ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲಮ್ಮ ದಯಮಾಡಮ್ಮ ಕಾಡಬೇಡ ಎನ್ನಮ್ಮ ಪ ಇಲ್ಲದೆ ಪೋದರೆ ನಿಲ್ಲದೆ ಏನನು ಬಲ್ಲಿದನ ಕರೆತಂದು ಕೊಲ್ಲಿಸಿಬಿಡುವೆನೆ ಅ.ಪ ಕೊಡಲಿ ಹೊತ್ತು ಬರುತಾನ ತಾಯಿ ಗಡನೆ ಹೊರಳಿ ನೋಡಿನ್ನ ಬಡವರ ದಯಾನಿಧಿ ಕಡುಬಾಧೆ ಕಂಡರೆ ತಡೆಯದೆ ನಿನ್ನನು ಕಡಿಯದೆ ಬಿಡನವ್ವ 1 ತಂದೆವಚನ ಪರಿಪಾಲನು ಅವ ಬಂದರೆ ನಿನ್ನನು ಕೊಂದಾನು ಕಂದನ ಬಂಧನ ಚಂದದಿ ಕಳೆದಾ ನಂದವ ಕೊಡು ಕೊಡು ಸುಂದರಮುಖಿಯೆ 2 ಕಾರ್ತವೀರ್ಯ ತಂದಾನೇ ಈ ವಾರ್ತೆ ಕೇಳಲು ನಿನ್ನ ಬಿಟ್ಟಾನೇ ಅರ್ತುಭಜಿಪೆ ನಿನ್ನ ಗುರ್ತಿಟ್ಟೀಬಾಧೆ ತುರ್ತು ಕಳೆಯೆ ತಾಯಿ ಅರ್ತು ಶ್ರೀರಾಮನ 3
--------------
ರಾಮದಾಸರು
ಕೈಲಾಸದಾಶೆಯಲ್ಲಿಹುದೊಶೈಲೇಂದ್ರಸುತೆಯರಸ ಶಿವನ ಒಲವಿಲ್ಲದವಗೆ ಪ. ಗುರುಹಿರಿಯರರಿಯದಗೆ ಪರಗತಿಯ ತೊರೆದವಗೆವರಧರ್ಮಪಥವ ಮರೆದವಗೆದುರುಳರನೆ ಪೊರೆದು ಪರಸತಿಯ ನೆರೆದವಗೆ 1 ದೀನಜನರೊಡನಾಡಿ ಹೀನಕರ್ಮವ ಮಾಡಿಆನೆಂಬ ಮಮತೆಯನೆ ಕೂಡಿದಾನವನೆ ಬೇಡಿ ದುರ್ದಾನಕೆ ಮರುಳಹಗೆ 2 ಅನಾಚಾರಂಗಳ ಬಿಡÀದೆ ಮನೆಗೆ ಬಂದರು ಕೊಡದೆಧನದ ಗಂಟುಗಳನು ಕಡಿಯದೆಅನುಸರಿಸಿ ನಡೆಯದೆ ಪರರ ಜರಿದು ನುಡಿವವಗೆ 3 ವಾದಿರಾಜನ ನುಡಿಯ ಹಿತವೆಂದು ಲಾಲಿಸದೆಕ್ರೋಧಮಯನಾಗಿ ದೂಷಿಪಗೆಪಾದಕೆರಗದೆ ಜನನಿಯನಾದರಿಸದವಗೆ 4 ಹಯವದನನಲ್ಲೆಂದು ತಾನೆಲ್ಲ ಬಲ್ಲೆಯೆಂದುದಯವುಳ್ಳವರ ದೈವನೆನದೆ ಈಸ್ವಯಂಭು ಲಿಂಗದ ಕಲ್ಲೇ ದೈವವೆಂಬುವಗೆ 5
--------------
ವಾದಿರಾಜ
ಡೌಲಿನ ಡೌಲ್ಯಾಕೆ ಮಾಡ್ತೀ ಕಾಲತೀರದ ಮೇಲೇನೆಂದು ಹೇಳ್ತೀ ಪ ಹೊಯ್ಮಾಲಿತನದ್ಹೊಲೆಕೆಲಸ ಮಾಡಿಕೂತಿ ಸೈಮಾಡಿ ಬರಕೊಟ್ಟದೆಲ್ಲ ಮರೆತಿ ಅ.ಪ ಕಾಯವೆಂಬ ಹೊಲ ಕೌಲಿಗೆ ಹಿಡಿದಿ ಮಾಯ ಮರವೆಯೆಂಬ ಮುಳ್ಳು ಬೆಳೆಸಿದಿ ಹೇಯವಿಷಯವೆಂಬ ಸೆದೆಯ ಕೆಡವಿದಿ ಸಾವು ಹುಟ್ಟುಯೆಂಬ ಕೊರಡಗಿದ್ಹೋದಿ ಕಾವಲಾದೆಲೆ ಮೂಳಿ ನಿನ್ನ ಎಡಬಲದಿ ವಾಯಿದೆ ಸಮೀಪಬಂತು ಮುಂದೇನು ಹಾದಿ 1 ಕ್ರೋಧ ಎಂದೆಂಬ ಅಲಬು ಕಿತ್ತದೆ ಭೇದ ಎಂದೆಂಬುವ ಜೇಕು ತೋಡದೆ ವಾದವೆಂಬ ಬೋರೆ ಜಡ್ಡು ಕಡಿಯದೆ ಖೇದಯೆಂದೆಂಬ ಕರಿಕೆದಡ್ಡ ನಳಿಯದೆ ಶೋಧವಿನಿತಿಲ್ಲದೆ ಮುಸುಕಿಟ್ಟು ಮಲಗಿದಿ ಕಾದುವ ಒಡೆಯನಿಗೀಡೇನು ಮಾಡ್ದೀ 2 ಚಿತ್ತಶುದ್ಧಿಯೆಂಬ ಬದುವು ಕೆಡಿಸಿದಿ ನಿತ್ಯ ನಿರ್ಮಲತೆಯೆಂಬ ಬಾಂದು ಒಡೆಸಿದಿ ಸತ್ಯ ಸನ್ಮಾರ್ಗೆಂಬ ಸೀಮೆಯ ಮುರಿದಿ ತತ್ವ ವಿಚಾರವೆಂಬ ಒಡ್ಡ್ಹರೆಗಡಿದೀದಿ ಕರ್ತು ಶ್ರೀರಾಮನ ಅರ್ತು ಭಜಿಸಿದೆ ಯಮಗ್ವ್ಯೆರ್ಥ ತುತ್ತಾದಿ3
--------------
ರಾಮದಾಸರು
ದೇವ ನೀ ದಯಮಾಡಿ ಕರುಣಿಪುದೂ ಪ ಮಮದುರಿತಹರಣ ಜೀಯ ಅ.ಪ ಕಾಲ ಪಾವಕಾಸನನೇ ದೇವ ಪ್ರತ್ಯಂಗನದ್ಯಾರೊ ತೋರೋ ಸಾವಧಾನ ಸರ್ವಾತ್ಮಕ ತ್ರಿಗುಣನೆಬಾರೊ ಬಾವ ಜಾರಿ ಸಖ ಭಜಕ ಜನ ವಿಹತ ಸರ್ವಜನರಿಗಾದರದಿ ಸಂಪದವು ನೀವ ಸುಂದರನೆ ನಿಜಪರ ಬ್ರಹ್ಮನೆ 1 ಪ್ರಣವನಾದ ಪಂಡಿತಜನ ಶಿಖರನೆ ಫಣಿಪಾಸನ ಹರಿಯೆ ಧೊರೆಯೆ ಅಣಿದು ಬರುವ ದುರ್ನಡೆಗಳ ಕಡಿಯದೆ ಯೆಣಿಪುದು ನಿನಗಿದು ಸರಿಯೇ ತ್ರಿಣೆಯೆಸಖನೆ ತ್ರಿಗುಣೇಶನೆ ಕೇಶವ ಅಣಿದು ಬಾರೊ ದಯಕೋರೆಲೊ ಮಹಾ 2 ದ್ವಿಜಗಣ ಮಣಿಯಹುದೋ ಅಜ ಮಹರಾಜನೆ ದು:ಖವ ನೀ ತ್ಯಜಿಸಬೇಕಹುದಹುದೋ ವಿಜಯಸಾರಥಿಯೆ ನಿಜ ಭಗವಂತನೆ ಸುಜನರೊಡನೆ ಸುಖಿಸುವದೆನಗದು ಕೊಡೊ 3 ನಿಗಮವಿನುತ ನಿಖಿಲಾಂಡಕೋಟಿ ಬ್ರಹ್ಮಾಂಡ ಜಗದಾದಿ ನಾಯಕ ಕನ್ಯಾರೊ ಬಾರೊ ಸುಗುಣರೂಪ ಸಾಕ್ಷಾತ್ ಪರಮಪದ ತೋರೋ ಅಗಣ ಸಹಜ ಮತ್ಕುಗುಣ ಕಾಲನೆ ಕಲಿ ನೆಗುರು ಮಂಗಳಪುರಿಧಾಮಾ 4
