ಎಂತು ಪೊಗಳಲೊ ನಿನ್ನ-ಯತಿಕುಲ ಶಿರೋರನ್ನ ಪ
ಶಾಂತ ಮಧ್ವಾಚಾರ್ಯ ಸಂತ ಕುಲವರ್ಯ ಅ.ಪ.
ಪ್ರಥಮಾವತಾರದಲಿ ವ್ರತತಿ ರಾಮನ ಭಜಿಸಿಅತಿ ಪಂಥದಿಂದ ಶರಧಿಯನು ದಾಟಿಕ್ಷಿತಿಜೆಗಂಕಿತವಿತ್ತು ಪೂದೋಟವನು ಕಿತ್ತೆಪ್ರತಿಗಾಣೆ ನಿನಗೆ ಅಪ್ರತಿ ಪರಾಕ್ರಮಿಯೆ 1
ದ್ವಿತಿಯಾವತಾರದಲಿ ದೇವಕೀಜನ ಕಂಡುಸತಿಗೆ ಕಾಮಿಸಿದವನ ಸಾಹಸದಿ ಸದೆದೆಪ್ರತಿಯಾದ ಮಾಗಧನಪೃತನದಲಿ ನೀ ಕೊಂದೆಪ್ರತಿಯ ಕಾಣೆನೊ ನಿನಗೆ ಮೂಜ್ಜಗದೊಳಗೆ 2
ತೃತಿಯಾವತಾರದಲಿ ತ್ರಿಜಗನುತಿಸಲು ಬಂದುಯತಿಯಾಗಿ ಮಹಾಮಹಿಮನನು ಭಜಿಸಿದೆಕ್ಷಿತಿಗಧಿಕ ಉಡುಪಿಯಲಿ ಕೃಷ್ಣನ್ನ ನಿಲಿಸಿ ಪ್ರತಿಮತಮತವ ಮುರಿದೆ ಪೂರ್ಣಪ್ರಜ್ಞ ಮುನಿವರನೆ 3