ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀನಿವಾಸನೆ ನಿನ್ನ | ವರ್ಣಿಸಲು ಅಳವೇ ಮಾನನಿಧಿ ಗುಣಪೂರ್ಣ | ನಿನ್ನಂಘ್ರಿ ಭಜಿಪರ ಬನ್ನ ಪ. ವೈನತೇಯನ ವರೂಥ ನಾನಾ ಹಾರ ಪದಕದಿ ಮೆರೆವ ಸುಂದರ ಕಾಮಪೂರ್ಣ ಮುಖಾರವಿಂದನ ನೀ ಮನದಿ ತೋರುತ್ತ ಪೊರೆಯೊ ಅ.ಪ. ಶೇಷಪರ್ವತವಾಸ | ಭಕ್ತರನು ಸಲಹೋ ಈ ಕ್ಷಿತಿತ್ರಯಕೀಶ ಪೋಷಿಸುವೋ ಭಕ್ತರವಾಸಿ ನಿನ್ನದೊ ಶ್ರೀಶ ಲಕ್ಷ್ಮೀನಿವಾಸ ದೋಷದೂರನೆ ಎನ್ನ ಅವಗುಣ ದೋಷಗಳನೆಣಿಸದಲೆ ಸಲಹೊ ಶೇಷವರ ಪರ್ಯಂಕಶಯನ ವಿ- ಭೀಷಣ ಪ್ರಿಯ ಭೀಷ್ಮವರದ1 ಮಾಘ ಸಪ್ತಮಿ ಕುಂಭ | ಸಂಕ್ರಮಣ ದಿವ್ಯ ಯೋಗ ಶುಕ್ಲದಿ ಎಂಬ | ಸ್ಥಿರವಾರದಲ್ಲಿ ಆಗ ರಥದಲ್ಲಿ ಬಿಂಬ | ಭಕುತರಿಗೆ ಕಾಂಬ ಜಾಗು ಮಾಡದೆ ಸೂರ್ಯಮಂಡಲ ಬೇಗ ಬಿಗಿದಿಹ ಸಪ್ತ ಹಯಗಳ ಬಾಗಿ ಭಜಿಸಲು ಭಕ್ತವರ್ಗವು ನೀ ಜಗದಿ ಮೆರೆಯುತ್ತ ಪೊರೆದೆ 2 ವಿೂನನಾಗಿ ಮತ್ತೆ ವೇದವನೆ | ತಂದು ಆ ನಳಿನಭವಗಿತ್ತೆ ಅಲ್ಲಿಂದ ಸುರರಿಗೆ ಪ್ರಾಣದಾನವನಿತ್ತೆ ಮೇದಿನಿಯ ಪೊತ್ತೆ ನಾನೆ ಜಗಕೆಂಬ ದಾನವನ ಕೊಂದು ದಾನ ಬೇಡಿ ಭೂಮಿ ಅಳೆದು ಮಾನಿನಿ ಶಿರ ತರಿದು ಸೀತಾ ಮಾನಿನಿಗೆ ಅಂಬುಧಿಯ ಬಿಗಿದೆ 3 ಮಾನಿನಿಯರಿಗೆ ಕಾಣದೆ | ಬೆಣ್ಣೆಯನು ಕದ್ದು ಮಾನವೆಲ್ಲವ ಕಳೆದೆ ಅಲ್ಲಿಂದ ಮುಂದೆ ಮಾನವ ಬಿಟ್ಟು ನಿಂದೆ ಏನ ಹೇಳಲಿ ಹಯವನೇರಿ ದಾನವರ ಸಂಹರಿಸಿ ಮೆರೆದೆ ನಾನಾ ರೂಪ ನಾಟಕಧರ ನೀನೀ ಪರ್ವತದಲಿ ನಿಂದಿಹೆ 4 ದೇಹವ್ಯಾಪ್ತಕ ನೀನೆ | ದೇಹಗಳ ಕೊಟ್ಟು ಮೋಹಗೊಳಿಸುವ ನೀನೆ ದೇಹಸ್ಥನಾಗಿ ತೋರುವ ಬಿಂಬ ನೀನೆ | ಜೀವಾಕಾರನೆ ಈ ಹದನ ಎನಗಿನ್ನು ತಿಳಿಯದೊ ಮೋಹ ಹರಿಸಿ ಸುಜ್ಞಾನ ನೀಡೊ ಸ್ನೇಹ ಗೋಪಾಲಕೃಷ್ಣವಿಠ್ಠಲ ಶ್ರೀ ಹರಿಯೆ ಹೃದಯದಲಿ ನಿಲಿಸೊ 5
--------------
ಅಂಬಾಬಾಯಿ