ಜೋ ಜೋ ಸುಖಸಾರ ಪ
ಜೋ ಜೋ ಜೋಜೋ ದೋಷ ವಿದೂರ ಅ.ಪ
ಸುಮ್ಮನೆ ಸಾಗೆಲೊ ಮುಂದೆ
ನಮ್ಮ ಮಗುವು ತಾ ಮಲಗಿಹನಿಂದು
ನಿಮ್ಮ ಮಂದಿಗೆ ಈ ಶಿಶುವು
ಬೊಮ್ಮನು ಫಣಿಯಲಿ ಬರೆದಿಹನೇನೊ 1
ನಿದ್ರೆಯ ಸುದ್ದಿಯ ಕಾಣದ ನಾನು
ನಿದ್ರೆಯ ಮಾಡುವ ಸಡಗರವೇನು
ಮುದ್ದು ಮಾತುಗಳಲಿ ಫಲವೇನು
ನಿದ್ರೆ ನಾ ಮಾಡಲು ಎದ್ದಿರುವರ್ಯಾರು2
ನಿದ್ರೆ ಮಾಡುವುದೆಂತು
ಬೇಕಾದ ಜೋಗುಳ ಪಾಡುವೇನೊ
ಏಕಮನದಿ ನೀ ಪ್ರಾಜ್ಞನ ಕೂಡೊ
ದಧಿ ಕ್ಷೀರಗಳು
ನಾಕು ನಿಮಿಷದಲಿ ಜೀರ್ಣವಾಗುವುವೊ 3
ಕಣ್ಣನು ಮುಚ್ಚಿದೆ ಪ್ರಾಜ್ಞ ನಾನು
ಚನ್ನಾಗಿ ತಬ್ಬಿದೆ ನೋಡಮ್ಮ
ಎನ್ನಯ ಕುಕ್ಷಿಯು ಬರಿದಾಯ್ತು
ಇನ್ನು ಪ್ರಸನ್ನಳಾಗುಣಬಡಿಸಮ್ಮ 4