ವೈದೇಹಿ ಪಾಲಿಸೆನ್ನಂ ನಂಬಿದೆ ನಿನ್ನಂ ಪ.
ವೇದವಿದಿತೇ ತವಪಾದವ ಸ್ಮರಿಸುವ
ಕರವ ಅ.ಪ.
ಕಾಮಿತಾರ್ಥವ ನೀಡುವಳೆಂಬುವ ಬಿರುದಾಂಕಿತೆಯಾಗಿರುವ
ಕಾಮಜನನೀ ನಿನ್ನ ನಾಮ ಮಂತ್ರಗಳನ್ನು
ನೇಮನಿಷ್ಠೆಯೋಳ್ ಜಪಿಸುವಂದದಿ ಸು
ಪ್ರೇಮದಿಂದಲಿ ವಿಮಲಮತಿಕೊಡು 1
ಜಾನಕಿನಾಮವ ಧರಿಸಿ
ದಾನವಕುಲವೆಂಬ ಕಾನನಂಗಳಿಗಂತು ಹವ್ಯ
ವಾಹನನೆನಿಪ ರಾಮನ ಕೈಯಪಿಡಿದ ಪರಮಪಾವನೆ 2
ಶಮದಮಾದಿಗಳಿಂದ ಮೆರೆಯುತಲಿರ್ಪ
ಕ್ಷಮೆಗೆ ನೀ ನೆಲೆಯೆಂದು
ಯಮಿಕುಲವರ್ಯರು ನಮಿಸಿ ಸ್ತುತಿಸುತ್ತಿಹರು
ವಿಮಲ ಶೇಷಾದ್ರಿನಾಥನ ರಮಣಿ ನಿನ್ನಡಿ ಮಣಿದು ಬೇಡುವೆ 3