ಒಟ್ಟು 8 ಕಡೆಗಳಲ್ಲಿ , 6 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಹಿ ಕೃಷ್ಣ ಮಹಿಪತಿ ಮಧುರೆಗೆ ಪೋಗೋದೇನೊ ಕಾರಣ ಯದುಕುಲನಾಥ ಪಾಹಿ ಕೃಷ್ಣ ಮಹಿಪತಿ ಪ ಮಧುವೈರಿ ತಾ ಬ್ಯಾಗ ಮಧುರಾಪಟ್ಟಣದಾರಿ ಹಿಡಿದಿರೆ1 ದಧಿ ಮಥನವ ಮಾಡಿ ಕದವ ತೆಗೆದು ಕಂಡರು ಬ್ಯಾಗ 2 ಮಿಂಚಿನಂತ್ಹೊಳೆವೊ ವಿರಿಂಚನಯ್ಯನ ರಥ ಚಂಚಲಾಕ್ಷಿಯರು ನೋಡುತಲಾಗ 3 ಬನ್ನಿರೆ ಬನ್ನಿರೇ ಪನ್ನಂಗಶಯನನ ಬೆನ್ನ್ಹತ್ತಿ ನಾವು ಹೋಗುವೊಣೀಗ 4 ಫುಲ್ಲನಾಭನೆ ಮತ್ತೆಲ್ಲಿಗೆ ಪಯಣವೊ ಎಲ್ಲ ವಾರ್ತೆಗಳ್ಹೇಳೊ ನಮಮುಂದೆ 5 ನಂದಗೋಪನ ಬುದ್ಧಿ ಮಂದವಾಯಿತೇನೊ ವೃಂದಾವನವ ಬಿಟ್ಟು ಕಳಿಸುವ 6 ಕೂಸೆಂದು ನಿನ್ನ ಮುದ್ದಿಸುವೊ ಮೋಹಗಳೆಲ್ಲ ಬ್ಯಾಸರಿಕ್ಯಾಯ್ತೇನೆಶೋದೆಗೆ 7 ಸಾಧುಗೋವ್ಗಳನೆಲ್ಲ ಕಾದುಕೊಂಡಿರುವೋದು ಶ್ರೀಧರ ನೀದಾರಿಗ್ಹೇಳಿದ್ಯೊ 8 ವತ್ಸಕಾಯ್ದುದು ಮನಕಿಚ್ಛಿಲ್ಲದಿರಲು ಶ್ರೀ- ವತ್ಸಧರನೆ ಸುಮ್ಮನಿರೊ ನೀನು 9 ನಮ್ಮನೆಯಲಿ ಪಾಲ್ ಬೆಣ್ಣೆ ಕದ್ದನೆಂದು ನಿಮ್ಮಮ್ಮನಲ್ಲಿ ದೂರಿದೆವೇನೊ 10 ಕ್ಷೀರಗಡಿಗೆ ಒಡೆದೋಡಿ ಪೋದನೆಂದು ದೂರಿಕೊಂಡವರಲ್ಲೋ ನಿನ್ನನು 11 ಊರೊಳಗೊಬ್ಬಳು ದೂರಿಕೊಂಡರೆ ನಾವು ಭಾರಿ ಶಿಕ್ಷೆಯ ಮಾಡಿ ಬಂದೆವೊ 12 ಎಂದಾದರೊಂ(ದು) ದಿನ ಅಂದ ಮಾತುಗಳೆಲ್ಲ ಇಂದೆ ತಪ್ಪಿ ್ಹಡಿಯದೆ ಕ್ಷಮಿಸಯ್ಯ 13 ಕದವ ತೆಗೆಯದ ಮುಂಚೆ ಸದನದ್ವಾರದಿ ಬಂದು ಯದುನಾಥ ಎದುರೆ ನಿಂತಿರುವ್ಯಲ್ಲೊ 14 ಕಂಗಳಿಂದಲಿ ನೋಡ್ಯಾಲಿಂಗನೆ ಮಾಡುತ ಸಂಗಸುಖದಿ ಬೆಳೆದಿದ್ದೇವೊ 15 ನಿನ್ನ ನೋಡದ ಕಂಗಳಿನ್ನ್ಯಾತಕಿರಲು ಕೇ(ಗೇ?) ರೆಣ್ಣೆಯ ತೀಡಿಕೊಂಬುವೋಣೇನೊ 16 ಮಾರನಾಟಕೆ ಮನಸೋತು ನಿನ್ನನೆ ನಾವು ಜಾರಪುರುಷನೆಂದು ತಿಳಿಯದೆ 17 ಇರುಳೇಯೆ ಮನೆಯಲ್ಲಿ ಕೊಳಲೂದೋ ಕಾಲಕ್ಕೆ ನಳಿನಾಕ್ಷ ನಾವ್ಹ್ಯಾಗೆ ಬಂದೆವೊ 18 ಕಾಲಿಗಿಡುವ ವಸ್ತು ಕರದಲಿಟ್ಟುಕೊಂಡು ವಾಲೆ ಮೂಗುತಿ ಹೆರಳಿಗೆ ಚುಚ್ಚಿ 19 ಹರಡಿ ಕಂಕಣ ಪಾದದ್ಹರಡಿನ ಮ್ಯಾಲಿಟ್ಟು ಮುಡಿವ ಮಲ್ಲಿಗೆ ಕಿವಿಯಲಿ ಸುತ್ತಿ 20 ಹಾರ ಪದಕವ ಟೊಂಕಕೆ ಕಟ್ಟಿ ನಾವು ಉಟ್ಟ ಸೀರೆ ಕುಪ್ಪುಸ ಪಾರವಿ(ಪರಿವೆಯಿ?)ಲ್ಲದೆ 21 ಗಂಡಮಕ್ಕಳಿಗುಣಬಡಿಸಿ ಮಂಡಿಯ ಮ್ಯಾಲೆ ಸಂಡಿಗ್ಹುಳಿಯನ್ಹಾಕಿ ಬಂದೆವೊ 22 ಎಲೆಯ ಮ್ಯಾಲ್ಹಾಕೋ ಪದಾರ್ಥವೆಚ್ಚರವಿಲ್ಲ ತಲೆಯ ಮ್ಯಾಲ್ಹಾಕಿ ಬಂದೆವು ನೋಡೊ 23 ಬೆಣ್ಣೆ ಚೆಟ್ಟಿಗೆಯ ಬೆಕ್ಕಿನ ಮುಂದೆ ಸರಿಸೇವೊ ಸಣ್ಣ ಕೂಸಿನ ನೆಲವಿನೊಳಿಟ್ಟು 24 ಅಳುವೊ ಮಕ್ಕಳನೆ ಆಕಳ ಕಣ್ಣಿಗೆ ಕಟ್ಟಿ ಕರು- ಗಳ ತೊಟ್ಟಿಲೊಳಗೆ ಇಟ್ಟು 25 ಬಂಗಾರದ್ಹಾರ ಪದಕನ್ಹಾಕಿ 26 ಅಚ್ಛದಿಂದೆತ್ತಿ ಮುದ್ದಿಡುತಿರೆ ನಮ ಗಲ್ಲ ಕಿ- ತ್ತಿ ಚಿವರಿಕೊಂಡ್ಹೋಯಿತು 27 ಬಂಗಾರ ಕಳಕೊಂಡು ಮಂಗನಂತಾದೆವೊ ಮಂಗಳಾಂಗನೆ ಇಷ್ಟು ಮರುಳಾಗಿ 28 ವ್ಯತ್ಯಾಸದಿಂದ್ವಸ್ತ್ರ ಇಟ್ಟು ಬಂದೆವೊ ನಾವು ಬಿಟ್ಟೊ ್ಹೀದನೆಂಬೊ ಸಿಟ್ಟಿಲ್ಲವೊ 29 ಅಡಅಡವಿಲಿ ನಿನ್ನ ಹುಡುಕುತ ತಿರುಗೇವೊ ಕಡಲಶಯನ ಕರುಣದಿ ಬಂದ್ಯೊ 30 ರಾಸಕ್ರೀಡೆ ಜಲಕ್ರೀಡೆನಾಡಿದ ವಾರ್ತೆ ರಾ(ರಹ?)