ನೆನೆಯಲಳವಲ್ಲಗಣಿತ ಜನುಮ (ಪ)
ಕುಣಿಕೆಯೊಳಗೆ ಪೋಣಿಸಿ
ನೋಯಿಸುತ
ಕುಣಿಸಿ ಕೊಲ್ಲುದುಚಿತವೇ
ಪೊರೆಯೊ ಸತತದಲಿ 1
ಶ್ವಾನ ಸೂಕರ ಕ್ರಿಮಿಯ ಕೀಟಕ
ತೊಳಲಿ ಬಳಲುತ ನಾ
ಹಾನಿಬಟ್ಟೆನ್ನದೇನು ತಪ್ಪಿರೆ
ಜಾನಕೀಶನೆ ನೀನೆ ಕ್ಷಮೆಮಾಡಿ ಪೊರೆಯೊ ಸತತದಲಿ 2
ತುಂಬಿ ಮಾಯೆಯಿಂ ನಂದಿಪೋಗ್ವುದು
ನಿನ್ನ ಮಾಯಾಮಹಿಮೆದೆಲ್ಲವು ನಿನ್ನ ಹೊರತಿನ್ನನ್ಯವೊಂದಿಲ್ಲ
ಎನ್ನನ್ಯಾತಕೆ ಬನ್ನಬಡಿಸುವಿ ಭಿನ್ನವಿಲ್ಲದೆ ನಿನ್ನ ನಂಬಿದೆ
ರಕ್ಷಿಸು ಪಿಡಿದು ಸತತದಲಿ 3