ನಡೆದು ಬಾರೆ ಹರಿಯ ರಮಣಿ
ನಡಮುಡೀಯ ಹಾಸುವೆ
ನಡಮುಡೀಯ ಹಾಸಿ ನಿನಗೆ
ಕರವ ಮುಗಿದು ಬೇಡುವೇ ಪ.
ಚರಣಕೆ ಪಾದ್ಯವನಿತ್ತು
ವರ ಕ್ಷೀರದಧಿ ಘೃತ
ವರ ಮಧು ಶರ್ಕರಾದಿಂ
ಹರುಷದುಡಿಗೆ ತೊಡಿಸುವೆ 1
ನಿನ್ನನರಿಶಿನ ಕುಂಕುಮ
ಚನ್ನ ಗಂಧ ಪುಷ್ಪದಿಂದ
ಸಂಪನ್ನೆ ನಿನ್ನ ಪೂಜಿಪೆ 2
ಘನ್ನ ನೈವೇದ್ಯವರ್ಪಿಸಿ
ರನ್ನದಾರುತಿ ಬೆಳಗುವೆ
ಇನ್ನು ಎನ್ನ ತಪ್ಪ ಮನ್ನಿಸೆ
ನಿನ್ನ ರಮಣ ಶ್ರೀ ಶ್ರೀನಿವಾಸನರಸಿಯೇ
ಇನ್ನು ತೋರಲು ಬೇಗದಿ 3