ಮುತ್ತು ಬಂತಿದೆ ದಿವ್ಯ ಮುತ್ತು ಕೊಳ್ಳಿರೋ ಪ
ಮುತ್ತು ಬಂದಿಹುದೀಗ ನೀವೇತ್ತಿಕೊಳ್ಳಿರೆಲ್ಲ ಬಂದು
ಉತ್ತಮ ವ್ಯಾಘ್ರಾದ್ರಿ ಪುರುಷೋತ್ತಮನೆಂಬುವ ದಿವ್ಯ 1
ಲೆಕ್ಕವಿಲ್ಲದ ಹಣವಿತ್ತರು ಸಿಕ್ಕದ ದುರ್ಲಭ ಮುತ್ತು
ರೊಕ್ಕವಿಲ್ಲದೆ ಭಕ್ತರಿಗೆ ಪುಕ್ಕಟೆಯಲಿ ಸಿಕ್ಕುವಂಥ 2
ಧನವಂತರಿಗೆ ದೊರಕುವದಲ್ಲ ಜನರ ಕೈಗೆ ಸಿಕ್ಕುವದ್ಲ
ಮನದಲ್ಲಿ ಧ್ಯಾನಮಳ್ಪ ಮುನಿಗಳ ಸ್ವಾಧೀನವಾದ 3
ಕ್ಷೀರಪಾರಾವಾರದಲ್ಲಿ ತೋರಿ ಮೆರೆವ ಮುತ್ತು
ಶ್ರೀರಮಾ ಮನೋಹರನುದಾರ ವರದ ವಿಠಲನೆಂಬ 4