ಮಾಯಾ ನೋಡಮ್ಮ
ಶ್ರೀಯರಸ ನೀಲಮೇಘ ಛಾಯ ಕೃಷ್ಣರಾಯ ತನ್ನ ಪ.
ಕಾಶೀಶ ಮೃತ್ಯುಂಜಯಾಯಿ ವಿಷವಲ
ಭಂಜನಾದಿಗಳೀತನಿಗಂಜಿ ಕೊಂಬುವರು
ಮಂಜುಳಾತ್ಮ ನಿಜಕರಕಂಜದಿಂದ ಪಾದವೆತ್ತಿ
ನಿರಂಜನ ತಾ ಲೀಲೆಯಿಂದ 1
ಪುಟಿತಹಾಟಕ ಮಣಿಘಟಿತ ಕಂಕಣಾಂಗದ
ಕಟಿಸೂತ್ರಗಳನಿಟ್ಟು ನಟನಂದದೀ
ವಟಪತ್ರಶಾಯಿವೋಷ್ಠಪುಟದಿ ಪಾದವನಿಕ್ಕಿ
ಕಟಬಾಯೊಳಮೃತವಾ ಸ್ಫುಟವಾಗಿ ಸುರಿಸುತ 2
ಲಿಂಗದೇಹಭಂಗತಾಗಿನಂಗವನ್ನು ದೂರಗೈಸಿ
ತುಂಗಮತಿವಂತ ಋಷ್ಯ ಶೃಂಗಾದಿಗಳು
ನಿತ್ಯ ಮಂಗಳ ದೇವಿಯರ
ಗಂಗೆಯ ಪಡೆದು ಶಿವಂಗ ಶುದ್ಧಿಗೈಸಿ 3
ಗೋಪಿ ಗೃಹ
ಕರ್ಮರತಳಾಗಿರಲು ಒಮ್ಮನದಿಂದ
ಅಮ್ಮರ ಗಣಾರಾಧಿತ ಕ್ಷಮೆಯನಳದ ಪಾದ
ಸುಮ್ಮಗೆ ಕರದೊಳೆತ್ತಿ ಖಮ್ಮಗಿಹದೆಂದು ತನ್ನ 4
ಕರಪಲ್ಲವಾಧೃತ ಲೋಕವಂದ್ಯರೂಪ ಫಣಿ-
ಶೇಖರಾದ್ರಿವಾಸ ಭಕ್ತನಾಕ ಭೂರುಹ
ನೀಕರಿಸಿ ದುರಿತವ ಸೋಕದಂತೆ ನಮ್ಮನೀಗ
ಸಾಕುವ ಪರಮ ಕರುಣಾಕರ ಶ್ರೀ ಕೃಷ್ಣ ತನ್ನ 5