ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಜ ಭಕ್ತಿ ತೋರಿದನು ಜಗಕೆ ಕೃಷ್ಣ್ಣಾ ವಿಜಯನಾ ಸತಿಯರಿಬ್ಬರ ನೆವದಿ ಮುದದೀ ಪ. ಹಸ್ತಿವರದನು ತಂಗಿಯರ ನೋಡಬೇಕೆಂದು ಹಸ್ತಿನಾಪುರಕೆ ಬಂದ್ಹರುಷದಿಂದ ಚಿತ್ತ ನಿರ್ಮಲದಿ ಪಾಂಡವರು ಪೂಜೆಸೆ ನಲಿದು ಭಕ್ತಿ ಭಾವಕೆ ಮೆಚ್ಚಿ ದ್ರೌಪತಿಗೆ ವಲಿದೂ 1 ಅಣ್ಣನೆಂಬುವ ಭಾವದಲಿ ಸುಭದ್ರೆಯು ಇರಲು ಘನ್ನ ಮಹಿಮನು ಎಂದು ದ್ರೌಪತಿಯು ತಿಳಿದೂ ಸ್ವರ್ಣಗರ್ಭನ ಪಿತನು ಈರೇಳು ಜಗದೊಡೆಯ ಎನ್ನ ಭಾಗದ ದೈವ ಸಲಹೆಂದು ನುತಿಸೇ 2 ಅಂತರಂಗದ ಭಕ್ತಿ ಆನಂದಮಯ ತಿಳಿದು ಕಂತುಪಿತ ಕರಗಿದಾ ಮಮತೆ ಪ್ರೇಮದಲಿ ಶಾಂತಚಿತ್ತಳೆ ತಂಗಿ ದ್ರೌಪತಿಯೆ ಬಾರೆನುತ ಇಂತು ನುಡಿನುಡಿಗೆ ಆಡಲು ಕರುಣೆಯಿಂದ 3 ಕೇಳಿ ಇದನು ಸುಭದ್ರೆ ತಾಳಲಾರದೆ ಅಜ್ಞ ಬಾಲೆ ನಿಜ ತಂಗಿ ನಾನಿರಲು ಐವರಿಗೆ ಲೋಲೆಯಾದವಳೆ ಬಲು ಮೇಲಾದವಳೆ ಎಂದು ಬಾಲಚಂದ್ರನ ಪೋಲ್ವ ಮುಖ ಬಾಡಿಸಿರಿಲೂ 4 ಕಂಡು ಕಮಲಾಕಾಂತ ವಡಹುಟ್ಟಿದಳ ಬೆಂಡಾದ ತೆರವ ಪೇಳೆನಲು ಖತಿಯಿಂದಾ ಪುಂಡರೀಕಾಕ್ಷ ಎನ್ನುಳಿದು ನಿಜ ಭಾವದಲಿ ಕಂಡವರ ಸುತೆ ನಿನಗೆ ಮಿಗಿಲಾದಳೆನಲೂ 5 ಸಚ್ಚಿದಾನಂದ ವಿಗ್ರಹ ನಗುತ ನೆನೆದನೊಂ ದಚ್ಚರಿಯ ಕೌತುಕವ ತೋರ್ವೆನೆಂದೂ ಅಚ್ಛಿದ್ರ ಅಕ್ಲೇಶ ಆನಂದಮಯ ತಾನು ಕ್ಲೇಶ ಪಡುತ ವರಲಿದನೂ 6 ಬಾರಮ್ಮಾ ತಂಗಿ ಸುಭದ್ರೆ ಬೆರಳಲಿ ರಕ್ತ ಸೋರುತಿದೆ ಬೇಗೊಂದು ಚಿಂದಿ ತಾರೆ ತಾರೆನಲು ಗಡಬಡಿಸಿ ಮನೆಯಲ್ಲ ಹುಡುಕತಲಿ ಬಟ್ಟೆ ಕಂಗೆಡುತಾ 7 ಎತ್ತ ನೋಡಿದರತ್ತ ಪಟ್ಟೆ ಪೀತಾಂಬರವು ಕಂಚುಕ ಮಕುಟ ಮೆರೆಯೇ ಚಿತ್ರದಾ ವಸನ ಅರಮನೆಯಲ್ಲಿ ತುಂಬಿರಲು ಮತ್ತದರ ಮಮತೆ ಅಣ್ಣನಿಗೆ ಅಧಿಕವಾಗೆ 8 ಬರಲಿಲ್ಲ ಸುಭದ್ರೆ ಬಾರಮ್ಮ ದೌಪದಿಯೆ ವರ ತಂಗಿ ಬೇಗ ಕೊಡೆ ಹರಕು ಬಟ್ಟೆ ಸುರಿಯುತಿದೆ ರಕ್ತ ಬೆರಳಿಂದ ನೋಡೆಂದನಲು ಕಿರುನಗೆಯ ನಗುತ ಶರಗ್ಹರಿದು ಕಟ್ಟಿದಳೂ 9 ಬಂದಳಾ ವೇಳೆಯಲಿ ಸುಂದರಾಂಗಿ ಸುಭದ್ರೆ ನಿಂದು ನೋಡಿದಳೂ ದ್ರೌಪತಿಯ ಕೃತಿಯಾ ಮಂದಗಮನೆಯು ನಾಚಿ ಮೊಗವ ತಗ್ಗಿಸಿ ನಿಲಲು ಇಂದಿರೇಶನು ಇದರ ವಿವರ ತೋರಿದನು 10 ಬೆರಗಾದ ಪರಿತೋರಿ ಸಿರಿಕೃಷ್ಣ ಕೇಳಿದನು ಜರತಾರಿ ಸೆರಗ್ಹರಿದು ಕಿರುನಗೆಯ ನಕ್ಕಾ ಪರಿ ಏನೆ ಎಲೆ ತಂಗಿ ನರಳುವೋ ಎನ ನೋಡಿ ಪರಿಹಾಸ್ಯವಾಯಿತೆ ನಿನಗೆ ಎಂತೆಂದಾ 11 ಅಣ್ಣಯ್ಯ ನಿನಗೆ ಮಿಗಿಲಾಯಿತೇ ಈ ಶೆರಗು ಎನ್ನ ಅಭಿಮಾನ ಕಾಯುವ ದೈವ ನೀನೂ ಘನ್ನ ಮಹಿಮಾಂಗ ನಿನಗಿನ್ನು ಕ್ಲೇಶಗಳುಂಟೆ ನಿನ್ನ ಲೀಲೆಗೆ ಹರುಷ ಉಕ್ಕಿತೆಂದನಲೂ 12 ಹೇ ನಾರಿ ನಾನನಾಥರಿಗೆ ನಾಥನು ಮುಂದೆ ನೀನಿತ್ತ ವಸನ ಅಕ್ಷಯವಾಗಲೆಂದು ಶ್ರೀನಾಥ ದ್ರೌಪದಿ ಸುಭದ್ರೆಯ ಮನ್ನಿಸಿ ಮೆರೆದಜ್ಞಾನಿ ಜನಪ್ರಿಯನು ಗೋಪಾಲಕೃಷ್ಣವಿಠಲಾ13
--------------
ಅಂಬಾಬಾಯಿ
ಬಿನ್ನವೆನ್ನೆಣೆಸದಿರು ಎಲೆ ಮಾನವಾ ಚನ್ನಕೇಶವ ಸ್ವಾಮಿ ಒಲಿದು ಪಾಲಿಸುವಾ ಪ ವಸುಧೆಯಲಿ ಚಲಿಸುತಿಂತ ಸಕಲ ಜಂತುಗಳೆಲ್ಲ ಹಸನಾಗಿ ತಿಳಿಯದೆ ನಿನ್ನಾತ್ಮವೆಂದು ತೃಷೆ ಕ್ಲೇಶಗಳು ಮುರಿದೊಗೆವ ಜೀವವನು ಕಸಕಸರಿ ಮಾಡದಿರು ಪರರಾತ್ಮವೆಂದು 1 ಅವರಿವರು ಬಂಧುಗಳು ಅಪ್ತೇಷ್ಟ ಸಹೃದರು ಇವರವರು ದೂಷಕರು ಪರಜಾತಿಯೆಂದು ಸವಿಸುತಲಿ ಮನಸನ್ನು ಪರಪಂಚವೆನಿಸುತ್ತ ಭವವನ್ನೆ ಸೆಲೆ ನಂಬಿ ಪರರಾತ್ಮವೆಂದು 2 ದಾಸದಾಸರಿಗೆಲ್ಲ ವಂದನೆಯ ಮಾಡುತ್ತ ದಾಸರೆಲ್ಲರು ಜಗದಿ ಏಕಾತ್ಮರೆಂಬ ವಾತನೆಯ ನಂಬದಲೆ ಬಿನ್ನಾತ್ಮರೆಂದೆಣಿಸಿ ವಾಸುಕೀಶಯನನೂ ಭಿನ್ನಾತ್ಮನೆಂದು 3
