ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೇಕಾದವನೇ ಹರಿದಾಸ ಪ ಏಕಾದಶಿ ಉಪವಾಸ ಮಾಡಿದರೆ ನಾಕಿಗಳಿಗೆ ಆಗದು ವಿಶ್ವಾಸ ಅ.ಪ ಏಕಾದಶಿಯೆ ಯೋಗಸಿದ್ಧಿ ಏಕಾದಶಿಯೆ ಭೋಗಪ್ರಾಪ್ತಿ ಏಕಾದಶಿಯಲಿ ಎರೆಡು ಕಾರ್ಯಲ- ಕ್ಷೀಕಾಂತನ ಭಜನೆ ರಾತ್ರಿ ಜಾಗರವು 1 ಉಪವಾಸ ವ್ರತವೆ ವ್ರತವು ಜಪಶೀಲರ ತಪವೇ ಸುಖವು ಅಪರಿಮಿತವಾದ ಸತ್ಕರ್ಮಗಳೆಲ್ಲಾ ಚಪಲದಿ ಓಡುವುದುಪವಾಸದ ಹಿಂದೆ 2 ಅನ್ನಸಾರು ಕಾಯಿಪಲ್ಯ ಒಬ್ಬಟ್ಟು ತಿನ್ನುವುದೇ ಪ್ರತ್ಯಕ್ಷ ನರಕವು 3 ಘನಮೋದದಲಿ ಪವನಜನಾದ ಭೀ- ಮನೇ ಸ್ವೀಕರಿಸಿರುವನು ಪೂರ್ವದೊಳು 4 ವಿಕಳ ಬುದ್ಧಿಯಾಗದೆ ಸಮಯದಿ ತನ್ನ ಸುಕುಮಾರನ ಕಡಿಯಲೆತ್ನಿಸಿದನು 5 ನಿರಾಹಾರವು ನಡೆಯಲುತ್ತಮವು ಎರಡನೇಯದು ಮೇಲ್ಪೇಳಿದುದು ಪರಿಪರಿ ಅನ್ನೋತ್ಸವದಿ ಕೆಡುವನು 6 ಮಾನವ ಕರಾಮಲಕ ಮುಕ್ತಿಯಲಿ ಸುಖಪಡುವನು 7
--------------
ಗುರುರಾಮವಿಠಲ
ಸುಮ್ಮನಿರಬಾರದೆ ಮನವೆ ನೀನು ಸುಮ್ಮನಿರಬಾರದೆ ಹಮ್ಮುಅಹಂಕಾರ ಹೆಮ್ಮೆಗಳೆದು ಪನ್ನಗಾದ್ರಿಯ ಧ್ಯಾನಮಾಡುತ್ತ ಪ ಚಿಂತೆಯನು ತೊರೆದು ಮನವೆ ಲಕ್ಷೀಕಾಂತನೊಳು ಬೆರೆದು ಅಂತರಂಗದಿ ಕಂತುಜನಕನ ಸಂತತವಿಟ್ಟು ಪಂತವನು ಬಿಟ್ಟು 1 ಆಸೆಯನು ತೊರೆದು ಮನವೆ ನೀ ಶ್ರೀಶನೋಳು ಬೆರೆದು ಘಾಸಿಯಾಗದೆ ವಾಸುದೇವನ ದಾಸನಾಗಿ ಉಲ್ಲಾಸದಿಂದಲೆ 2 ಯಾರು ಬೈದರೇನು ಈ ದೇಹ ಇನ್ಯಾರು ಕೊಯ್ದರೇನು ಘೋರಮಾಯೆ ದೂರಮಾಡಿ ನೀ ವಾರಿಜಾಕ್ಷನ ಪಾದವನು ಸೇರಿ 3 ಎಲ್ಲರಲ್ಲಿ ವಾಸುದೇವನಿಲ್ಲದಿಲ್ಲೆನುತ ಹುಲ್ಲು ಹುಳುವಿನೊಳು ಸೊಲ್ಲು ಪಾಡುತ್ತ 4 ಸೃಷ್ಟಿಯೊಳಗಧಿಕ ಮೂಡಲಗಿರಿ ಬೆಟ್ಟದೊಳಗಿರುವ ದಿಟ್ಟವೆಂಕಟನ ಮುಟ್ಟಿ ಭಜಿಸಿ ನೀ ಮಾಡಿದಷ್ಟು ಪಾಪವ ನಷ್ಟ ಮಾಡುತ್ತ 5
--------------
ಯದುಗಿರಿಯಮ್ಮ