ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವಬಂಧುಗಳೆಲೋ ಜೀವ ವಿಚಾರಿಸೋ ಕಾವ ಸಮರ್ಥದೇವ ಹರಿಯಲ್ಲದೆ ಪ ಮಾಯಮೋಹವ ನೀಗಿ ಕಾಯಶುದ್ಧಲಿ ಮನ ಪಾದ ದಿವ್ಯಭಕ್ತಿಲಿ ಭಜಿಸೊ ಅ.ಪ ಜನನಿ ಬಂದಹಳೆಂಬೆ ಜನನಿರ್ದಳಾಧ್ರುವಗೆ ಜನಕನ ತೊಡೆಯಿಂದ ಕನಿಕರಿಲ್ಲದೆ ಮಲ- ಜನನಿ ನೂಕಲು ಕಂದ ವನಕ್ಹೊರಟು ಪೋಗಲು ಜನನಿ ಸಲಹಿದಳೆನೋ ವನಜಾಕ್ಷನಲ್ಲದೆ 1 ಸತಿಹಿತದವಳೆನುವೆ ಸತಿಯಿರ್ದು ಸುಗ್ರೀವ ಖತಿಪಟ್ಟಾಗ್ರಜನಿಂ ವ್ಯಥೆಯಿಂದುಸುರ ಬಿಡಲು ಸತಿಬಂದು ಪತಿಯನ್ನು ಹಿತದಿ ಕರೆದೊಯ್ದಳೆ ಹಿತದ ಬಂಧುಗಳಿವರೇ ಕ್ಷಿತಿಪತಿಯಲ್ಲದೆ 2 ಸುತರ ಬಲವಿಹುದೆನುವೆ ಸುತರತಿ ಬಲಾನ್ವಿತರು ಜಿತಮಾರನಿಗಿರೆ ಉರಿಹಸ್ತ ವರವಿತ್ತು ಗತಿದೋರದಿರುತಿರೆ ಸುತರು ನೆರವಾದರೆ ಗತಿ ರಮಾಪತಿಯೆನೆ ಹಿತದಿಂ ಮೊರೆಕಾಯ್ದ 3 ಬಂಧುಗಳತಿಶಯದ ವೃಂದನೆರೆದು ಇರ ಲಂದು ಕರಿಮಕರಿಕೆಯಿಂದ ಬಂಧನ ಪಡಲ ವಂದು ಬೆಂಬಲಗೊಟ್ಟು ಬಂಧನವ ಬಿಡಿಸಿದುವೆ ತಂದೆಯಾ ಶ್ರಿ ಮುಕ್ಕುಂದನಲ್ಲದಲೆ 4 ಹರಿಯೆ ಪರದೈವವೋ ಹರಿಯೆ ಪರಲೋಕವು ಹರಿಯೇ ಸ್ಥಿರಸುಖವು ಹರಿಯೆ ವರ ಮುಕ್ತಿಯೋ ಹರಿಯೆಂದು ಅಜಮಿಳ ನರಕಯಾತನೆ ಗೆದ್ದ ಪಾದ 5
--------------
ರಾಮದಾಸರು
ಕಾಲ ವ್ಯರ್ಥ ಹರಿಯನೇಕ ಗುಣಗಳ ಪೊಗಳಿ ಪುರುಷಾರ್ಥ ಪ ಸತಿಸುತರ ನೆಚ್ಚಿ ಕೆಡಬ್ಯಾಡಾ ನಿನ್ನ ಸಂ- ಗತಿಲೇ ಬಾಹರು ಇದನು ತಿಳಿಯೋ ಕ್ಷಿತಿಪತಿಯ ನೆನೆಯದಿರಬ್ಯಾಡಾ ಲಕ್ಷ್ಮೀ ಪತಿಯೊಬ್ಬನೇ ಗತಿ ಎಂದು ತಿಳಿ ಗಾಢಾ 1 ಇಂದೆ ಇದ್ದವ ನಾಳೆಗಿಲ್ಲಾ ಅದ ರಿಂದ ಜಗದೀಶನನು ಹಿಂದೆ ಕಳೆದ ಆಯು ಬರೋದಿಲ್ಲಾ ಇನ್ನು ಮುಂದೆ ನರಜನ್ಮ ಬರುವುದು ಭರವಸಲ್ಲಾ 2 ಸತ್ತ ನಂತರ ಬಳಗ ನಿನ್ನ ತೀವ್ರ ಹೊತ್ತು ಹೊರಗ್ಹಾಕಿರೆನ್ನುವರೋ ತಿಳಿಯನ್ನಾ ಮಿಥ್ಯ ಸುಖಕೊಳಗಾಗದಿನ್ನಾ ಏಕ ಚಿತ್ತದಿಂ ಭಜಿಸೋ ಹನುಮೇಶ ವಿಠಲನಾ 3
