ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥ ಆಟವಿದು ಕ್ಷಿತಿಜಪತಿದೆಂಥ ಆಟವಿದು ಪ ಎಂಥ ಆಟ ಶ್ರೀ ಕಂತುಜನಕ ಭ ಕ್ತಾಂತರಂಗ ಸುರಚಿಂತಾಮಣಿಯೇ ನಿನ್ನದೆಂಥ ಅ.ಪ ಮಡುವಿನೊಳಡಗಿರುವ ಉರಗನ ಹೆಡೆಮೆಟ್ಟಿ ನಾಟ್ಯಮಾಡುವ ಸಡಗರದಲಿ ಗೊಲ್ಲ ರ್ಹುಡುಗರ ಕೂಡಿಸಿ ಒಡನೆ ಬಿಲ್ಲಿನಾಟ ರಚಿಸಿ ಮಧುರಪುರ ಬಿಡದೆ ಸೇರಿ ಗಡಕಡಿದು ಮಾವನ ಶಿರ ತಡೆಯದೆಮನಪುರಪಥವ ಪಿಡಿಸಿದ್ದು 1 ಗೋವಳರೊಡಗೂಡಿ ಗೋವುಗಳ ಕಾಯಲ ಡವಿಸೇರಿ ಮಾಯವೃಷ್ಟಿ ಅತಿಭರದಿ ಗೈಯಲಾಗ ಗೋವರ್ಧನ ಗಿರಿಯೆತ್ತೆ ಏಳುದಿನ ಗೋವುಗಳನು ಮತ್ತು ಗೋವಳರೆಲ್ಲರ ಜೀವ ಸಮಾನಮಾಡಿ ಪ್ರೇಮದಿ ಸಲಹಿದ್ದು 2 ಎಷ್ಟು ಕ್ಷೀರ ನೀಡೆ ಜನನಿಗಿನ್ನಿಷ್ಟೆಂದ್ಹಟ ಮಾಡೆ ಸಿಟ್ಟಿನಿಂದ ತಾಯಿ ಕಟ್ಟಲು ಒರಳಿಗೆ ಅಟ್ಟಹಾಸದಿ ಡುರುಕಿಟ್ಟು ನಡೆದು ಶಾಪ ಪಟ್ಟು ಪಟ್ಟಣಮುಂದೆಷ್ಟೋಕಾಲದಿಂದ ಕಷ್ಟಪಡುವರ ದಯದೃಷ್ಟಿಯಿಂ ಸಲಹಿದ್ದು 3 ದುರುಳ ಭಸ್ಮನಂದು ಹರನಿಂ ಉರಿಹಸ್ತವನು ಪಡೆದು ಪರಮಪಾಪಿ ವರ ಕರುಣಿಸಿದವನಿಗೆ ಮರುಳಮಾಡವನ ಕರವೆ ಅವನ ಮೇ ಲ್ಹೊರೆಸಿ ಉರುವಿಸಿ ಹರನ ರಕ್ಷಿಸಿದ್ದು 4 ಬತ್ತಲೆ ಪುರಗಳನ್ನು ಪೊಕ್ಕು ನೀ ಸತಿಯರ ವ್ರತಗಳನು ಹತಗೈದು ತ್ರಿಪುರದ ಪಥಪಿಡಿಸೆಮಪುರ ಹಿತದಿಂ ಸುರಗಣಕತಿಸೌಖ್ಯವ ನಿತ್ತು ಜತನಗೈದಿ ಸಿರಿಪತಿಯ ಶ್ರೀರಾಮನೆ ಸತತದಿಂಥ ಮಹಪತಿತ ಮಹಿಮದಿಹ 5
--------------
ರಾಮದಾಸರು
