ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏ ರಂಗಧಾಮ ರಂಗ ಏ ರಂಗಧಾಮ ಪ. ನಾರುವ ಮೈಯವನತ್ತ ಸಾರು ಮುಟ್ಟದಿರೊ ಎನ್ನ ದೂರನಿಲ್ಲು ತರವಲ್ಲ ಏ ರಂಗಧಾಮ ಧೀರ ಮತ್ಸ್ಯರೂಪಕಾಣೆ ಎಲೆ ಸತ್ಯಭಾಮೆ 1 ಚೆಂದವಂತನೆಂದು ನಾ ಬಂದೆ ತರ್ಕಿಸಿ ನಿನ್ನ ಬೆನ್ನು ಡÉೂಂಕಿದೇನೋ ಪೇಳೋ ಏ ರಂಗಧಾಮ ಮಂದರ ಮುಳುಗೆ ಕೂರ್ಮ ಎಲೆ ಸತ್ಯಭಾಮೆ 2 ನೋಡಿದರೆ ಮೈಯೊಳಗೆ ಮೂಡಿರುವ ರೋಮಗಳು ಗಾಡಿಕಾರ ನೀನಾರಯ್ಯ ಏ ರಂಗಧಾಮ ಕ್ರೋಡರೂಪದಿಂದಿಳೆಯ ದಾಡೆಯ ಮೇಲಿಟ್ಟು ತಂದ ಕಾಡವರಾಹನು ಕಾಣೆ ಎಲೆ ಸತ್ಯಭಾಮೆ 3 ಮನುಷ್ಯಾಗಿದ್ದಮೇಲಣಕಾನನದ ಮೃಗರಾಜ ಆನನವಿದೇನೊ ಪೇಳೊ ಏ ರಂಗಧಾಮ ಮಾನಿನಿ ಕೇಳೆ ಪ್ರಹ್ಲಾದನ್ನ ಮಾನಭಂಗಕ್ಕೊದಗಿದ ಶ್ರೀ ನರಸಿಂಹ ಕಾಣೆ ಎಲೆ ಸತ್ಯಭಾಮೆ 4 ದೊರೆತನವುಳ್ಳವನೆಂದು ಮರುಳುಗೊಂಡೆ ನಾ ನಿನಗೆ ತಿರುಕನೆಂಬೋದರಿಯದಾದೆನೊ ಏ ರಂಗಧಾಮ ತರಳೆ ಸುರರಿಗಾಗಿ ಬಲಿಯ ತುಳಿದು ಪಾತಾಳಕೊತ್ತಿದ ಗರುವ ವಾಮನ ಕಾಣೆ ಎಲೆ ಸತ್ಯಭಾಮೆ 5 ಅಡವಿಯೊಳು ಕಟ್ಟಿಗೆಯ ಕಡಿವವನಂತೆ ಕೊಡಲಿಯ ಪಿಡಿವುದೇನೊ ಪುಣ್ಯವಾಸ ಏ ರಂಗಧಾಮ ಮಡುಹಿ ಕ್ಷತ್ರೇರನೆಲ್ಲ [ಮುದದಿ] ಸೇರ್ದ ಮಾತೆಗಾಗಿ ಒಡೆಯನಾದ ಪರಶುರಾಮ ಎಲೆ ಸತ್ಯಭಾಮೆ 6 ಊರಬಿಟ್ಟರಣ್ಯವನು ಸೇರಿ ಮುನಿಗಳಂತಿಪ್ಪ [ಕಾರಣ]ವಿದೇನೊ ಪೇಳೊ ಏ ರಂಗಧಾಮ ಕ್ರೂರರಾವಣನ ಗೆಲಿದು ನಾರಿಸೀತೆಯನು ತÀಂದ ಧೀರರಾಘವನು ಕಾಣೆ ಎಲೆ ಸತ್ಯಭಾಮೆ 7 ವಲ್ಲಭೆಜನರಿಗೆಲ್ಲ ನೀ ವಲ್ಲಭನಾಗಿ ಗೊಲ್ಲನಂತೆ ಗೋವ ಕಾಯುವ ಕಾರಣವೇನೊ ಏ ರಂಗಧಾಮ ಬಿಲ್ಲಹಬ್ಬಕ್ಕೆ ಹೋಗಿ[ಮಲ್ಲ] ಕಂಸನ ಕೊಂದ ಬಲ್ಲಿದ ಶ್ರೀಕೃಷ್ಣ ಕಾಣೆ ಎಲೆ ಸತ್ಯಭಾಮೆ 8 ನಗೆಗೀಡು ಮಾಡಿಕೊಂಡು ದಿಗ್ವಸನನಾಗಿ ನಿಂತ ಹಗರಣವಿದೇನೊ ಪೇಳೊ ಏ ರಂಗಧಾಮ ಮಿಗೆ ಮೂರುಪುರದ ಸತಿಯರ ವ್ರತವ ಕೆಡಿಸಿ ಜಗವ ಮೋಹಿಸುವ ಬೌದ್ಧ ಎಲೆ ಸತ್ಯಭಾಮೆ 9 ಕರದಿ ಖಡ್ಗವನೆ ಪಿಡಿದು ತರಳ ಅಶ್ವವನೇರಿ ತಿರುಗುವುದಿದೇನು ಪೇಳೊ ಏ ರಂಗಧಾಮ ವರ ಹಯವದನ ಹರುಷದಿಂದಲಾಡಿ ಪಾಡಿ ಕಲ್ಕಿಯಾದೆ ಹರಿಲೋಚನೆ ಎಲೆ ಸತ್ಯಭಾಮೆ 10
--------------
ವಾದಿರಾಜ
ಪುರಾಣ ಅಕ್ಕರವುಳ್ಳ ನಮ್ಮಕ್ಕ ರುಕ್ಮಿಣಿ ಕೇಳೆ ರಕ್ಕಸಾಂತಕ ಕೃಷ್ಣ ಮತ್ತೆಲ್ಲೆ ಪೋದ 1 ಸತ್ಯಭಾಮೆಯೆ ನಿನ್ನ ಚಿತ್ತದ್ವಲ್ಲಭ ನೀರೊಳು ಪೊಕ್ಕು ವೇದವ ತಂದು ಪುತ್ರಗಿಡಹೋದ 2 ಪನ್ನಂಗಶಯನ ಲಾವಣ್ಯರೂಪನು ಎನ್ನ ಕಣ್ಣಿಗೆ ಮರೆಯಾಗಿ ಇನ್ನೆಲ್ಲೆ ಹೋದ 3 ಪತಿ ಶರಧಿಯೊಳು ಬೆನ್ನಲಿ ಗಿರಿಯೆತ್ತಿ ತನ್ನ ಭಕ್ತರಿಗೆ ಸುಧೆಯ ನೀಡಲು ಹೋದ 4 ವನಜನಾಭನ ಕಾಣದೆ ಘನಕ್ಲೇಶದಿಂದೀಗ ಮನದ ವಿರಹತಾಪವನು ಸೈರಿಸಲ್ಹ್ಯಾಗೆ 5 ಅವನಿ ಕದ್ದವನ ಸಂಹರಿಸಿ ಕೋರೆಗಳಿಂದ ಭುವನಾಧಿಪತಿಯು ಬರುವನೆ ಸತ್ಯಭಾಮೆ 6 ಹಂಬಲ ಬಿಡದರವಿಂದನೇತ್ರನ ಬಿಟ್ಟು ಸುಂದರಾಂಗನ ಕರೆತಂದು ತೋರೆನಗೆ 7 ಕಂಬದಿಂದೊಡೆದು ಕಂದನ ತಂದೀ(ದೆಯ?) ಕರುಳ್ಹಾರ ಕಂದರದಿ ಧರಿಸಿ ತಾ ಬಂದನು ಭಾಮೆ 8 ಸೃಷ್ಟಿಕರ್ತನುಯೆನ್ನ ದಿ(ದೃ?) ಷ್ಟಿಂದೆ ನೋಡದೆ ಎಷ್ಟು ಹೇಳಲೆ ಪ್ರಾಣ ಬಿಟ್ಟು ಹೋಗುವುದೆ 9 ಪುಟ್ಟ ಬ್ರಾಹ್ಮಣನಾಗಿ ದಿಟ್ಟತನದಲಿ ದಾನವ ಕೊಟ್ಟ ಬಲಿ ಪಾತಾಳಕೆ ಮೆಟ್ಟಿ ಬಾಹುವನೆ 10 ತ್ವರಿತದಿಂದಲಿ ಯಾದವರರಸು ಶ್ರೀಕಾಂತನ ಸರಸವಾಡಲೀಗ ಕರೆಸಿ ತೋರೆನಗೆ 11 ಅರಸರ ಕುಲವ ಸಂಹರಿಸಿ ಕ್ಷತ್ರೇರನೆಲ್ಲ ನಿರುತ ನಿಷ್ಠೆಯಲಿ ತಪ ಚರಿಸಿ ಬಾಹುವನೆ 12 ಹೇಮಪುತ್ಥಳಿಗೊಂಬೆ ಸಾಮಜವರದನ ಆ ಮಾಸುರರೊಡೆಯ ಮೇಘಶ್ಯಾಮನ ತೋರೆ13 ಮಾಡಿ ಯುದ್ಧವ ಲಂಕಾ ನೋಡಿ ದಶಶಿರವ ಚೆಂಡಾಡಿ ಜಾನಕಿಯ ಒಡಗೂಡಿ ಬಾಹುವನೆ 14 ವಾಸುದೇವನ ಕಾಣದೊಂದರಘಳಿಗೀಗ ನಾಲ್ಕು ಯುಗವಾಗಿ ತೋರುವುದೆನ್ನ ಮನಕೆ 15 ಶ್ರೀಶ ತಾ ಸೋಳಸಾಸಿರ ಮಂದಿ ಸತಿಯೇರ ವಿ- ಲಾಸದಿಂದಿದ್ದನೀಗಿಂದೀವರಾಕ್ಷ 16 ಸಿರಿವೊಬ್ಬಳಲ್ಲದೆ ಪರನಾರಿಯರ ಕಣ್ಣು ತೆರೆದು ನೋಡುವ ತಾ ಭೂರಮಣನೆಲ್ಲಿಹನೆ 17 ಖರೆಯವೀಮಾತು ತ್ರಿಪುರದ ಸತಿಯರ ಲಜ್ಜೆ ತೊರೆದು ಕೂಡಿದನೆಂಬೋದು ಪರಮ ಮೋಹಕವೆ18 ನಾಡೊಳಗಧಿಕಶ್ವಾರೂಢ ರುಕ್ಮಿಣೀಕಾಂತನ ನೋಡದÉನಜೀವ ನಿಲ್ಲದು ನೀರಜಾಕ್ಷಿ 19 ಬೇಡಿಕೊಂಬುವೆನೆಂ(ಯೆ?)ದು ಭೀಮೇಶಕೃಷ್ಣನ ಕೂಡಿಸುವೆನೆ ಕರೆತಂದು ಕಮಲಾಕ್ಷಿ 20
--------------
ಹರಪನಹಳ್ಳಿಭೀಮವ್ವ