ಒಟ್ಟು 8 ಕಡೆಗಳಲ್ಲಿ , 7 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನಾಥ ರಕ್ಷಕ ಆಪದ್ಬಾಂಧವ ಶ್ರೀಪತಿ ಕೇಶವ ಮಾಧವನೆ ಪ ಮದನ ಗೋಪಾಲನೆ ಮಾತರಿಶ್ವಪ್ರಿಯ ಹರಿ ಶ್ರೀಶ ಅ.ಪ ಬಿಟ್ಟ ಕಂಗಳ ಮುಚ್ಚದೆ ತಿರುಗುವ ಬೆಟ್ಟವ ಬೆನ್ನಿನೊಳಾಂತಿರುವ ಗಟ್ಟಿನೆಲವ ಕೆದರುತ ಬೇರರಸುವ ಹೊಟ್ಟೆಯ ಕರುಳನೆ ಬಗೆದಿರುವ1 ಪೊಡವಿಯ ಬೇಡುತ ಕೊಡಲಿಯ ಪಿಡಿಯುತ ಪೊಡವಿಪರೆಲ್ಲರ ಗೆಲಿದವನೆ ಮಡದಿಯನರಸುತ ಕಡಲನು ಕಟ್ಟುತ ಕಡಹಲ್ದ ಮರನೇರ್ದ ಮೃಡಸಖನೆ2 ಬುದ್ಧನಾಗಿ ತ್ರಿಪುರರ ಗೆಲಿದವನೆ ಶುದ್ಧ ಹಯವನೇರಿ ಮೆರೆದವನೆ ಹದ್ದುವಾಹನವೇರುತ ನಲಿದಾಡುವ ಪದ್ಮನಾಭ ಪುರುಷೋತ್ತಮನೆ3 ಅಗಣಿತ ಮಹಿಮನೆ ಖಗವರವಾಹನ ನಿಗಮವೇದ್ಯ ನಿರ್ಮಲಚರಿತ ಬಗೆಬಗೆಯಿಂದಲಿ ಭಜಿಸುವ ಭಕುತರ ಅಘನಾಶನ ಸುಜನರ ಪ್ರಿಯ 4 ಸೌಮ್ಯ ವತ್ಸರದಿ ಸುಂದರಶ್ಯಾಮನ ಸಾಮಗಾನಲೋಲನ ಭಜಿಸಿ ಕಾಮ್ಯಕರ್ಮಗಳ ತ್ಯಜಿಸಲು ಹರುಷದಿ ಕಮಲನಾಭ ವಿಠ್ಠಲ ಒಲಿವ 5
--------------
ನಿಡಗುರುಕಿ ಜೀವೂಬಾಯಿ
ಏಳಲಾರದ ಘಟವೇ ನೀ ಬೆಟ್ಟ ಹತ್ತೋದು ದಿಟವೇ ಪ ನಾಳಿನ ಬಾಳನು ಪೇಳಲಾಗದ ನೀ ಮೇಲೆಯೋ ಜಂಭದ ಕೋಳಿಯೊ ಯೋಚಿಸು 1 ತಡೆಯಲು ಸಾಧ್ಯವೆ ಕಡಲನು ಕರದಲಿ 2 ತ್ರಾಣವಿದ್ದರೆÀ ಸದಾ ಕಾಣರೆ ಸುಖವನು ಪ್ರಾಣ ಪ್ರಸನ್ನನು ಒಲಿಯುವ ತನಕ 3
--------------
ವಿದ್ಯಾಪ್ರಸನ್ನತೀರ್ಥರು
ಜನುಮದ ದಿವಸವಿದು ಹನುಮ ನಿನ್ನಜನುಮದ ದಿವಸವಿದೂ ಪ ಅನುದಿನ ನಿನ್ನನುನೆನೆಯುವ ಜನರಿಗೆ ಘನ ಮುದ ಕೊಡುವಂಥ ಅ.ಪ. ಯಾವಾಗಲೂ ಹರಿಯ ಭಕುತಿಯಲಿಸೇವೆಮಾಳ್ಪ ಪರಿಯಭಾವುಕರಿಗೆ ಕಲಿಸುವುದಕೆ ಗಡಜೀವಿಯಾಗಿ ಅವತರಿಸಿದ ನಿನ್ನದೂ 1 ಪೊಡವಿಯ ಮಾತೆಯನು ದನುಜಬ ಚ್ಚಿಡಲವಳಿರುವದನುಹುಡುಕಿ ತೆಗೆಯಲಾ ಕಡಲನೆ ಜಿಗಿಯುವಕಡುಶಕ್ತಿಯ ಗಡ ಪಡೆದ ನಿನ್ನಯ 2 ಧಾರುಣಿನ ಕಾರಣ ಗದುಗಿನವೀರನಾರಾಯಣಚಾರು ಚರಣದಿ ತೋರಿ ಭಕುತಿಯನುಸೂರೆಗೈಯ್ಯೆ ಮೈದೋರಿದ ನಿನ್ನನು 3