--------------
ಹನುಮೇಶವಿಠಲ
ಪರಿಪರಿಯಲಿ ನೀ ಪಾಲಿಸೋ ನರಹರಿಯೆ ನಾನಾಪರಾಧಿ ಶ್ರೀ ನರಹರಿಯೇ ನಾನಪರಾಧಿ ಪ ಸತಿಸುತರು ಹಿತದವರೆಂದರಿತು ನಾ ಮತಿಯಗೆಟ್ಟು ಕ್ಷಿತಿಪತಿಯೇ ನಿನ್ನನು ಸ್ತುತಿಸದಾ ಅಪರಾಧಿ 1 ಪರ ನಿಂದೆಯಲ್ಲಿ ಗೋ- ವಿಂದ ನಿನ್ನನು ವಂದಿಸದಾ ಅಪರಾಧಿ 2 ತನುಮನಧನ ಕೊಟ್ಟಿರುವ ಶ್ರೀವರ ಹನುಮೇಶ ವಿಠಲನೆ ನಿನ್ನನು ನೆನೆಯದಾ ಅಪರಾಧಿ 3
--------------
ಹನುಮೇಶವಿಠಲ
ಏನೇನ ದಾನವ ಮಾಡಲು - ಹರಿಯ |ಧ್ಯಾನಕೆ ಸಮವಾದ ದಾನಂಗಳುಂಟೆ ? ಪ.ದಿನಕೊಂದು ಲಕ್ಷ ಗೋದಾನವ ಮಾಡಲು |ಅನುದಿನ ಉದಕದಾನವ ಮಾಡಲು ||ಮನಶುದ್ಧವಾದ ಭೂದಾನವ ಮಾಡಲು |ವನಜನಾಭನ ಧ್ಯಾನಕೆ ಸಮವುಂಟೆ ? 1ಉತ್ತಮವಾದ ವಸ್ತ್ರವ ದಾನಮಾಡಲು |ಮುತ್ತು ಮಾಣಿಕವ ದಾನವ ಮಾಡಲು ||ಅತ್ಯಂತ ವಿದ್ಯಾ ಪ್ರದಾನವ ಮಾಡಲು |ಚಿತ್ತಜಪಿತನ ಧ್ಯಾನಕೆ ಸಮವುಂಟೆ ? 2ಶತಕೋಟಿ ಕನ್ಯಾಪ್ರದಾನವ ಮಾಡಲು |ಶತಶತ ಸುವರ್ಣ ದಾನವ ಮಾಡಲು ||ಮಿತಿಯಿಲ್ಲದೆ ಅನ್ನದಾನವ ಮಾಡಲು |ಕ್ಷಿತಿಪತಿಯ ಪಾದಧ್ಯಾನಕೆ ಸಮವುಂಟೆ ? 3ನಾನಾ ತೀರ್ಥದಲಿ ಸ್ನಾನವ ಮಾಡಲು |ಕಾನನದೊಳಗೆ ತಪವ ಮಾಡಲು |ಜಾÕನಿಯಾಗಿ ಕಾಶೀಯಾತ್ರೆಯ ಮಾಡಲು |ಜಾನಕೀಪತಿಯ ಧ್ಯಾನಕೆ ಸಮವುಂಟೆ ? 4ಧಾರಣಿ ಪಾರಣಿ ಭೀಷ್ಮಪಂಚಕ ಮಾಡಿ |ಹರುಷದಿ ವಿಷ್ಣುಪಂಚಕ ಮಾಡಲು ||ಪರಮ ಕಠಿಣ ಚಾಂದ್ರಾಯಣ ಮಾಡಲು |ಪುರಂದರವಿಠಲನ ಧ್ಯಾನಕೆ ಸಮವುಂಟೆ ? 5
--------------
ಪುರಂದರದಾಸರು