ಸಕಲಲೋಕಪಾಲಕ ರಕ್ಷಿಸೈ ನಿಖಿಲವ್ಯಾಪಕ ಪ ಚರಣದಾಸನ ಮೊರೆಯ ಪಾಲಿಸಿ ಕರುಣವಂ ಬೆರೆಸಿ ಪೊರೆಯೊ ಶರಣಜನ ಪ್ರಿಯಕರನೆ ಮರೆಯ ಹೊಕ್ಕೆನು 1 ಇಂದೊದಗಿಬಂದ ದುರಿತವನು ತಂದೆ ನೀಬಂದು ಪರಿಹರಿಸೊ ಮುಂದಿನ್ನು ಬಂಧನದ ಬಲೆಯಚಿಂದಿಸಿ ಚಂದದಿಂ ಕಾಯೊ 2 ಕಾಯಜಪಿತನೆ ನಿನ್ನ್ಹೊರತು ಕಾಯುವ ಹಿತರು ಇಲ್ಲಯ್ಯ ದೂರದ ಸುತನ ಮೊರೆ ಕೇಳೊ ಕ್ಷಿತಿಜಪತಿಯೆ ಶ್ರೀರಾಮ 3
--------------
ರಾಮದಾಸರು
ಹನುಮಂತ ನೀನೆಂಥ ಬಲವಂತ ಘನತರಕೈಲಾಸವನು ಬಾಲದೆತ್ತಿದೆ ಪ ಹದಿನಾಲ್ಕು ಲೋಕಂಗಳುದರದಿಟ್ಟವನನ್ನು ಸದಮಲಭಕ್ತಿಯಿಂ ಮುದದ್ಹೊತ್ತು ಹಾರಿದಿ 1 ಅಪರಿಮಿತ ಭುಜಬಲ ಕಪಿವರರೆಲ್ಲ ಬಿಟ್ಟು ಕೃಪಾಕರನು ನಿನಗೆ ಗುಪಿತದುಂಗುರವಿತ್ತು 2 ಸಾಗರ ಹಾರಲು ಆಗದೆ ಸರ್ವರು ನೀಗದ್ಯೋಚನೆ ಗೈಯೆ ಬೇಗ ಸಾಗರ ಜಿಗಿದಿ 3 ಲಂಕೆಯೆಲ್ಲವು ಒಂದೇ ಲಂಕಿಣ್ಯೋರ್ವಳು ಒಂದೇ ಮಂಕುಹೆಣ್ಣೆಂದು ನೀ ಶಂಕೆಯಿಂ ಸದೆದೆಯೊ 4 ದುರುಳನ ಪುರ ಪೊಕ್ಕು ಸರುವ ಭವನಗಳ ಪರಿಪರಿ ಶೋಧಿಸಿದಿ ಪರಮಪಾವನೆಯಳ 5 ಲೋಕಮಾತೆಯನು ಅಶೋಕವನದಿ ಕಂಡು ಲೋಕವೀರನ ಅಂಗುಲೀಕವನಿತ್ತಯ್ಯ6 ಕ್ಷಿತಿಜೆ ದರುಶನದಿಂದ ಮತಿವಂತನೆನಿಸಿ ನೀ ಕೃತಕೃತ್ಯನಾದಯ್ಯಾ ಸತತ ಕ್ಷಿತಿಯ ಮೇಲೆ 7 ಬಣಗು ರಕ್ಕಸಕುಲ ಕ್ಷಣದಿ ಅಳಿದು ನೀನು ವನವ ನಾಶಗೈದು ದಿನಮಣಿಯಂತೊಪ್ಪುವಿ8 ಶೂರ ಅಕ್ಷಯಕುಮಾರಾದಿಗಳ ಮಹ ಮೇರೆದಪ್ಪಿದಬಲ ಸೂರೆಗೈದಾಕ್ಷಣ9 ಮಂಕುದಶಕಂಠನ ಬಿಂಕವ ಮುರಿದಿ ಅ ಸಂಖ್ಯ ವೀರರ ಕೊಂದು ಲಂಕಾದಹನ ಗೈದಿ 10 ಅತಿಭರದಿಂ ಬಂದು ಕ್ಷಿತಿಜಪತಿ ಶ್ರೀರಾಮ ಗತಿ ಶುಭದ್ವಾಯ ಶ್ರುತಪಡಿಸಿ ಹಿತ ಪಡೆದ್ಯೊ 11
--------------
ರಾಮದಾಸರು