ಮಾರ ಜನಕನ ನೀರೆ ಪ
ಕರವ ಹರುಷದಿಂದಾ ಅ.ಪ
ಕ್ಷೀರವಾರ್ಧಿತನಯೆಯೆಂದು ಸಾರಸಾಕ್ಷಿಯರು ಬಂದು
ಕೋರಿ ಭಜಿಸುವರು ನಿನ್ನ ಅಪಾರ ಮಹಿಮೆಗಳನು 1
ಸುತ್ತ ಜ್ಯೋತಿಗಳ ಬೆಳಗಿ ಮುತ್ತೈದೆಯರೆಲ್ಲ ಕೂಡಿ
ಮುತ್ತು ಮಾಣಿಕ ಪೀಠವಿರಿಸಿ ಭಕ್ತಿಯಿಂದ ಪ್ರಾರ್ಥಿಸುವರು 2
ಜನಕರಾಯನ ಕುಮಾರಿ ಸನಕಾದಿಯೋಗಿ ಜನಾಧಾರೀ
ದಿನಕರ ಕೋಟಿ ಪ್ರಕಾಶೆ ದಿವ್ಯಮಣಿಮಯ ಭೂಷೆ 3
ಮಾನಸಾಬ್ಜ ಮಂಟಪದಲಿ ಧ್ಯಾನವೆಂಬೊ ಪೀಠದಲ್ಲಿ
ಜ್ಞಾನಿಶಕ್ತಿಗಳು ಪೊಗಳೆ ಸಾನುರಾಗದಿಂದಲೀಗಾ 4
ನಿತ್ಯಸಂಪತ್ಪ್ರದಾಯಿನಿ ಭೃತ್ಯವತ್ಸಲೆ ಜನನೀಸತ್ಯಸಂಕಲ್ಪ ಗುರುರಾಮ ವಿಠಲನ ಪಟ್ಟದರಾಣಿ 5