ವರಾಹಾವತಾರ
ಜಯ ಜಯ ಯಜ್ಞವರಾಹ ಚಿನ್ಮಯ ಮೋದಾತ್ಮಕ ದೇಹ
ಭಯವ ಪರಿಹರಿಸೀಗ ಆಲಯವನು ನಿಲಿಸುವ ರಾಗ ಪ.
ಬ್ರಹ್ಮನ ನಾಸಿಕದಿಂದ ಪರಬೊಮ್ಮನು ಕಿಟಿಯಾದಂದ
ಹಮ್ಮಿನ ದೈತ್ಯನ ಕೊಂದ ಈ ಕ್ಷಮ್ಮೆಯ ಸುಲಭದಿ ತಂದ 1
ಶಿಖಾಮಣಿ ರನ್ನ ಶ್ರೀ ಯಜ್ಞವರಾಹನೆ ನಿನ್ನ
ಸುಜ್ಞತೆ ನಂಬಿದೆ ಮುನ್ನ ಸನ್ನøಗ್ಯನೆ(?) ನೀ ಸಲಹೆನ್ನ 2
ಶ್ರೀಪತಿ ವೆಂಕಟರಮಣ ಮಹದಾಪದ್ಗಣ ಹರಚರಣ
ಭೂಪತಿ ತೋರಿಸು ಕರುಣ ಸಂತಾಪ ಬಿಡಿಸು ಸಚ್ಚರಣ 3