ಗುಬ್ಬಿಯಾಳೊ ಗೋವಿಂದ ಗೋವಿಂದಾ
ಗೋವಿಂದ ಗೋವಿಂದಾನೆಂದು ನೆನಯಿರೊ ಗುಬ್ಬಿಯಾಳೊ ಪ.
ಕ್ಲೇಶ ಪರಿಹಾರವು ಗುಬ್ಬಿಯಾಳೊ
ನಾರಾಯಣನ ಧ್ಯಾನದಿಂದ ನರಕಭಯವಿಲ್ಲವೊ ಗುಬ್ಬಿಯಾಳೊ 1
ಮಾಧವನ ನೆನೆದರೆ ಮನೋಭೀಷ್ಟ ಕೊಡುವೊನು ಗುಬ್ಬಿಯಾಳೊ
ನಾಶನವು ಗುಬ್ಬಿಯಾಳೊ 2
ವಿಷ್ಣುಭಜನೆಯಿಲ್ಲದವಗೆ ವೈಷ್ಣವರ ಜನ್ಮವುಂಟೆ ಗುಬ್ಬಿಯಾಳೊ
ಇಹುದೊ ಗುಬ್ಬಿಯಾಳೊ 3
ತ್ರಿವಿಕ್ರಮನ ನೆನೆದರೆ ಸಾವಿತ್ರಿಯಾಗಿಹರೊ ಗುಬ್ಬಿಯಾಳೊ
ವಾಮನದೇವರು ನಮಗೆ ವರಗಳ ಕೊಡುವೋರು ಗುಬ್ಬಿಯಾಳೊ 4
ಸಿರಿ ನಮಗೆ ಒಲಿವಳೊ ಗುಬ್ಬಿಯಾಳೊ
ಹೃಷೀಕೇಶನ ಧ್ಯಾನದಿಂದ ಹೃದಯ ಪರಿಶುದ್ಧವೊ ಗುಬ್ಬಿಯಾಳೊ 5
ಪದ್ಮನಾಭ ನಮ್ಮೆಲ್ಲರ ಪಾಲಿಸಿ ರಕ್ಷಿಪನೊ ಗುಬ್ಬಿಯಾಳೊ
ದಾಮೋದರನ ನೆನೆದರೆ ಪಾಮರತ್ವ ಬಿಡಿಸುವನೊ ಗುಬ್ಬಿಯಾಳೊ 6
ಸಂಕರ್ಷಣನ ಧ್ಯಾನದಿಂದ ಸಂತಾನ ಅಭಿವೃದ್ಧಿಯು ಗುಬ್ಬಿಯಾಳೊ
ವಾಸುದೇವನ ದಯದಿಂದ ವಂಶಉದ್ಧಾರವೊ ಗುಬ್ಬಿಯಾಳೊ 7
ಪ್ರದ್ಯುಮ್ನನ ನೆನೆದರೆ ಭೂಪ್ರದಕ್ಷಿಣೆ ಫಲವು ಗುಬ್ಬಿಯಾಳೊ
ಅನಿರುದ್ಧನ [ಸೇವಿಸೆ ಪುನೀತರಹೆವೊ] ಗುಬ್ಬಿಯಾಳೊ 8
ತಿಳಿಯಿರೊ ಗುಬ್ಬಿಯಾಳೊ
ಅಧೋಕ್ಷಜ ನಮ್ಮೆಲ್ಲರಿಗಾಧಾರವಾಗಿಹನೊ ಗುಬ್ಬಿಯಾಳೊ 9
ನಾರಸಿಂಹದೇವರು ನಮ್ಮ ಕುಲದೈವವೊ ಗುಬ್ಬಿಯಾಳೊ
ಅಚ್ಯುತ ಲಕ್ಷ್ಮಿಯ ಕೂಡಿ ಸಚ್ಚಿದಾನಂದನೊ ಗುಬ್ಬಿಯಾಳೊ 10
ಜನಾರ್ದನದೇವರು ಜಗಕೆಲ್ಲ ಶ್ರೇಷ್ಠರೊ ಗುಬ್ಬಿಯಾಳೊ
ಕ್ಷಮಿಸುವನೊ ಗುಬ್ಬಿಯಾಳೊ 11
ಹರಿನಾಮಾಮೃತಕೆ ಸರಿಧರೆಯೊಳಗೆ ಇಲ್ಲವೊ ಗುಬ್ಬಿಯಾಳೊ
ಶ್ರೀಕೃಷ್ಣ ರಂಗೇಶಯೆಂಬೊ ಸಿದ್ಧಕ್ರಿಯ ಬಲ್ಲರೆ ಗುಬ್ಬಿಯಾಳೊ12
ಈ ಗುಬ್ಬಿ ಪಾಡುವರಿಗೆ ಇಹಪರವು ಸಂತತವು ಗುಬ್ಬಿಯಾಳೊ
ಧರಣಿಯೊಳು ಆಚಂದ್ರಾರ್ಕ ತಾರಕವಾಗಿಹರು ಗುಬ್ಬಿಯಾಳೊ 13
ನಿತ್ಯ ಮರೆಯದೆ ನೀ ನೆನೆಮನವೆ
ನಿತ್ಯ ಮನವೆ ಗುಬ್ಬಿಯಾಳೊ 13