--------------
ವೀರನಾರಾಯಣ
ತುಂಗೆ ಬಂದಳು ದೇವೋತ್ತುಂಗ ವರಹನಾ ಮುಂಗೋರಿಯಲ್ಲಿ ಪುಟ್ಟಿ ಭಕ್ತ ನಿಕರನಾ ಹಿಂಗದೆ ಪೊರೆದು ಸುಖಂಗಳನೀವು ತಾ ಮಂಗಳಾಂಗೆ ಮಾತಂಗೆ ಸುಗಮನೆ ಪ ಕಾಳ ಪನ್ನಗವೇಣಿ ಕೋಕಿಲವಾಣಿ ಫಾಲ ಕಸ್ತುರಿ ಜಾಣೆ ಪಲ್ಲವಪಾಣಿ ವಾಲೆ ಮೂಗುತಿ ಅಣಿ ಮುತ್ತು ಕಠಾಣಿ ತೋಳು ಮಂದಾರಮಣಿ ಅರಿಗುಣಶ್ರೇಣಿ ಮೌಳಿಯಾ ಮೇಲಿನ ಜಾಳಿಗೆ ಸೂಸುಕಾ ವಾಲಲು ಕದಿಪಿನ ನೀಲಗೂದಲು ಭ್ರಮ ರಾಳಿಗಳಂತಿರೆ ಬಾಲ ಸುಧಾಕರ ಪೋಲುವ ವದನೇ1 ಕುಡುತೆಗಂಗಳ ನೀರೆ ಕಂಬುಕಂಧರೆ ಕಡಗ ಕಂಕಣದ್ವಾರೆ ಕೈಯ ಶೃಂಗಾರೇ ಜಡಿವ ಪದಕಹಾರೆ ಕಂಚಕಸೀರೆ ಮುಡಿದ ಪುಷ್ಪಂಗಳು ಮರೆ ಕುಚಗಳು ಅದರೆ ಬಡನಡುವಿನ ಕಡು ಉಡುವಿನ ಕಿಂಕಣಿ ಒಡನುಡಿಸುವ ಗೆಜ್ಜೆ ಕಾಲಂದಿಗೆ ಪೆಂಡೇ ಅ ಡಿಗಡಿಗೊಪ್ಪಲು ಕಡಲನ ಮಡದಿ 2 ತೀಡಿದ ಪರಿಮಳ ಗಂಧದ ಭೋಗಿ ಕೂಡಲಿಪುರದಲಿ ಭದ್ರಿವಂದಾಗಿ ಕೂಡಿ ಸೂಸಿದಳಂದು ಮುಂದಕ್ಕೆ ಸಾಗಿ ಆಡುತ ಪಾಡುತ ಬಲು ಲೇಸಾಗಿ ಬೇಡಿದ ಜನರಿಗೆ ಈಡಿಲ್ಲದ ವರವ ನೀಡುತ ನಿರುತರ ಮಾಡುತ ದಯವನು ನೋಡುತ ತಡವಿಲ್ಲದಲೆ 3 ಶೃಂಗಾರ ಮಾರ್ತಾಂಡೆ ಹರಿಹರ ಮಾತಾ ಅಂಗಾಧಿ ಪರ್ವತ ಪಂಚ ಪ್ರಖ್ಯಾತ ಹಿಂಗದೆ ಬಲಗೊಂಡು ಕೊಡ್ಲೀಗೆ ಬರುತ ಸಂಗೀತ ಗಾಯನದಿಂದ ವಾಲಗಗೊಳುತ ಸಂಗಮೆಯಾಗಿ ತಂಗಿಯ ಬೆರತೀಗ ಮಂಗಳ ಕ್ರೀಡೆಯಲ್ಲಿ ಪ್ರವೇಶಿಸಿ ಗಂಗೆ ಎನಿಸಿಳ್ಯಮನನಾದೇಳಗೆ 4 ಲೋಕದೊಳಗೆ ಪ್ರತಿರಹಿತ ಪೆಸರಾದ ಚೀಕನ ಬರವಿಯ ಅಶ್ವಥಮರದ ನೃಕಂಠೀರವನ ಪಾದದಿ ವ್ಯಾಧಿಷ್ಟರಾದ ಸೋಕಿ ಮೈಮರೆದಂಥ ನಮಿತರು ಕರದಾ ಪಾಕ ಪದಾರ್ಥಕೆ ಒಲಿದೊಲಿದಾಡುತ ಶ್ರೀಕರ ವಿಜಯವಿಠ್ಠಲಗೆರಗುತ ನಾಕಕನ್ನಿಕೆಯಂತೆ ಹೊಳೆದಳುಯಿಂದು5
--------------
ವಿಜಯದಾಸ
ನಿನ್ನ ದಯಾ ದೃಷ್ಟಿಯು ಎನ್ನ ಮೇಲಿರಬೇಕು ಪನ್ನಂಗಶಯನ ಭಕ್ತ ವಿಜಯವಿಠಲಯ್ಯ ಪ ಮುನ್ನ ಭಕ್ತನಿಗೊಲಿದು ಭಿನ್ನವಿಲ್ಲದೆ ಬಂದು ಮಣ್ಣಿನ್ಹೆಂಟೆಯ ಮೇಲೆ ಇನ್ನು ನಿಂತುದನು ಕಣ್ಣಿನಿಂದ ನಾ ಕಂಡು ಧನ್ಯನಾದೆನು ಜಗದಿ ಇನ್ಯಾಕೆ ಭವದಂಜು ತನು ನಿನ್ನದಯ್ಯ1 ಹೆತ್ತಮಕ್ಕಳ ತೆರದಿ ಅತ್ಯಧಿಕ ಪ್ರೀತಿಯಿಂ ಭಕ್ತರನು ಬಿಗಿದಪ್ಪಿ ಮುಕ್ತಿ ಸೋಪಾನ ಹತ್ತಿಸಿದ ನಿನ್ನಡಿ ಭಕ್ತಿಯಿಂ ಕಂಡೆ ಮತ್ತು ಮೃತ್ಯುವಿನ ಭೀತ್ಯಾಕೆ ಮನ ನಿನ್ನದಯ್ಯ 2 ಕಡಲನಿಲಯನೆ ನಿನ್ನ ಅಡಿ ನಂಬಿ ಮರೆಹೊಕ್ಕೆ ದೃಢಭಕುತಿ ನೀಡೆನ್ನ ನುಡಿಯೊಳಗೆ ನೆಲಸು ಎಡರು ತೊಡರನು ಕಡಿದು ದೃಢಕರನು ಬಿಡದಾಳ್ವ ಒಡೆಯ ಶ್ರೀರಾಮಯ್ಯ ಧನ ನಿನ್ನದಯ್ಯ 3
--------------
ರಾಮದಾಸರು
ಬಿಡದಿರೆನ್ನ ಕಡಲನಡುವೆ ಪ ತಡಬಡಿಪುದ ನೋಡಿ ನೋಡಿ ಅ.ಪ ಸರಸ ಕರುಣಾಭರಣ ಶರಣ ನಿರುತ ಸೇವಿತ ವರ ಸುಚರಣ ಮರೆಯದಿರು ದಾಸಾನುದಾಸನ ಲೋಕಕಾರಣ 1 ಕರಿ ಬಲಿ ಪಾಂಚಾಲಿಯರನು ಹರುಷದಿಂದ ಪೊರೆದೆಯಲ್ತೆ ಕರುಣದಿಂದ ಬಾರೊ ಹರಿಯೆ ಸರಸಿಜಾಕ್ಷನೇ 2 ದೇವ ದೇವ ಪಾವನಾತ್ಮ ಭಾವಜಾತಪಿತ ಪರಮಾತ್ಮ ದಿವಿಜ ಸನ್ನುತಾ 3 ಕಾವರನ್ಯರಿಲ್ಲವಯ್ಯ ಪಾವನಾತ್ಮ ಮಾರನಯ್ಯ ಸಾವಕಾಶವೇಕೋ ಜೀಯ ಮಾವಿನಕೆರೆಯರಸ ರಂಗ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಹನುಮ ಅಣಿಯಾರೊ ನಿನಗೆ ಈ ತ್ರಿಭುವನದೊಳಗೆಹಣಮಂತ ಗುಣವಂತ ಮಣಿಯುವೆನೊ ನಿನಗೆ ಪ ಗಡ್ ಗಡ್‍ಗಡನೆ ರಾಮನ ಪಾದಾಂಬುಜಕೆ ವಂದಿಸುತಖಡ್ ಖಡ್ ಖಡನೆ ಸಿಡಿಲಂತೆ ನಭದೊಳಗೆ ಗರ್ಜಿಸುತಧಡ್ ಧಡ್ ಧಡನೆ ಕಡಲನ್ನೆ ಜಿಗಿಯುತ್ತ ಭಡ್ ಭಡ್ ಭಡನೆ ಸೀತೆಯನು ಶೋಧಿಸುತ ಬಂದಿಯೋ 1 ಬರಬರನೆ ಬಿಂಕದಲಿ ಉರಿಯುತಿಹ ರಕ್ಕಸರದರ್ ದರ್ ದರನೆ ರಣರಂಗಕೊಬ್ಬನೇ ಎಳೆತಂದುಕರ್ ಕರ್ ಕರನೆ ಹಲ್ಗಿಡಿದು ತರಿಯುತ್ತ ಧರೆಯೊಳಗೆಭರ್ ಭರನೆ ಸಿರಿವರನ ಇಚ್ಛೆಯನು ಪೂರ್ತಿಸಿದಿ 2 ಖುದ್ ಖುದ್ ಖುದನೆ ನಗುತ ರಘುರಾಮನನು ಹೃದಯದೊಳುಖುದ್ ಖುದ್ ಖುದನೆ ಬಿಡದೇಳ್ವ ಭಕುತಿಯಲಿ ಸೇವಿಸುತಗದ್ ಗದ್ ಗದುಗಿನೊಳು ವೀರನಾರಾಯಣನಮುದ್ ಮುದ್ ವಂದಿಸಿ ಪರಬ್ರಹ್ಮನ ಪದವಿಯನೆ ಪಡೆಯೊ3
--------------
ವೀರನಾರಾಯಣ
ನಾರಾಯಣ ಗೋವಿಂದ - ಹರಿಹರಿನಾರಾಯಣ ಗೋವಿಂದ ಪನಾರಾಯಣ ಗೋವಿಂದ ಮುಕುಂದಪರತರ ಪರಮಾನಂದ ಅ.ಪಮೊದಲು ಮತ್ಸ್ಯನಾಗಿ ಉದಿಸಿ ಸೋಮನನುಸದೆದು ವೇದಗಳ ತಂದ 1ಮಂದರಗಿರಿಯಲಿ ಸಿಂಧುಮಥಿಸಿಸುಧೆತಂದು ಭಕ್ತರಿಗುಣಲೆಂದ 2ಭೂಮಿಯ ಕದಿದಾ ಖಳನನು ಮರ್ದಿಸಿಆ ಮಹಾಸತಿಯಳ ತಂದ 3ದುರುಳ ಹಿರಣ್ಯನ ಕರುಳುಬಗೆದು ತನ್ನಕೊರಳೊಳಗಿಟ್ಟಾನಂದದಿಂದ 4ಪುಟ್ಟನಾಗಿ ದಾನಕೊಟ್ಟ ಬಲಿಯ ತಲೆಮೆಟ್ಟಿ ತುಳಿದ ಬಗೆಯಿಂದ 5ಧಾತ್ರಿಯೊಳಗೆ ಮುನಿಪುತ್ರನಾಗಿ ಬಂದುಕ್ಷತ್ರಿಯರೆಲ್ಲರ ಕೊಂದ 6ಮಡದಿಗಾಗಿ ತಾ ಕಡಲನೆಕಟ್ಟಿಹಿಡಿದು ರಾವಣನ ಕೊಂದ 7ಗೋಕುಲದೊಳು ಹುಟ್ಟಿ ಆಕಳ ಕಾಯ್ದಶ್ರೀಕೃಷ್ಣನು ತಾ ಬಂದ 8ಛಲದಲಿ ತ್ರಿಪುರರ ಸತಿಯರ ವ್ರತದಫಲವನಳಿದ ಬಗೆಯಿಂದ 9ಧರೆಯೊಳುಪರಮ ನೀಚರ ಸವರಲು ಕು -ದುರೆಯನೇರಿದಕಲಿ ಚೆಂದ10ದೋಷದೂರ ಶ್ರೀಪುರಂದರ ವಿಠಲಪೋಷಿಪ ಭಕ್ತರ ವೃಂದ 11
--------------
ಪುರಂದರದಾಸರು