(ಕಾರ್ತೀಕ ದಾಮೋದರನನ್ನು ನೆನೆದು)
ಗೋವಿಂದ ಪಾಲಯ ಗೋಪಾಲ ಬಾಲ
ಗೋಪಗಣೇಡಿತಗುಣ ವರುಣಾಲಯ ಪ.
ದೀನ ದಯಾಪರ ದಿತಿಜವಿದಾರ
ನಾನಾವತಾರ ನಂಬುವರಿಗಾಧಾರ
ಏನು ತಪ್ಪಿದ್ದರು ಕ್ಷಮಿಸು ರಮಾವರ 1
ಭೂಧರ ಬಲಭದ್ರ ಸೋದರವೇಷ
ಆದರದಲಿ ನಿನ್ನ ಪೊಗಳುವೆ ಶ್ರೀಶ
ಶ್ರೀದ ಕಾರ್ತೀಕ ದಾಮೋದರ ಹಾಸ 2
ಪರಮ ಪಾವನ ಶೇಷಗಿರಿವರ ಮೂರ್ತೆ
ನೀನರಿಯೆಯಾ ದಾಸರ ಮನದಿರವಾರ್ತೆ
ಪರಿಹರಿಸಾರ್ತಿಯ ಪದ್ಮಜನುತಕೀರ್ತೆ 3