ಸ್ಯ ಒಬ್ಬರಿಗೆ ನಾವ್ ತಿಳಿಸದೆ31 ಅತ್ತೆಮಾವಂದಿರೀ ವರ್ತಮಾನವ ಕೇಳಿ ನೆತ್ತಿಮ್ಯಾಲ್ಹೊಡದ್ಹೊರಗ್ಹಾಕೋರೊ 32 ಪತಿಗಳು ನಮ್ಮನ್ನು ಬಿಟ್ಟರೂ ಬಿಡಲೊ ಶ್ರೀ- ಪತಿ ನಿನ್ನ ಬಿಟ್ಟು ಪೋಗುವರಲ್ಲ 33 ಮನೆ ಧನ ಧಾನ್ಯ ಮಕ್ಕಳು ಪತಿಗಳು ಬ್ಯಾ- ಡ ನಮಗೊಂದು ಸ್ಥಾನ ತೋರಿಸೊ ನೀನು 34 ಕುಸುಮ ಮಲ್ಲಿಗೆ ಒಣಗಿದ ದಾರ ಮತ್ಯಾವ ಕೆಲಸಕ್ಕೆ ಬರುವುದೊ 35 ಎಲ್ಲಿ ಬಿಲ್ಲ ್ಹಬ್ಬ ಮತ್ತೆಲ್ಲಿ ಸೋದರಮಾವ ಎಲ್ಲಿಂದ ಕರೆಯ ಬಂದನು ಈತ 36 ಕ್ರೂರನೆನ್ನದಲೆ ಅಕ್ರೂರನೆಂಬುವೋ ಹೆ- ಸರ್ಯಾರಿಟ್ಟರ್ಹೇಳೊ ಈ ಪುರುಷಗೆ 37 ನಮ್ಮ ನಿಮ್ಮನು ಅಗಲಿಸುವೋನು ನಮ್ಮಂಥ ಹೆ- ಣ್ಣು ಮಕ್ಕುಳು ಇವಗಿಲ್ಲವೆ 38 ಇಳಿಯಿಳಿ ಇಳೆಯಲ್ಲೀಳಿಗೆಯ ಕೊಟ್ಟೇವೊ ನಮ್ಮ ಕೊ- ರಳ ಕೊಯ್ದು ಮುಂದಕ್ಹೋಗೋ ನೀ 39 ವಾಸುದೇವನೆ ನಿನ್ನ ರಥದ ಗಾಲಿಗೆ ನಾವು ಹಾಸಿಕ್ಯಾಗಿ ಅಡ್ಡಬಿದ್ದೆವೊ 40 ಮಧುರಾಪಟ್ಟಣದಲ್ಲಿ ಇದ್ದ ಸತಿಯರೆಲ್ಲ ಮದನಮೋಹನ ನಿನ್ನ ಬಿಡುವೋರೆ 41
--------------
ಹರಪನಹಳ್ಳಿಭೀಮವ್ವ
(5) ಶ್ರೀನಿವಾಸ ವಿಪ್ರವಂದಿತ ಪಾಪಕೋಟಿ ಕುಲನಾಶಾ ಶ್ರೀವೆಂಕಟೇಶಾ ಪ ನಿಜನುಡಿಯ ಭೃಗುನುಡಿಯೆ ಮುನಿಮಂಡಲಿಯ ನಡೆಯೆ ತ್ರಿಜಗಾಗ್ರಪೂಜಿತ ಪರಬ್ರಹ್ಮ ನೀನೇ 1 ಪಶುವತ್ಸಗೋಪಾಲ ಸರ್ವವೂ ನೀನಾಗೆ ಬಿಸಜಭವ ಬೆದರುತ್ತ ಪದಕೆರಗಿದ 2 ಮೋಹಿನಿಯವೇಶದಿಂ ರಕ್ಕಸನ ಭಸ್ಮಿಸಿ ಪಾಹಿಮೆನಲಾ ದಕ್ಷ ವೈರಿಯ ರಕ್ಷಿಸಿದೆ 3 ಗಿರಯನೇ ಕೊಡೆವಿಡಿದು ಗೋಕುಲವನೆ ಕಾಯ್ದೆ ಸುರರಾಜ ಗರಿಮುದುರಿ ಶರಣೆಂದು ಬಂದ 4 ವಿಧವರದಿ ಬೆರೆದ ಹಿರಣ್ಯಕಶಿಪುವ ಬಗೆದು ಸದೆದೆ ಶಿವಕಾವಲಿನ ಬಾಣನಂ ಬಿಡವೇ 5 ಸಾಸಿರಗಳರವತ್ತು ಸಗರಸುತರನು ಸುಟ್ಟು ಘಾಸಿಹರಿಸಿದೆ ಜಗದೆ ಜೀವ ಜಂತುಳಿಗೆ 6 ಪಾತಕಿಯ ರಾವಣನು ಕಾರವರ ಕೊಂದೇ 7 ಬಲಿದ ಶಾಪವ ಕಳೆದು ಕಾಯ್ವ ಬಂಧೂ 8 ಸಾವುಂಡ ಶಿಶುವನು ಗುರುವಿಗೆ ನೀ ತಂದಿತ್ತೆ ನೋವುಂಡ ಇಂದ್ರಂಗೆ ಲೋಕಗಳನಳೆದೆ 9 ಅಜಕಪಾಲವ ಬಿಡಿಸಿ ಮೃತ್ಯುಂಜಯನ ಹರಸಿ ಅಜಮಿಳನ ನೀ ಮುಕ್ತಿಸ್ಥಾನಕ್ಕೆ ತಂದೆ 10 ಸರ್ವಕಾಲಗಳಲ್ಲು ಅಪರಾಧಿ ನಾನಯ್ಯ ಗರ್ವಿಯೆನಿಸದೆ ತಪ್ಪು ಕ್ಷಮಿಸಯ್ಯ ತಂದೆ 11 ಆನೆ ಅಳುವುದು ಕೇಳಿ ಮೊಸಳೆಬಾಯನು ಸೀಳ್ದೆ ನೀನೆ ಆಪದ್ಭಂದು ಕಾರುಣ್ಯಸಿಂಧು12 ಅರಗಿನ ಮನೆಯಲ್ಲಿ ಭರದಿಂದ ಬಾಂಧವರಿಗೆ ಉರಿಭಯವ ತಪ್ಪಿಸಿ ಪೊರೆದ ಪ್ರಭುವೇ13 ದ್ರುಪದ ಪುತ್ರಿಗೆ ಮಾನ ಸಂರಕ್ಷಣೆಯನು ಮಾಡಿ ಕೃಪೆತೋರಿಪಾರ್ಥಂಗೆ ಸಾರಥಿಯು ಆದೆ 14 ಕಾಲ ವಾಲಿಪ್ರಾಣಕೆ ಶೂಲ ಲೀಲೆಯಿಂ ಭಕ್ತರಂ ಪಾಲಿಸುವೆ 15 ಪಾವನದ ಪಾದಗಳನಿಂತು ಮುಡಿಯಮೇಲೆ ಭಾವಿಸುವೆ ಭವಕಳೆಯೆ ನಾತಾಳೆ ನಾಳೆ 16 ತಾಪಗಳು ಮೂರನುಂ ಹರಿಪ ಸಂಕಟದೂರ ಕಾಪಾಡು ಶ್ರೀಹರಿ ಬಂಧುಬೇರಿಲ್ಲ ಭಕ್ತಸತ್ರಾ 17 ಶರಣಸಂರಕ್ಷಣ ಬಿರುದು ಧರಸಿಹೆ ನಿತ್ಯ ಭರದಿ ಶಾಂತಿನೀಡೋ ಚರಣಕ್ಕೆ ಶರಣು 18 ಕ್ಷಾಮಡಾಮರ ಕಳೆಯೆ ಸುವೃಷ್ಟಿಯ ಕರೆವೆ ಕಾಮಿತಾರ್ಥದ ಕಾಮಧೇನು ಸ್ವಾಮಿ ತಾಯಿತಂದೆ 19 ಚಕ್ರಧರ ಚಕ್ರಧರ ಭಜಿಪ ಭಕ್ತರ ಪಾಲ ನರಸಿಂಹ ನರಸಿಂಹ 20 ಕ್ಷೇಮಕರಗರುಡನೇ ಧ್ವಜನು ವಾಹನನು ಭೀಮ ಹನುಮ ಪ್ರೇಮ ಹೆಜ್ಜಾಜಿಶ್ಯಾಮ ಸ್ವಾಮಿ21
--------------
ಶಾಮಶರ್ಮರು
ಎಲ್ಲನು ನಿನಗೆ ಕೂಡಿತಯ್ಯ ಹರಿ ಪುಲ್ಲನಾಭ ದಯ ಮಾಡಯ್ಯ ಪ ಖುಲ್ಲನು ನಾಬಲು ಎಲ್ಲಿಯುಸಲ್ಲದೆ ತಲ್ಲಣಿಸುತ ನಿನ್ನ ಬಲವಂದೆ ದೇವ ದೇವ ಅ.ಪ ಧೃಢಗುಣ ಎನ್ನೊಳಿಲ್ಲಯ್ಯ ಬಲು ನುಡಿ ಹೀನ ನಾಕಡು ಪಾಪ್ಯಯ್ಯ ನಡೆ ನುಡಿ ಇಲ್ಲದೆ ಕಡುನೊಂದೀಗ ನಿಮ್ಮ ನ್ಹುಡುಕುತ ತಿರುಗುವೆ ಜಡಜಾಕ್ಷನೆ ಪೊರೆ 1 ಪರರದ್ರವ್ಯವಪಹರಿಸಿದೆನೊ ನಾ ಪರಮನೀಚನಾಗಿ ಚರಿಸಿದೆನೊ ಅಗಣಿತ ದುರಿತವನುನಾ ಜರೆಯದೆ ಪರಿಪರಿ ಮಾಡಿದೆನೊ ಮರೆವೆಲಿ ಮಾಡಿದ ಪರಮ ಎನ್ನತಪ್ಪು ಕರುಣಾಕರನೆ ನೀಕರುಣದಿ ಕ್ಷಮಿಸಯ್ಯ 2 ಶರಣಾಗತ ವತ್ಸಲನೆಂದು ನಿನ್ನ ಮರೆಯಹೊಕ್ಕೆನೆಯ್ಯ ದಯಾಸಿಂಧು ಮೊರೆಕೇಳು ಭಕ್ತರ ಪ್ರಿಯಬಂಧು ಎನ್ನ ದುರಿತದಿ ಕಡೆ ಹಾಯ್ಸಯ್ ಇಂದು ಶಿರಬಾಗಿ ನಿಮಗೆ ಸೆರೆಗೊಡ್ಡಿ ಬೇಡುವೆ ಕರಪಿಡಿ ಬಿಡಬೇಡ ಸಿರಿವರ ಶ್ರೀರಾಮ 3
--------------
ರಾಮದಾಸರು
ಮನ್ನಿಸಿ ಸಲಹಯ್ಯ ಎನ್ನ ತಪ್ಪು ಒಪ್ಪಿಕೊ ಮಹರಾಯ ಪ ಮನ್ನಿಸಿ ಸಲಹಯ್ಯ ಪನ್ನಂಗಶಯನನೆ ನಿನ್ನ ಧ್ಯಾನಾಮೃತವನ್ನು ಕರುಣದಿತ್ತು ಅ.ಪ ನಾನಾಜನುಮ ಸುತ್ತಿ ಮತ್ತೆ ಹೀನ ಜನುಮವೆತ್ತಿ ಜ್ಞಾನವಿನಿತಿಲ್ಲದೆ ನಾನಾಪಾಪಗೈದೆ ದೀನಜನರ ಬಂಧು ನೀನೆ ಕ್ಷಮಿಸು ತಂದೆ 1 ಮರವೆ ದೇಹವೊದ್ದು ಸಂಸಾರ ಮರವೆಯೊಳಗೆ ಬಿದ್ದು ಶರಣ ಸತ್ಪುರುಷರ ನೆರವಿನಿತರಿಯದೆ ಮರುಳನಾದೆ ಹರಿ ಮುರಹರ ಕ್ಷಮಿಸಯ್ಯ 2 ಬರಬಾರದು ಬಂದೆ ಬಲು ವಿಧ ದುರಿತದೊಳು ಬೆಂದೆ ಕರುಣದಿ ಕ್ಷಮೆಮಾಡಿ ಪೊರೆಯೊ ಶ್ರೀರಾಮನೆ 3
--------------
ರಾಮದಾಸರು
ಸರ್ವಸಾರಭೋಕ್ತ ಸಕಲ ಮಂಗಲದಾಯಿ ವೆಂಕಟೇಶ ನಿರ್ವಹಿಸುವವ ನೀನೆ ನಿತ್ಯಕರ್ಮಗಳಿಂದ ವೆಂಕಟೇಶ ಪ. ದೇವರ್ಷಿ ಪಿತೃಗಣರೊಳಗಿದ್ದು ರಾಜಿಪ ವೆಂಕಟೇಶ ಭೂವರರಲ್ಲಿ ವಿಭೂತಿರೂಪನು ನೀನೆ ವೆಂಕಟೇಶ ಸೇವಕ ಜನರನು ಸುಲಭದಿ ಸಲಹುವ ವೆಂಕಟೇಶ ಪಾದ ಪದ್ಮವೆ ಗತಿ ಎಂಬೆ ವೆಂಕಟೇಶ 1 ಇಂದಿರಾಧವ ಯದುನಂದನನೆನಿಸಿದೆ ವೆಂಕಟೇಶ ಸುಂದರ ವಿಗ್ರಹ ಸುಗುಣೇರ ಒಲಿಸಿದೆ ವೆಂಕಟೇಶ ಹಿಂದೆ ಮುನ್ನ ಭವದಂದವನರಿಯೆನು ವೆಂಕಟೇಶ ಮಂದಮತಿಯ ಕರ್ಮಕುಂದನು ಕ್ಷಮಿಸಯ್ಯ ವೆಂಕಟೇಶ 2 ಸ್ವೋದರಗತ ಜಗದಾಧಾರಗುಣನಿಧಿ ವೆಂಕಟೇಶ ಭೂಧರಗಿರಿವರ ಶೋಭಿತ ಮೂರುತಿ ವೆಂಕಟೇಶ ಶ್ರೀಧರಾಕಾಂತ ನಿನ್ನಾಧಾರ ನಂಬಿದೆ ವೆಂಕಟೇಶ3
--------------
ತುಪಾಕಿ ವೆಂಕಟರಮಣಾಚಾರ್ಯ
ಸಿದ್ಧಿದಾಯಕ ವಿಘ್ನರಾಜ ಸುಪ್ರ ಸಿದ್ಧ ಮಹಿಮಯೋಗಿಹೃದ್ಯ ರವಿತೇಜ ಪ. ಬಾದರಾಯಣ ಸುಪ್ರಸಾದ ಸತ್ಪಾತ್ರ ಶ್ರೀಧರೋಪಾಸನಶೀಲ ಸುಪವಿತ್ರ 1 ಭೋಗೀಂದ್ರಭೂಷಣ ನಾಗೇಂದ್ರವದನ ಭಾಗವತರ ಭಾಗ್ಯಸದನ ಜಿತಮದನ 2 ಸರ್ವಾಪರಾಧವ ಗುರುವರ್ಯ ಕ್ಷಮಿಸಯ್ಯ ಸರ್ವೋತ್ತಮ ಲಕ್ಷ್ಮೀನಾರಾಯಣಪ್ರಿಯ 3 ಶ್ರೀಹರಿ ಸಂಕೀರ್ತನ
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀವಾಸುದೇವಕಾಯೊಈ ವಿಷಯ ಬಾಧೆಗಳನೊದೆದು ಕಳೆದೆಮ್ಮ್ಮಯ್ಯನೆ ಪ.ತಂದೆ ತಾಯಿಗಳಿಲ್ಲ ಬಂಧು ಬಳಗಿಲ್ಲಭವದಂದುಗದಿ ಸಿಲುಕಿ ಬಲು ನೊಂದೆನಯ್ಯಇಂದಿರೆರಮಣ ನೀನೆ ತಂದೆ ಬಾಲಕನಕುಂದುನೋಡದೆ ಘಕ್ಕನೆತ್ತಿಕೊಂಡು1ಒಂದು ಘಳಿಗೆಯೊಳೊಮ್ಮೆಹರಿಕೃಷ್ಣ ಮುಕುಂದಎಂದೆನ್ನ ಬಾಯಿಗೆ ಬರಲಿಲ್ಲವೊಮಂದನರರೋಲೈಸಿ ಮಸಿವರ್ಣನಾದೆಸಿರಿಕಂದರ್ಪಜನಕ ಕಡುಪಾಪಿ ನಾನಯ್ಯ 2ವೈಭವಯುತರ ಕಂಡು ವೈಮನಸಿಯಾಗಿ ವೃಥಾಸುಯಿಗರೆದುಗರೆದು ಕಾಲವ ಕಳೆದೆನೊಧೈರ್ಯವಿಡಿದೊಮ್ಮೆ ನಿನ್ನಯ ಮೂರುತಿಯ ಮುಂದೆಮೈಗೆಡಹಿ ನಮಿಸಲೊಲ್ಲದ ಪಾಪಿಯ 3ನೀರ ತಡಿಯಲಿ ಕುಳಿತು ನಾನಾ ಕುವಚನಗಳಪಾರವಿಲ್ಲದೆ ಬೊಗಳಿ ಬೇಸರುವೆನೊಓರಂತೆ ನಿನ್ನ ಕಥೆಕೇಳಿಕರ್ಣಾಮೃತದಸಾರಕೊಳದರ್ಭಕಗೆ ಸ್ಮರಣೆಯನಿತ್ತು4ಘನ್ನ ಪಾತಕಿಯು ನಾನಾದರೇನೊ ದಯಾಪೂರ್ಣನೆಂಬೊ ಬಿರುದು ನಿನ್ನದಲ್ಲೆಮುನ್ನಿನಪರಾಧಗಳ ಕ್ಷಮಿಸಯ್ಯ ತಂದೆ ಪ್ರಸನ್ನ ವೆಂಕಟಾಚಲ ನಿವಾಸ ಕೃಷ್ಣ 5
--------------
ಪ್ರಸನ್ನವೆಂಕಟದಾಸರು
ಸಿದ್ಧಿದಾಯಕ ವಿಘ್ನರಾಜ ಸುಪ್ರಸಿದ್ಧ ಮಹಿಮಯೋಗಿಹೃದ್ಯ ರವಿತೇಜ ಪ.ಬಾದರಾಯಣಸುಪ್ರಸಾದಸತ್ಪಾತ್ರಶ್ರೀಧರೋಪಾಸನಶೀಲ ಸುಪವಿತ್ರ 1ಭೋಗೀಂದ್ರಭೂಷಣ ನಾಗೇಂದ್ರವದನಭಾಗವತರ ಭಾಗ್ಯಸದನಜಿತಮದನ2ಸರ್ವಾಪರಾಧವ ಗುರುವರ್ಯ ಕ್ಷಮಿಸಯ್ಯಸರ್ವೋತ್ತಮ ಲಕ್ಷ್ಮೀನಾರಾಯಣಪ್ರಿಯ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