--------------
ಚನ್ನಪಟ್ಟಣದ ಅಹೋಬಲದಾಸರು
ನೀನೆ ಗುರುವಾಗೆನಗೆ ಕೋನೇರಿವಾಸ ಙÁ್ಞನವಿಲ್ಲದ ಮನುಜ ತಾನಿದ್ದು ಫಲವೇನು ಪ ನಾಳವಿಲ್ಲದ ಘಂಟೆ ಭಾರವಾಗಿದ್ದರೇನು ತೋಳ ಬಲಹಿಲ್ಲದವ ದೊರೆಯಾದರೇನು ಹಾಳು ಭೂಮಿಯು ತನ್ನ ಮೂಲವಾದರೆಯೇನು ಬಾಳಲೀಸದ ಮನೆಯ ಬಲವಂತವೇನು 1 ತಿದ್ದಬಾರದ ತೇಜಿ ಉದ್ದವಾಗಿದ್ದರೇನು ಮೂರ್ತಿ ಮುದ್ದಾದರೇನು ಕದ್ದ ಕಳ್ಳನ ಮಾತು ಬದ್ಧವಾದರೆಯೇನು ಮದ್ದನರಿಯದೆ ಧಾತು ತಿಳಿದಿದ್ದರೇನು 2 ಗೊಡ್ಡು ದನವಿನ ಕ್ರಯವು ಅಡ್ಡವಾದರೆಯೇನು ಬಡ್ಡು ಅರಸಿನ ಬಂಟನೊಡ್ಡೊಕ್ಕರೇನು ಹೆಡ್ಡನಾದವ ಬಹಳ ಗಡ್ಡವಿರಿಸಿದರೇನು ಕಡ್ಡಾಯದಂಗಡಿಯಲಿದ್ದು ಫಲವೇನು3 ಒಕ್ಕಲಿಲ್ಲದ ಊರು ಮಕ್ಕಳಿಲ್ಲದ ಮನೆಯು ಅಕ್ಕರಿಲ್ಲದ ತವರು ಇದ್ದು ಫಲವೇನು ಚೊಕ್ಕ ಹೆಂಡತಿಯವಳ್ಗೆ ತಕ್ಕ ವರನಿಲ್ಲದಿರೆ ಕುಕ್ಕೆ ತುಂಬಿದ ರೊಕ್ಕವಿದ್ದು ಫಲವೇನು 4 ಬಡಿಗೆಯಿಲ್ಲದೆ ಚಿನ್ನ ಕಡಗವಾಗುವುದೇನೊ ಪೊಡವಿ ಕಡಿಯದೆ ಬೆಳೆಯ ನೆಡುವುದೇನೊ ಕಡಗೋಲು ಹೊರತಾಗಿ ಬೆಣ್ಣೆ ತೋರುವುದೇನೊ ತುಡುಬು ಬಡಿಯದೆ ಧ್ವನಿಯ ಕೊಡುವುದೇನೊ 5 ಅಡವಿಯೊಳಗಿಹ ವೇಣು ತಿದ್ದಿದರೆ ಮೈಗೊಟ್ಟು ಕಡುಹುಳ್ಳ ದೊರೆಗಳನು ಹೊರವುತಿಹುದು ಶುಕ ಪಕ್ಷಿಯನು ಅಡಗಿಸಿಯೆ ಹಾಲೆರೆದು ಒಡನೆ ಹೇಳಿದ ನುಡಿಯ ತಾ ನುಡಿವುದು 6 ಬಂಟ ಬಿಡದೆ ಸೇವೆಯ ಮಾಳ್ಪ ಮಡದಿ ತಾ ಚೆಲುವಾಗಿ ಅಡಿಗೆ ಮಾಡುವಳು ಕಡೆಯ ಕಾಲಕೆ ತನ್ನ ದೃಢ ಬುದ್ಧಿ ಹಿಂಗುವುದು ಒಡೆಯನನು ಭಜಿಸಲಿಕೆ ಮನವಿಲ್ಲವು 7 ಗುರುವಾಗು ಇಹಪರಕೆ ಸ್ಥಿರವಾದ ಸೌಖ್ಯವನು ಒರೆದು ಮಾರ್ಗವ ತೋರು ಉರಗಗಿರಿವಾಸ ಗುರುವೆಂದು ಭಾವಿಸಿಯೆ ಕರಮುಗಿದು ಶಿರಬಾಗಿ ಸರಸಿಜಾಂಘ್ರಿಯ ನೆನೆವೆ ವರಾಹತಿಮ್ಮಪ್ಪ 8
--------------
ವರಹತಿಮ್ಮಪ್ಪ