--------------
ಕರ್ಕಿ ಕೇಶವದಾಸ
ಬೇಡಿ ಕಡದೀತು ಎನ್ನ ಬೇಡಿ ಕಡದೀತು ಪ ಮೂಢ ಜನರ ಸಂಗ ತ್ಯಜಿಸಿ ಗೂಢವಾದ ಸಾಧುವೆನಿಸಿ ಅ.ಪ. ಘೋರ ಸಂಸಾರ ಬೇಡಿ ಆರು ಅಹಿತರೆನ್ನ ಕಾಡಿ ಗಾರು ಮಾಡಿ ಜಡಿಯ ಕೂಡಿ ಪಾರ ಮಾಡಿದೆನ್ನ ನೋಡಿ1 ಮೋಹಪಾಶದೊಂದು ಕಟ್ಟು ದೇಹವೆಲ್ಲ ತೊಡರಿ ಬಿಟ್ಟು ಗೇಹ ತೊಲಗದಂದ ಬಿಟ್ಟ ನೇಹ ತವಿಸೆ ಕರುಣವಿಟ್ಟು 2 ಭವ ಮೋಹ ಸುಡಲಿ ಉರಿವ ಕ್ಲೇಶಗಳು ಸಿಡೀಲಿ ಕೊರೆವ ಸಂಸ್ಕøತಿ ಜಾಲಕ ತೇಲಿ ನರಸಿಂಹವಿಠಲಾ ಕೊಡಲಿ 3
--------------
ನರಸಿಂಹವಿಠಲರು
ವಾಸಿಷ್ಠ ಕೃಷ್ಣ ವಿಠಲ | ನೀ ಸಲಹೊ ಇವನಾ ಪ ಮೇಶ ಮಧ್ವೇಶ ನಿನ್ನಡಿಯ | ದಾಸ್ಯವನುಆಶಿಸುವ ಭಕ್ತಗೆ ಪ | ರಾಶರಾತ್ಮಜ ಒಲಿದೂ ಅ.ಪ. ವೇದವ್ಯಾಸನೆ ನಿನ್ನ ಆದರದಿ ಧಾನಿಸುತಮೋದದಲಿ ಶ್ರುತತತ್ವ | ಪಾದಾರ್ಪಣೆನ್ನೇ |ನೀದಯದಿ ಮರೆಯಾಗಿ | ತೋರ್ದೆ ಗುರು ಬಿಂಬವನುವೇದಾಂತ ವೇದ್ಯ ಹರಿ | ಹೃದಯ ಗಹ್ವರದೀ 1 ಕ್ಲೇಶಗಳ ದಹಿಸಿ ಸ | ರ್ವೇಶ ಸದ್ಭೋದಗಳಲೇಸಾಗಿ ಅರುಹುತಲಿ | ಶ್ರೀತ ಕೈ ಪಿಡಿಯೋ |ತೋಷ ಕ್ಲೇಶಂಗಳು ರ | ಮೇಶ ನಿನ್ನಿಂದೆಂಬಭಾಸುರದ ಜ್ಞಾನ ಪ್ರ | ಕಾಶ ಕೊಡು ಇವಗೆ 2 ಮೋದ ಅದ್ವೈತ ಪಾದ ನಂಬಿಹನೋ 3 ಪರಿ ಲೀಲೆಗಳ ತೋರಿ ಇವನಲ್ಲೀಪರಿಹರಿಸೊ ಭವಬಂಧ | ಮರುತಾಂತರಾತ್ಮಕನೆಎರಗಿ ತವ ಪದದಲ್ಲಿ | ಮೊರೆಯ ಬಿದ್ದವಗೇ 4 ಸಾವಧಾನದಿ ಧ್ಯಾನ | ಭಾವ ವೃದ್ಧಿಯಗೈಸಿದೇವ ತವ ರೂಪವನು | ಆವ ಹೃದ್ಗುಹಡೀಓವಿ ಕಾಂಬುವ ಹದನ | ನೀವೊಲಿದು ಪಾಲಿಪುದುಗೋವುಗಳ ಪಾಲ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು