ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರೆ ಪ ಸಿಂಧು ಸಂಭೂತೆ | ಪೂರ್ಣ ಚಂದಿರ ಮುಖಿ ಸುಖದಾತೆ ಅ.ಪ ಇಂದೀವರಾಕ್ಷಿಯೆ | ಪೊಂದಿ ತ್ವತ್ವಾದಕೆ ವಂದಿಪೆ ಮನ್ಮನ ಮಂದಿರದೊಳು ಬಾರೆ || ಕೃತಿ ಶಾಂತಿ ಜಯಮಾಯೆ ಸೀತೆ ದೇವಿ ಪತಿತಪಾವನೆ ಕ್ಷಿತಿಜಾತೆ | ವಿಧಿ ಶಿತ ಕಂಧರಾದಿ ನಮಿತೆ | ಮಹ | ಪತಿವ್ರತೆ ಪರಮವಿಖ್ಯಾತೆ ಆಹಾ ಶೃತಿವಿನುತಳೆ ಸದಾ | ನುತಿಸಿ ಬೇಡಿ ಕೊಂಬೆ ಅತಿಹಿತದಲಿ ತವ ಪತಿಯ ಪಾದವ ತೋರೋ 1 ಹರಿಣಲೋಚನೆ | ಶ್ರೀರುಕ್ಮಿಣೀ | ಮದ ಕರಿ ಮಂದಗಮನೆ ಕಲ್ಯಾಣಿ ದ್ವಿಜ ಪರಿವಾರ ಸಂಸ್ತುತೆ ಜಾಣೆ | ಚಾರು ಚರಿತೆ ಚಂಚರೀಕ ಸುವೇಣಿ || ಆಹಾ || ಸಿರಿ ಸತ್ಯಭಾಮೆಯ | ಮರೆಯದೆ ಎನ್ನಯ ದುರಿತ ವಿಚ್ಛೇದಿಸಿ | ಹರಿಸ್ಮರಣೆ ನೀಡೆ 2 ಕಂಬು ಕಂಧರೆ ಕಾಮನ ತಾಯೆ ಅರ ಭವ ಚಂದನ ಗಂಧಿಯೆ | ನಂದ ನಂದನ ಶಾಮ ಸುಂದರವಿಠಲನ್ನ ಸಂದರುಶನವೀಯೆ 3
--------------
ಶಾಮಸುಂದರ ವಿಠಲ
ನೀಚಕೃತ್ಯದ ಮನಸೇ ನಿನಗೆ ತುಸು ನಾಚಿಕಿಲ್ಲಲೆ ಹೊಲಸೆ ಪ ಪ್ರಾಚೀನಹಿರಿಯರ ಯೋಚಿಸಿನೋಡದೆ ನೀಚತನದ ಆಲೋಚನೆಯೊಳು ಬಿದ್ದು ಅ.ಪ ಕುಂತಿಸುತನ ರಥವ ನಡೆಸಿದನು ಅ ತ್ಯಂತ ಕೃಪೆಯಿಂದ ಹರಿಯು ಕಂತುಜನಕ ಭಕ್ತ ಚಿಂತಾಯಕನೆಂದು ಅಂತರಂಗದಿ ಭಜಿಸಿ ಸಂತಸ ಪಡುವಲ್ಲಿ 1 ಅಂಬರೀಷನೆಂಬುವ ನೃಪಗೆ ಮುನಿ ಡೊಂಬೆಯಿಂಬ (?) ಶಾಪಿಸಲು ಅಂಬುಜಾಸನ ಬಂದು ಬೆಂಬಲಿಸಿ ನೃಪನನ್ನು ಇಂಬಿಟ್ಟು ಪೊರೆದದ್ದು ನಂಬಿ ಭಜಿಸವಲ್ಲಿ 2 ಭೂಮಿಪ ಬಲಿಚಕ್ರನ ಬಾಗಿಲ ಕಾಯ್ದ ಪ್ರೇಮದಿಂ ರಮೆಯರಸನು ಪ್ರೇಮದಿಂ ಭಕುತರ ಕಾಮಿತವೀಯಲು ಕಾಮಧೇನೀತನೆಂದು ನೇಮದಿಂದರವಲ್ಲಿ 3 ಗೌತಮ ಮುನಿಸತಿಯು ಪಾಷಾಣವಾಗಿ ಕ್ಷಿತಿಮೇಲೆ ಎರಗಿರಲು ಕ್ಷಿತಿಜಾತೆಪತಿ ತಾನು ಅತಿಹಿತದ ಕೃಪೆಯಿಂದ ಪತಿತಗೈದವನೆಂದು ಸ್ತುತಿಸಿ ಒಲಿಸವಲ್ಲಿ 4 ಹನುಮಂತನೊಡೆಯನಾದ ಜನಕಜೆಪತಿ ವನಜಾಕ್ಷ ಶ್ರೀರಾಮನ ಘನತರಮಹಿಮೆಯ ಅನುದಿನಕೊಂಡಾಡು ಘನಮುಕ್ತಿ ಸಾಮ್ರಾಜ್ಯ ಕನಿಕರದಿಂ ಕೊಡುವ 5
--------------
ರಾಮದಾಸರು
ನೆರೆನಂಬಿ ಬೇಡುವೆನೊ ಶ್ರೀಹರಿಯೆ ನಿನ್ನ ಪರಮ ಪರತರ ತವಬಿರುದುಗಳರಿದು ಪ ಪುರನಾಶಗೈದು ನೀ ಪುರಸತಿಯರ್ವ್ರತ ಕೆಡಿಸಿ ಪುರದೊಳಗೆ ತೋರಿದೆಲೋ ಪರಿಪರಿಯ ಲೀಲೆ ಕರುಣಿಸದ್ಯಸಮಸುಖ ಪರಮ ದಯಾನಿಧಿಯೆ 1 ಸತಿ ಅಹಲ್ಯಾದೇವಿಗೆ ಪತಿಯಿತ್ತ ಶಾಪವನು ಅತಿಹಿತದಿ ಪರಿಹರಿಸಿ ಗತಿಯಿತ್ತಿ ದೇವ ಕ್ಷಿತಿಜಾತೆಪತಿ ನಿನ್ನ ಪತಿತಪಾವನಪಾದ ನುತಿಪ ಭಕ್ತರಿಗೆ ಜವಮೃತ್ಯುಭಯತರಿವಿ 2 ಮೃಡಸಖ ಶ್ರೀರಾಮ ದೃಢದಿ ಭಜಿಪರ ಬೆಂ ಬಿಡದಿರ್ದು ಕಾಯ್ವಂಥ ಕಡುದಯದ ದೇವ ದೃಢದಿಂದ, ನಂಬಿದೆ ಒಡಲಾಸೆ ಪೂರೈಸು ಜಡಜಾಕ್ಷ ಕಡುದಯದಿ ಪಿಡಿಯೆನ್ನ ಕೈಯ 3
--------------
ರಾಮದಾಸರು