ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾರೋ ಬಾರೋ ರಂಗಯ್ಯಾ | ಅಂದುಗೆ ಗೆಜ್ಜೆ | ಝಣ ಝಣ ಝಣ ಝಣ ರವದಿಂದಾ ಪ ಕಡೆಗಣ್ಣು ಹೊಳವನು | ಅಡಿಗಡಿಗೆ ದೋರುತಾ | ಎಡಬಲದೋಳಿಂದೊಲಿದು | ದುಡುದುಡು ದುಡು ನಲಿಯುತಾ 1 ಪದಹತಿಗೆ ಮಯೂರಾ | ವದನ ತಗ್ಗಿಸುವಂತೆ | ಮುದದಿ ಗೆಳೆಯರವೆರಸಿ | ಒದಗಿ ಧಿಗಿಧಿಗಿ ಧಿಗಿಲೆನುತಾ 2 ಅಂದು ಉದಯದಲೆದ್ದು | ಬಂದು ಬೆಣ್ಣೆಯ ಬೇಡೆ | ಕಂದಾ ನೀ ಕುಣಿಯೆನಲು | ನಿಂದು ತೋರಿದ ಭಾವದಿಂದ 3 ಬಿರಮುಗುಳ ನಗುತಾ | ಪೆರೆ ನೊಸಲೊಳು ಮೆರೆವಾ | ಕರ್ಣ ಕುಂಡಲಾ | ಭರದಿಂದಾ ಒಲಿಯುತಾ 4 ಗುರು ಮಹಿಪತಿ ಸ್ವಾಮಿ | ಹಾರೈಸುವಾ ನಯನಕ | ಹರುಷದಿ ತೃಪ್ತಿಗೈವಾ | ಕರುಣಾ ಸಾಕಾರದಿಂದಾ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಿಟ್ಟು ಬನ್ನಿರೊ ಸಂಸಾರದ್ಹಂಬಲ ಪ. ಸೃಷ್ಟಿಪತಿಯ ಸೇರಿ ನೀವು ಸುಖಿಸಬನ್ನಿರೊ ಅ.ಪ. ಹೆಂಡಿರುಮಕ್ಕಳು ಎಂಬೋ ಹಂಬಲ ಬೇಡಿರೊಕೊಂಡವರಲ್ಲ ಕೊಡುವರಲ್ಲ ಮುಂದಿನ ಗತಿಯನು 1 ಎಷ್ಟು ಮಾಡಿ ಗಳಿಸಿ ತಂದರು ಸಾಲದೆಂಬರೊನಷ್ಟಮಾಡಿ ಇವನ ಬದುಕು ಎಲ್ಲ ತಿಂಬರು 2 ನಡುಬೀದಿಯಲಿ ಇವನ ಎಳೆದು ಸೆಳೆವರೊಕಡೆಗಣ್ಣು ಕುಡಿಹುಬ್ಬು ನೋಟದಿಂದಲಿ 3 ಉಂಡು ಉಟ್ಟು ಗುಂಡಿನಂತೆ ಮನೆಯಲಿರುವರೊಚಂಡ ಯಮನದೂತರು ಬಂದು ಎಳೆದು ಒಯ್ವರೊ4 ಮುಟ್ಟಿ ಭಜಿಸಿರೊ ಹಯವದನನಂಘ್ರಿಯನೆಟ್ಟನೆ ಮುಕ್ತಿಮಾರ್ಗ ತೋರಿಕೊಡುವೆನೊ 5
--------------
ವಾದಿರಾಜ