(ತುಳಸೀ ದೇವಿ ಪ್ರಾರ್ಥನೆ)*
ಮದ್ದಾನಿಕ್ಕಿದೇನೆ ಹರಿಗೆ ಮುದ್ದು ತುಳಸಾ ದೇವಿ
ಶುದ್ಧಾಮನದಿ ಪೂಜಿಸುವರಾ ಸಿದ್ಧವಾಗಿ ಕಾಯುವಿ ಪ.
ಕಮಲ ಮಲ್ಲಿಕಾದಿ ನಾನಾ ಸುಮನ ತತಿಗಳಿಂದಾ
ನಿತ್ಯ ನಮಿಸೆ ಭಕ್ತಿಯಿಂದಾ
ಅಮಿತ ಮಹಿಮ ನಿನ್ನ ಹೊರತು ಕ್ಷಮಿಸನು ಮುಕುಂದಾ
ಭ್ರಮಿತನಾದ ನಿನ್ನ ಮೇಲೆ ಕಮಲೇಶ ಗೋವಿಂದ 1
ಆದಿ ಲಕ್ಷ್ಮಿದೇವಿಯನ್ನು ಉರದೊಳಿಟ್ಟು ನಿನ್ನ
ಪಾದದಲ್ಲಿ ಧರಿಸಿದನೆಂದಾದಿಪುರಷನನ್ನ
ಬೋಧಿಸಿ ಕರ್ಣದಲ್ಲಿ ಮಸ್ತಕಾಧಿರೋಹವನ್ನ
ಸಾಧಿಸಿ ತದ್ಭಕ್ತಜನರಿಗಾದಿ ಬಹು ಪಾವನ್ನ 2
ಸಂತತ ಹನ್ನೆರಡು ಕೋಟಿ ಸ್ವರ್ಣಪುಷ್ಪದಿಂದಾ-
ನಂತಾಭವದಿ ಪೂಜಿಸುವುದಕ್ಕಿಂತಲಧಿಕಾನಂದಾ
ಕಂತುಜನಕಗಹುದು ಕೋಮಲಾಂಶದಳಗಳಿಂದಾ
ಇಂತು ಶೇಷಗಿರೀಶಗಾದಿ ಕಾಂತೆ ಮೋಹದಿಂದಾ 3