ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣದಿ ಕಾಯೋ ಗೋವಿಂದಾ ಯಂವ ದುರಿತಗಳಿಂದ ನೀನೀಗೊ ಮುಕುಂದ ಪ ಹರಿಸೇವೆ ಮಾಡುತ್ತ ಬಂದೆ ಮುಂದೆ ಚಿರ ಸಾಯುಜ್ಯವನ್ನು ನೀಡೋ ಶರಣಂದೆ ಅ.ಪ. ಲಕ್ಷಯೆಂಬತನಾಲ್ಕು ಜನ್ಮಯೆತ್ತಿ ಭಕ್ಷಿಸಿ ಬಂದೆನು ಕೋಟಿ ದುಃಖಗಳಾ 1 ಸಾಕ್ಷಿಯಾಗಿರುವಂಥ ಜೀವಾತ್ಮನನು ಲಕ್ಷಕೆ ತಂದೆ ಮನುಜ ಜನ್ಮದಲೀ 2 ಪಾಪ ಪುಣ್ಯಕೆ ಕರ್ತೃವಾಗಿ ಭವದಿ ಕೂಪದಿ ನಿಂದೆನು ಬೋಕ್ತøವು ಆಗೀ 3 ಪಾಪವ ಕ್ಷಮಿಸೋ ಸರ್ವಾತ್ಮಯಂನ ತಾಪವ ನೀಗುತ್ತ ಜನ್ಮ ಪರಿಪರಿಸೋ4 ಜನ್ಮ ತಾಳಲಾರೆ ಹರಿಯೇ ತಾಳಿ ಜನ್ಮದಿ ಹರಿಪಾದ ನಾ ಬಿಡಲಾರೆ 5 ಸನ್ನುತವರ ದೂರ್ವಾಪುರದ ನಂಮ ಚನ್ನಕೇಶವನೇ ಭಕ್ತಿಯನು ನೀ ಕೊಡೆಲೋ6
--------------
ಕರ್ಕಿ ಕೇಶವದಾಸ
ಶ್ರೀಧರಾ ನೀನೆ ಎನ್ನ ಹೃದಯ ಕಮಲದೊಳಿದ್ದು ಮಾಡಿಸಿದ್ದು ನಾ ಮಾಡಿದೆನೊ ಪ ಇಂದು ಮಾಡುವುದೇನು ಮುಂದೆ ಮಾಡತಕ್ಕದ್ದೇನು ತಂದೆ ಅ.ಪ ಹಿಂದೆ ನಿನ್ನಯ ಜನರ ವಂದಿಸದೆ ಭವ- ಬಂಧನದಿ ನಾ ನೊಂದೆನೋ ಇಂದು ತೀರಿತು ಅದಕೆ ತಕ್ಕಮುಯ್ಯವು ಎನಗೆ ಆ- ನಂದ ವಾಯಿತು ನಿನ್ನ ಕರುಣಾರಸಕೆ ಮಂದಭಾಗ್ಯನಿಗೆ ನೀ ತಂದಂಥ ಬಂಧನವ ಬಂಧಿಸಿ ಎನ್ನಿಂದ ವಂದನೆಯ ಕೊಂಡೆ1 ಮೂರು ದಿನದಲಿ ಹಿಂದೆ ತೋರಿದಂದದಿ ಎನ್ನ ಅ- ಪರಾಧಗಳ ಎಣಿಸಲಿಲ್ಲ ಬಾರಿ ಬಾರಿಗೆ ಗುರುಗಳು ಕಾದಿಹರು ಎಂದೆನ್ನ ಎಚ್ಚರಿಸಿದುದಕೆ ನಾ ಮೈಮರೆದೆನೊ ಮಾರಮಣನೇ ನೀ ಗುರುವಾಸರದಿ ತ್ವರಿತದೊಳು ಹರಿ ಗುರು ಪೂಜೆಗೆ ಕಾತರವನಿತ್ತೆ 2 ಸರ್ವಸೇವೆಯ ನೀ ಕರುಣದಿ ಸ್ವೀಕರಿಸು ಶರಣರಕ್ಷಕನಹುದೊ ನೀನು ಉರಗಗಿರಿವಾಸ ಶ್ರೀ ವೇಂಕಟೇಶನೆ ಎನ್ನ ಸರ್ವಾಪರಾಧಗಳ ಕ್ಷಮಿಸೋ ಅರಿತವನು ನಾನಲ್ಲವೆಂದೆನ್ನ ಕೈಬಿಡದೆ ದುರಿತ ಪರಿಹರಿಸಿ ಕಾಯೋ ಶೌರೆ3
--------------
ಉರಗಾದ್ರಿವಾಸವಿಠಲದಾಸರು
