಯ ತೀರಾ ಘೋರಕುವಾದಿಗಳ ಕು ಲಕುಠಾರ ಗಂಭೀರ ಸಕಲಶಾಸ್ತ್ರಸತ್ಸಾರ ಟೀಕಕರ ಕುಕವಿಶೃಗಾಲಕುಲಕಾಲಭಯಂಕರ 2 ಎರಗೋಳಾದ್ರಿಯೊಳು ಗುಹೆಯೊಳು ನಿರುತ ಪ್ರವಚನಗಳು ನಿತ್ಯದೊಳು ಮರುತಮತಾಂಬುಧಿಚಂದಿರ ಸುಂದರ ವರಸುಜ್ಞಾನಮಣಿಕಿರಣವ ತೋರಿದೆ 3 ಗುರು ಮಧ್ವಮುನಿ ತತ್ತ್ವಗ್ರಂಥದ ಕ್ಷೀರಶರಧಿಗೆ ಮಂಥಾ ವುನ್ನಂಥಾ ಮರುತನನುಗ್ರಹ ಪ್ರಗ್ರಹದಿಂದಲಿ ವರಮಥನದಿ ಇತ್ತೆ ಅಮೋಘವಸ್ತುಗಳೆಲ್ಲಾ4 ಉತ್ತಮ ಗ್ರಂಥವನಧೀ ಮಥನದಿ ಉತ್ತಮ ವಸ್ತುಗಳನಿತ್ತೆಯೊ ತತ್ತ್ವಪ್ರಕಾಶಿಕಾ ಮಹಾಲಕುಮಿಯು ಚಂದಿರನೇ ಪ್ರಮೇಯದೀಪಿಕಾ ಸುಧೆಯೇ ನ್ಯಾಯಸುಧಾಗ್ರಂಥ ಶ್ರೀ ಕೌಸ್ತುಭದಂತಿಹ ನ್ಯಾಯದೀಪಿಕಾ 5 ದುರುಳ ಮಾಯಾಖಂಡ ನಾಯುಧವೂ ಸರ್ವಜೀಯನೆ ಐರಾವತದಂತೆ ಋ ಗ್ಭಾಷ್ಯಟೀಕಾ ನ್ಯಾಯವಿವರಣವು ಉಚ್ಛೈಶ್ರವಸ್ಸು 6 ಕರ್ಮನಿರ್ಣಯ ಟೀಕಾ ವಜ್ರಾಯುಧ ಆ ಮಹಾಪಾರಿಜಾತ ವಿಖ್ಯಾತಾ ಶ್ರೀಮದ್ವಿಷ್ಣು ತತ್ತ್ವ ನಿರ್ಣಯ ಟೀಕೆಯು ಕಲ್ಪವು ಉಪನಿಷತ್ ಭಾಷ್ಯ ಟೀಕೆಯು 7 ಈಶಾವಾಸ್ಯ ಭಾಷ್ಯ ಟೀಕಾ ಸಂತಾನವೆಂಬೋ ಮಹಾವೃಕ್ಷಾ ಪ್ರ ಬಿಸಜ ಮಂದಾರ ಪ್ರಮಾಣ ಪದ್ಧÀ್ದತಿ ಹರಿಚಂದನಕೆ ಸಮನಾದ ವಾದಾವಳಿ 8 ಪಾಕಶಾಸನಾಂಶಾ ಕರುಣಿಸು ಶ್ರೀಕರಪದಪಾಂಸ ಯತೀಶಾ ನಾರ ಪತಿಯೆ ಶ್ರೀಕಾಗಿನೀ ತೀರದಿ ಏಕಾಂತದಿ ನಿಂದೆ ಲೋಕ ವಂದಿತ ದೇವಾ 9 ಮಂದಭಾಗ್ಯಜನರಾ ಪರಮಾ ನಂದದಿಂದಲಿ ನೋಡಿ ದಯಮಾಡಿ ತಂದೆಯಂದದಿ ಕಾಯ್ದಾನಂದವೀವೆ ನಿತ್ಯಾ10 ಪರಮಪಾತಕಿ ನಾನು ಗುರುವೆ ತವ ಪಾ ದ ರಕ್ಷಕವಚವ ತೊಡಿಸೊ ಉಳಿಸೋ ನಿರುತ ಶರಣರ ಕಾಯ್ವ ಶ್ರೀ ವೆಂಕಟೇಶನ ಪ್ರೀಯಾಉರಗಾದ್ರಿವಾಸವಿಠಲನ ದಾಸಾ 11
--------------
ಉರಗಾದ್ರಿವಾಸವಿಠಲದಾಸರು
ಲಕ್ಷ್ಮೀ ಸ್ತುತಿಗಳು ಆರೋಗಿಸು ತಾಯೇ ಮೋದದಿ ಕ್ಷೀರಾಂಬುಧಿ ತನಯೆ ಪ. ಸಾರಸನಯನೆ ಮದವಾರಣಗಮನೆ ಸಾರಿ ಚೀಡುವೆ ಸರಾಗದೊಳೀಕ್ಷಿಸು ಅ.ಪ. ಉಪ್ಪು ಉಪ್ಪಿನಕಾಯಿಕೋಸುಂಬರಿ ಹಪ್ಪಳ ಸಂಡಿಗೆಯ ತಪ್ಪದೆ ತಂದೊಪ್ಪಿಸುತಿಹೆ ಎನ್ನಪ್ಪನೊಡನೊಪ್ಪದಿ ವ ುಂಡಿಸಿ 1 ಚಕ್ಕುಲಿ ಕರಜಿಕಾಯಿ ಅತಿರಸ ಸಕ್ಕರೆ ಹೋಳಿಗೆಯಂ ನಲಿಯುತ 2 ದಧಿ ನವನೀತ ಘೃತ ಮಧುಸಾರವೆನಿಪ ಪರಮಾನ್ನ ಕ್ಷೀರಶರಧಿಸುತೆ ನೀ ನೀರಸ ಸಹಿತಾಪಾರ ಕೃಪಾಪಾಯದೊಳೀಕ್ಷಿಸಿ3 ಸವಿನೋಡುತೆ ನಲಿದು4 ನಿಗಮಾಗಮ ವಿನುತೇ ನಮಿಸುವೆ ನಗಧರ ಸುಪ್ರೀತೆ ಗುಣಗಳ ಬಗೆಗೊಳಿಸುತ್ತಲಿ 5
--------------
ನಂಜನಗೂಡು ತಿರುಮಲಾಂಬಾ
ಕಂಡೆ ಕರುಣಿಗಳೊಳು ಅಗ್ರೇಸರರಾದಪಂಡಿತರಾಮಾರ್ಯರಸಿರಿವೆಂಕಟನರಸಿಂಹಾಚಾರ್ಯರೆಂಬುವರ ಕ್ಷೀರಶರಧಿಯಲ್ಲಿಚರಣವೆಂದರೆ ಇವರ ಚರಣವೆ ಸುಖಕರ ಹರಿಯಾತ್ರೆ ಪರವಾಗಿನ್ನುಏಸುಜನ್ಮದಸುಕೃತಎನಗಿವರ ಕರುಣ ಉಪದೇಶ ಸ್ವಪ್ನದಿ ಆದುದಾ
--------------
ಗೋಪಾಲದಾಸರು