ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಕ್ಷ್ಮೀ ದೇವಿ ಕಾದಿರುವಳು ರುಕ್ಮಿಣಿ ಕೃಷ್ಣ ಬರುವನೆಂದು ಪ. ಕರವ ಪಿಡಿವನೆಂದು ಅ.ಪ. ವಿಪ್ರನ್ನ ಕಳುಹಿರುವೆನು ಕ್ಷಿಪ್ರದೊಳು ಗುಡಿಯೊಳಿಹೆನು ಅಪ್ರಮೇಯ ನಿನ್ನಡಿಗಳನ್ನು ಸುಪ್ರಕಾಶ ನಂಬಿರುವೆನೆಂದು 1 ಶಿಶುಪಾಲನೊಲ್ಲೆನೆಂದು ವಸುಧೀಶ ನೀನೆ ಗತಿಯೆಂದು ಹಸುಳೇಯ ಸಲಹು ಎಂದು ಬೆಸಸಿಹೆನು ಪತ್ರವೆಂದು 2 ರಥವೇರಿ ಬರುತಲಿಹನೊ ಪಥದೊಳು ಕಾದಿರುವನೊ ರತಿಪತೀ ಪಿತನ ಪದವ ಅತಿಶಯದಲಿ ಕಾಣುವ ತವಕದಿ 3 ಶಂಕಾತುರಂಗಳಿಂದ ಶಂಕರೀಯಪೂಜೆಗೈದು ಕಿಂಕಿಣಿಯ ನಾದದಿಂದ ಶಂಕರಾದಿವಂದ್ಯ ಬರುವ ಪಥದಿ ಬಂದು 4 ಬಂದಾನೋ ಬಾರನೋ ಎನುತಾ ಇಂದಿರೆಯ ಅರಸನ್ಹೊರತು ಪೊಂದಲಾರೆನನ್ಯರನೆನುತ ಸುಂದರೀಮಣಿ ಕೃಷ್ಣನಾಗಮ ನೋಡುತ 5 ದ್ವಾರಕಿಯಾ ನಾಥ ಬಂದು ಪಾರುಗಾಣಿಸುವನೆಂದು ಚಾರುಕರದೊಳೆತ್ತಿ ಎನ್ನ ದ್ವಾರಕೆಗೊಯ್ವ ಶ್ರೀ ಶ್ರೀನಿವಾಸನೆಂದು 6
--------------
ಸರಸ್ವತಿ ಬಾಯಿ
ಶೌರಿ ಅಡಿಗಳನು ಧ್ಯಾನಿಸುವ ಮತಿ ಕೋರಿ ಪ ಮೃಡ ಪುರಂದರರೊಡೆಯ ಶ್ರೀಹರಿ ಕಡಲಶಯನನ ಬಿಡದೆ ಭಜಿಪರ ಸಡಗರದಿ ಸನ್ಮಾರ್ಗ ತೋರುವ ಬಡವರ ಆಧಾರಿ ನರಹರಿ ಅ.ಪ ನಿನ್ನ ದಾಸರ ಸಂಗದೊಳಿರಿಸೆನ್ನ ಬೇಡುವೆನು ನಿನ್ನ ನಿನ್ನ ನಾಮಸ್ಮರಣೆ ಅನುದಿನ ನಿನ್ನ ಚರಣವ ಭಜಿಪ ಭಕ್ತರನು ಕೊಂಡಾಡುವಂಥ ಅ- ಚ್ಛಿನ್ನ ಭಕ್ತರ ಕೂಟದಲಿರಿಸೆನ್ನ ಸನ್ನುತಾಂಗನೆ ಸರ್ವವ್ಯಾಪಕ ನಿನ್ನ ಮೊರೆ ಹೊಕ್ಕಿರುವೆ ಪಾಲಿಸು ಪನ್ನಗಾದ್ರಿವಾಸ ವೆಂಕಟ ಆ- ಪನ್ನ ಜನರನು ಪೊರೆವ ಕರುಣಿಯೆ 1 ಗಜ ನೀ ಕೇಳಿ ತ್ವರದೊಳು ಬಿಡದೆ ರಕ್ಷಿಸಿ ಪೊರೆದ ಕರುಣಾಳು ಬಡವ ವಿಪ್ರಗೆ ಒಲಿದೆ ಕ್ಷಿಪ್ರದೊಳು ಸೌಭಾಗ್ಯವಿತ್ತೆ ಹುಡುಗ ತಪವಿರೆ ಅಂದು ಅಡವಿಯೊಳು ತಡೆಯದಲೆ ನೀನೊಲಿದೆ ಭಕುತಿಗೆ ಒಡೆಯರೈವರ ಮಡದಿ ಮೊರೆ ಕೇಳಿ ಬಿಡದೆ ಅಕ್ಷಯವೆಂದು ಸಲಹಿದೆ ದೃಢ ಭಕುತರನು ಬಿಡದೆ ಪೊರೆಯುವೆ 2 ರಂಗನಾಥ ನಿನ್ನಂಘ್ರಿ ಕಮಲಗಳ ಭಜಿಸುವವರ ಭವ ಹಿಂಗಿಸುತ ಪೊರೆದಂಥ ಚರಿತೆಗಳ ಸಂಗರಹಿತನೆ ಬಿಡಿಸು ಬಂಧಗಳ ಸಲಹೆಂದು ಪ್ರಾರ್ಥಿಪೆ ಅಂಗಜನಪಿತ ತರಿದೆನ್ನಪರಾಧ ಮಂಗಳಾಂಗ ಪ್ಲವಂಗ ವತ್ಸರ ಗಂಗಾಜನಕ ನಿನ್ನಂಘ್ರಿ ಭಜಕರ ಹಿಂಗದಲೆ ಪಾಲಿಸುತ ಪೊರೆ ಕೃಪಾ-ಪಾಂಗ ಕಮಲನಾಭ ವಿಠ್ಠಲನೆ 3
--------------
ನಿಡಗುರುಕಿ ಜೀವೂಬಾಯಿ