ಕರುಣಿಸಿಯಭಯವನು ಕೊಟ್ಟು ಕಾಯುವೆನಿರತಂ
ಕರಕಮಲವದಯಮಾಡೈ
ಅರಿಸಿನ ಹಚ್ಚುವೆನು ಮುದದಿ ಅರಸ ನಿನಗೆ ನಾಂ 1
ಪಂಕಜರಿಪು ನಿಭವಕ್ತ್ರನೆ
ಪಂಕಜ ಸೂರ್ಯನೆ
ಕುಂಕುಮ ಹಚ್ಚುವೆ ನಿನಗೆ ಕೊಡು ನಡು ಪಣೆಯಂ 2
ಭವ ತ್ಕಂಧರವ ನೀಡು ಪರಿಮಳ
ಗಂಧವ ಹಚ್ಚುವೆನು ನಾನು ಕಮಲದಳಾಕ್ಷ 3
ನಿರತವು ಮನ್ಮಾನಸ ಪಂ
ಕರುಹದಿ ಸೇವಿಸುವೆ ನಿನ್ನ ಕರುಣಾನಿಧಿಯೆ
ಸರವನು ಕಂಧರದಿ ಧರಿಸುವೆ ಜಗನ್ನಾಥಾ 4
ನಾಮಾಡಿದ ತಪ್ಪುಗಳಂ
ನೀ ಮನದಲಿ ತರದೆ ಕ್ಷಮಿಸುವದು ಪ್ರಾಣೇಶಾ
ಪ್ರೇಮದಿ ವೀಳ್ಯವ ಶ್ರೀಗುರು
ರಾಮವಿಠಲ ಕೊಡುವೆ ನಿನಗೆ ರಮ್ಯಚರಿತ್ರ 5