ಮುತ್ತು ಬಂದಿದೆ-ದಿವ್ಯ ಮತ್ತು ಕೊಳ್ಳಿರೋ ಪ
ಮುತ್ತು ಬಂದಿಹುದೀಗನೀವೆತ್ತಿರೊಳ್ಳಿರೆಲ್ಲಬಂದು
ಉತ್ತಮವ್ಯಾಘ್ರಾದ್ರಿಪುರುಷೋತ್ತಮನೆಂಬುವ ದಿವ್ಯ 1
ಲೆಕ್ಕವಿಲ್ಲದ ಹಣವಿತ್ತರು ಸಿಕ್ಕದದುರ್ಲಭ ಮುತ್ತು
ರೊಕ್ಕವಿಲ್ಲದೆ ಭಕ್ತರಿಗೆ ಪುಕ್ಕಟೆಯಲಿ ಸಿಕ್ಕುವಂಥ 2
ಧನವಂತಗೆ ದೊರಕುವುದಲ್ಲ ಜನರ ಕೈಗೆ ಸಿಕ್ಕುವದಲ್ಲ
ಮನದಲ್ಲಿ ಧ್ಯಾನಮಾಳ್ವಮುನಿಗಳ ಸ್ವಾಧೀನವಾದ 3
ಕ್ಷೀರಪಾರಾವಾರದಲ್ಲಿ-ತೋರಿ ಮೆರೆವ ಮುತ್ತು
ಶ್ರೀರಮಾಮನೋಹರನುದಾರ ವರದ ವಿಠಲನೆಂಬ 4