ಸ್ವಾಮಿ ನೀನೇ ತಂದೆ ನೀನೇ ಯೆನ್ನಯ ಬಂಧು ಪ್ರೇಮದಿಂದಲಿ ಯೆನ್ನ ಸಲಹಯ್ಯ ಬಂದೇ ಪ ಐದು ಹುಲಿಗಳು ಬಂದು ಗಾರುಮಾಡುತಲೆನ್ನ ಕೈದಿನಲ್ಲಿಟ್ಟಿಹವು ಬಿಡಿಸಯ್ಯ ಹರಿಯೇ ಕೈದಿನಲ್ಲಿಟ್ಟೆನ್ನ ಕೆಲಸಕ್ಕೆ ಎಳತಂದು ಬÁಧೆಯ ಕೊಡುತಿಹವು ಬಿಡಿಸಯ್ಯ ಹರಿಯೇ 1 ಭವವೆಂಬ ಮೃಗರಾಜ ಬಗೆಯುತ್ತ ದೇಹದ ಜವದಿಂದ ತಿನ್ನುವಾ ಬಿಡಿಸಯ್ಯ ಹರಿಯೇ ಅವನಿಯೊಳು ಹುಟ್ಟು ಸಾವೆಂಬ ಗಜನಕ್ರಗಳು ತಿವಿದೆನ್ನ ಹೆಳೆಯುದರು ಬಿಡಿಸಯ್ಯ ಹರಿಯೇ 2 ಆರು ವೈರಿಗಳೆÀನ್ನ ಕಾಯವನು ಪಿಡಿದೊಯ್ದು ಯೆರಿಸೀ ಸುಡುತಿಹರು ಬಿಡಿಸಯ್ಯ ಹರಿಯೇ ಮಾರಿ ವಶಮಾಡುವದು ಬಿಡಿಸಯ್ಯ ಹರಿಯೇ 3 ಅನ್ಯರನು ಕಾಣೆ ನಾದೇವ ನಿನ್ನುಳಿದೀಗ ನೀನೆನ್ನ ಅಪರಾಧ ಕ್ಷಮಿಸೋ ಮರೆಹÉೂಕ್ಕೇ ಗಮನ ಶ್ರೀ ಚನ್ನಕೇಶವನೆ ಸನ್ನುತದಾಸನನು ಬಾಲನೆಂತೆಣಿಸೋ 4
--------------
ಕರ್ಕಿ ಕೇಶವದಾಸ
ಹಲವೂ ಜನ್ಮ ತಳೆದೂ ಬಂದೇ ಹಲವೂ ದುಃಖವ ಸಹಿಸೀ ಬಂದೇ ಪ ಫಲಗಳ ತಿಂದೂ ಸೋತೂ ಬಂದೇ ಸಲಹÉೂೀ ರಂಗನೇ ದೂರ್ವಾಪುರಿಯೇ ಅ.ಪ. ಘೋರ ಕಷ್ಟವು ಮಾಯಾಭವವು ಸಾರವಿಲ್ಲವು ಸಂಸಾರದಲೀ ಧಾರುಣಿಯಲಿ ಬಾಳಲಾರೆ ನೀರಜಾಕ್ಷನೇ ದೂರ್ವಾಪುರಿಯೇ 1 ಖೂಳ ಪಾಪಿಯಹುದು ನಾನು ಬಾಲನಂತೆನ್ನ ಅಪರಾಧ ಕ್ಷಮಿಸೋ ಜಾಲದಿಂದ ಮೊದಲು ಬಿಡಿಸೋ ಬಾಲಮೂರ್ತಿಯೇ ದೂರ್ವಾಪುರಿಯೇ2 ನಿನ್ನ ಭಜನೆಯ ಮಾಡುತ್ತಿರುವೆನು ನಿನ್ನ ದಾಸನಾಗುವೆ ನಾನು ನಿನ್ನ ನಾಮ ಸ್ಮರಿಸುತ್ತಿರುವೆನು ಚನ್ನ ಕೇಶವ ದೂರ್ವಾಪುರಿಯೇ 3
--------------
ಕರ್ಕಿ ಕೇಶವದಾಸ
ಪರಾಕುಮಾಡದೆಪರಾಮರಿಸಿಎನ್ನಪರಾಧಂಗಳ ಕ್ಷಮಿಸೋ ಪಧರಾರಮಣ ಫಣಿಧರಾಮರಾರ್ಚಿತಸುರಾಧಿಪತಿವಿಧಿಹರಾದಿ ವಂದಿತಅ.¥ Àನರರೊಳಗೆ ಪಾಮರನು ನಾನಿಹಪರಕೆ ಸಾಧನವರೀಯೆ ಶ್ರೀಹರಿ ||ಚರಣಕಮಲಕೆ ಶರಣುಹೊಕ್ಕೆನುಕರುಣದಿಂದ ನಿನ್ನ ಸ್ಮರಣೆಯೆನಗಿತ್ತು 1ಜಪವನರಿಯೆನು ತಪವನರಿಯೆನುಉಪವಾಸ ವ್ರತಗಳ ನಾನರಿಯೆ ||ಕೃಪಾವಲೋಕನದಿಂದ ಆ ಪಾಪಗಳನೆಲ್ಲಅಪಹತವ ಮಾಡೋ ಅಪಾರಮಹಿಮನೇ 2ಕರಿರಾಜನುದ್ಧರಿಸಿ ದ್ರೌಪದಿಯಮೊರೆಯ ಲಾಲಿಸಿ ತರುಳಗೊಲಿದು ನೀಸಿರಿರಮಣ ನಿನ್ನ ಸರಿಯಾರ ಕಾಣೆಪುರಾರಿನುತಸಿರಿಪುರಂದರವಿಠಲ3
--------------
ಪುರಂದರದಾಸರು