ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವಿ ಪಾಲಿಸು| ಅಂಬ| ದೇವಿ ಪಾಲಿಸು ಪ ದೇವಿ ಪರಮಪಾವನೆ ಶಂಕರಿ ಅ.ಪ ಸುರರ ಮೊರೆಯನಾಲಿಸುತಲಿ| ದುರುಳನಾದ ಅರುಣಾಸುರನ ಹರಣ ಹೀರಿ ಮೆರೆವನುಪಮ| ಚರಿತೆ ಎನ್ನಿಷ್ಟಾರ್ಥವೀಯುತ 1 ನಂದಿನಿನದಿಯ ಮಧ್ಯದಿ ನೆಲೆಸಿ | ಬಂಧುಭಾವದಿಂದ ಶರಣ|| ವೃಂದವನ್ನಾನಂದದಿಂದ | ಕಂದರಂತೆ ಸಲಹುತಿರುವೆ 2 ವಿಮಲಚರಿತೆ ಸುಗುಣಭರಿತೆ| ಅಮರವಿನುತೆ ಲೋಕಮಾತೆ|| ಕ್ಷಮಿಸುತೆನ್ನಪರಾಧಗಳನು| ಕಮಲನೇತ್ರೆ ಪರಮಮಂಗಳೆ3 ನಿನ್ನ ಹೊರತು ಪೊರೆವರಿಲ್ಲ| ನಿನ್ನ ಭಜಿಸುತಿರುವೆನಲ್ಲ|| ಎನ್ನನು ಪೊರೆವ ಭಾರವೆಲ್ಲ| ನಿನ್ನ ಪದಕೊಪ್ಪಿಸಿದೆನಲ್ಲ 4 ಪಂಕಜಾಕ್ಷಿ ಪಾಪರಹಿತೆ| ಕಿಂಕರಜನನಿ ಶಂಕರಪ್ರಿಯೆ|| ಶಂಖಚಕ್ರಧಾರಿಣಿ ದೇವಿ| ವೆಂಕಟರಮಣನ ಸೋದರಿ ಶಂಕರಿ5
--------------
ವೆಂಕಟ್‍ರಾವ್
ಮಾತೆ ದಾತೆ ಹಿತೆ| ಘನ ಸುಚರಿತೆ| ಮಾತೆ ದಾತೆ ಹಿತೆ ಪ ಮಾತೆ ಸದ್ಗುಣ ಭರಿತೆ ಘನ ವಿ| ಖ್ಯಾತೆ ಭುವನ ವಿರಾಜಿತೆ|| ದಾತೆ ದೀನಾನಾಥ ಜನಸಂ|ಪ್ರೀತಿಯುತೆ ಪರಿಪೋಷಿತೆಅ.ಪ ಕರವ ಜೋಡಿಸಿ| ವಿನಯದಿಂದಲಿ ಬೇಡುವ|| ಅಖಿಳ ಸಂಪದವೀಯುತ 1 ಪಾದ ಸೇವೆಯ ಗೈಯುವೆ|| ಆದರಿಸಿ ಪೊರೆಯೆನ್ನ ಸರ್ವಪ| ರಾಧಗಳನು ಕ್ಷಮಿಸುತ 2 ಜನನಿ ನೀನತಿಕರುಣೆಯಿಂದಲಿ| ಸುರರಿಗಭಯವನೀಯುತ|| ದುರುಳ ದೈತ್ಯನ ವಧಿಸಿ ನಂದಿನಿ| ನದಿಯ ಮಧ್ಯದಿ ನೆಲೆಸಿದ3 ಪಂಕಜಾಂಬಕಿ ಪರಮಪಾವನೆ| ಶಂಕರಿ ಸರ್ವೇಶ್ವರಿ|| ವೆಂಕಟಾಚಲನಿಲಯ ಶ್ರೀವರ| ವೆಂಕಟೇಶನ ಸೋದರಿ4
--------------
ವೆಂಕಟ್‍ರಾವ್
ಯಾಕೆ ಈ ದಾಸನನು ಸಲಹಲೊಲ್ಲೆ ಶ್ರೀಕಾಂತ ಭಕ್ತನನು ಕಾಯಲೊಲ್ಲೆ ಪ ತರಳತನದಲಿ ನಾನು ಪಾಪಗಳ ಮಾಡಿದರೆ ಪರಮಾತ್ಮ ಸದ್ಗುರುವೆ ತಿಳಿದು ಮಾಡಿದನೇ ನಿರುತ ಯೌವನದಲ್ಲಿ ಪಾಪಗಳ ಮಾಡಿದರೆ ಅರಿತು ಮಾಡಿದೆನೆಂದು ಬಗೆದೆಯಾ ಹರಿಯೇ 1 ಈಗ ವಾರ್ಧಿಕ್ಯದಲಿ ಪಾಪಮಾಡಿದೆನೆಂದು ನಾಗೇಶಶಯನನೇ ಮುನಿದೆಯಾ ಹರಿಯೇ ಜಾಗುಮಾಡದೆ ನೀನು ಅಜಮಿಳಗೆ ವಲಿದಂತೆ ಬೇಗನೇ ಸಲಹಯ್ಯ ನಾಮಸ್ಮರಿಸುವೆನೊ2 ಹರಿಸೇವೆಯನ್ನು ನಾ ಭಕ್ತಿಯಲಿ ಗೈವೇ ಹರುಷದಿಂ ಹರಿಯೆಂನ ಪಾಪಗಳ ಕ್ಷಮಿಸುತ್ತ ಸಿರಿ ಚನ್ನಕೇಶವನೆ ಮುನಿಯದಿರು ತಂದೆ 3
--------------
ಕರ್ಕಿ ಕೇಶವದಾಸ