ಜಗದಯ್ಯ ನಿನ್ನಪಾದ ಜಗದಖಿಲ ಜನರು
ಬಗೆ ತಿಳಿಯಲಾರರು ಸುಗುಣಿರೊಂದಲ್ಲದೆ ಪ
ಜಾರೆ ಸೇರುವಳೆ ಸುವಿಚ್ಯಾರದ ಮಾತುಗಳ
ಜಾರ ಸೇರುವನೆ ಜ್ಞಾನಸಾರ ಬೋಧಾಮೃತವ
ಚೋರ ಸೇರುವನೆ ಇನತೋರಿಸಲು ಕಿರಣಗಳ
ಕ್ಷೀರಮಂ ಸೇರುವನೆ ಸುರಪಾನಿಗೀಯಲು 1
ವಿಧವೆಗೆ ಸೇರುವುದೆ ಒದಗುವವರ ಬಸಿರು
ಮುದುಕನಿಗೆ ಸೇರುವುದೆ ಹದದ್ಹೆಣ್ಣಿನೊನಪು
ಅಧಮರಿಗೆ ಸೇರುವುದೆ ಸದಮಲಿನ ಕಥಾಶ್ರವಣ
ಬುಧಜನಕೆ ಸೇರುವುದೆ ಕದನಿಕರ ನೆರೆಯು 2
ಜೀನನಿಗೆ ಸೇರುವುದೆ ದಾನಿಗಳ ಗಾಂಭೀರ್ಯ
ಹೀನನಿಗೆ ಸೇರುವುದೆ ಜಾಣರೊಡನುಡಿಯು
ಸುಕೃತ ಕಾಣದ ಪಾಪಿಗೆ ಮಮ
ಪ್ರಾಣ ಶ್ರೀರಾಮ ನಿನ್ನ ಧ್ಯಾನ ಸೇರುವುದೆ 3