ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತನ್ನ ತಿಳಿಯದವನೇಕೆ ಇನ್ನವನನು ಸುಡಬೇಕು ಪ ವೇದಾರ್ಥಿಯು ತಾನಾಗಿ ವಾದಿಸುತಿಹನೀ ಗೂಗೆಓದಿದ ಓದದು ವ್ಯರ್ಥ ಒಳ್ಳಿತಾಗಿ ಗಳಿಸಿದನರ್ಥ 1 ಆಚಾರದಿ ಒದ್ದಾಡಿ ಅಡವಿಯ ಹಿಡಿದನು ಖೋಡಿಕುಚಾಳಿಯೆ ವ್ಯವಹಾರ ಕುಮಂತ್ರಕೆ ಬಲು ಧೀರ 2 ಮಾನ್ಯರ ಕೋಪದಿ ಝಡಿವಾ ಅವಮಾನ್ಯರ ಕೊಂಡಾಡಿ ನುಡಿವಾಜ್ಞಾನದ ಹಾದಿಯ ಕಾಣ ಗೋಣಿಯ ಹೊರುವ ಕೋಣ3 ಮುಕ್ತಿಯ ತಿಳಿಯಲು ಬಾರ ಮುಂದಿನ ಭವಿತವ ನೋಡಭಕ್ತಿಯೆಂಬುದಿಲ್ಲ ಈ ಕತ್ತೆಗೇನು ಸಲ್ಲ 4 ಕಲ್ಲನೆ ದೇವರು ಎಂಬ ಕಡಮೆಯಲಿಲ್ಲವು ಎಂಬಒಳ್ಳಿತಲ್ಲವು ಅವನಿರವು ಒಲಿದವನೇ ಚಿದಾನಂದ ಗುರುವು 5
--------------
ಚಿದಾನಂದ ಅವಧೂತರು
ಬಲ್ಲವನಾದರೆ ಈ ತಳ್ಳಿಬೇಡ |ಅಲ್ಲದಪಥಇದರಾಸೆಯ ಬಿಡು ನೀನುಪ.ಸರ್ಪನ ಪಣೆಯೊಳು ಜೇನು ತುಪ್ಪವ ಕಂಡು |ಅಪ್ಪನೆ ತಾರೆಂದು ಅಳುತಿರಲು ||ತುಪ್ಪದ ಸವಿಯನು ಜನರುಂಡುತೀರಲು |ಮುಪ್ಪಾಗಿ ಇರುವುದ ಕಂಡು ಮೂದಲಿಸುವ 1ನಂಬಿದ ಮನುಜರ ಹಂಬಲ ಮರೆವುದು |ಡೊಂಬಿಯವರು ಕಂಡು ತಡೆಯಲಾಗಿ ||ಕುಂಭದ ರೊಕ್ಕದ ಲಂಚವನಿತ್ತಲ್ಲಿ |ಅಂಬರವನು ಕಂಡು ನಗುತಿಪ್ಪ ಮನುಜನ 2ಅಂಬರವಡಗಿಯೆಕುಂಭಿನಿ ಜಾರಿಯೆ |ನಂಬಿದ ಮನುಜರು ನಡೆವಡೆಯೆ ||ಕುಂಭದ ನೀರನು ಚೆಲ್ಲುತ ಮಗುಳಲ್ಲಿಕಂಬದ ಹಾಗೆಯೆ ನಿಂತಿಹ ನರನು 3ಇಟ್ಟಿಹ ಬಾಗಿಲ ಕಾಣದೆ ತಾ ಬಂದು |ಹೊಟ್ಟೆಯ ಬಗಿದಲ್ಲಿ ಹೊರವಂಟ ವೇಳೆ ||ಕಟ್ಟಿದ್ದು ಕರಗಿಯೆ ಸೆಟ್ಟೆಲೆ ಒಣಗಿಯೆ |ದುಷ್ಟನೊಬ್ಬನು ಬಂದು ನಿಂತಿಹನು 4ಕಡಹದ ಪಲ್ಲಕ್ಕಿ ಬೆಡಗನು ಕಾಣುತ |ಅಡವಿಯಮೃಗ ಬಂದು ಕುಳಿತಿರ್ದುದ ||ಒಡನೆ ಕಟ್ಟಿದ ವಾಹಕರು ಹದಿನಾರು ಮಂದಿ |ಕಡಮೆಯ ಸಂಬಳ ತಡವಿಡುವವರನು 5ಅಕ್ಕಿಯ ರಾಶಿಯು ತೀರಲು ಕೊಳಗವು |ಬೆಕ್ಕಸ ಬೆರಗಾಗಿ ಕುಳಿತಿಪ್ಪದು ||ಬಿಕ್ಕಿದ ಅಕ್ಕಿದ ಹಕ್ಕಿಯು ಹಕ್ಕಿಯೆ |ಗಕ್ಕನೆ ಹಾರವ ಪಕ್ಷಿಯ ನೋಡುತ 6ಇರುತಿರೆ ಗಣಿತದಿರವಿಶಶಿ ಒಂದಾಗಿ |ಧರೆಯೊಳು ಸಾವಿರ ಎಲೆ ಬೀಳ್ವುದು ||ಎರವಿನಾಭರಣವ ಅವರವರೊಯ್ಯಲು |ಪುರಂದರವಿಠಲನ ಮೊರೆಬೀಳು ಕಂಡೆಯ 7
--------------
ಪುರಂದರದಾಸರು