ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಥವೇರಿ ಬರುತಿಹ ಗುರುರಾಯ ನಾ ನೋಡಮ್ಮಯ್ಯ ಪ ಅತಿಸದ್ಭಕುತಿಲಿ ಸ್ತುತಿಸುವರಿಗೆ ಸತ್ಪಥವನೆ ತೋರುವ ಕ್ಷಿತಿಪತಿದಾಸರೆ ಅ.ಪ ತಿದ್ದಿಹಚ್ಚಿದ ನಾಮ ಮುದ್ರೆಗಳಿಂದಲೋಪ್ಪುತಿಹರೇ ನೋಡಮ್ಮಯ್ಯ | ಕ್ಷುದ್ರರ ಮುಖಕೆ ಬೀಗ ಮುದ್ರೆಯ ನೊತ್ತುತ ಸದ್ವೈಷ್ಣವರ ನುದ್ಧರಿಸಿದ ಕರುಣೀ 1 ವರಶ್ರುತಿ ಸಮ್ಮತರಥ ನಿರ್ಮಿತವಾಗಿಹುದೇ ನೋಡಮ್ಮಯ್ಯ || ಸ್ಮರಪುರಹರ ಸಾರಧಿಯಾಗಿಹರೆಂದರಿತವರಿಗೆ ಶುಭಗರೆವ ದಯಾನಿಧೇ 2 ಶಾಮಸುಂದರನ ನಾಮಸುಧಾರಸವ ನೋಡಮ್ಮಯ್ಯ ಶ್ರೀಮಾನ್ ಮಾನವಿ ಕ್ಷೇತ್ರವೆ ತವನಿಜ ಧಾಮವೆಂದೆನಿಸಿ ಸುಸ್ತಂಭದೊಳಿಹರೇ 3
--------------
ಶಾಮಸುಂದರ ವಿಠಲ