ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾವನಯ್ಯಾ ಜಗವನನುದಿನ | ದೇವ ತಿರುಪತಿಯ ದಾಸಾ ಶ್ರೀ ವಲ್ಲಭವೆಂಕಟೇಶಾ ಪ ತರಳ ಉತ್ತಾನಪಾದಿಯ ನೋಡು | ಮಂದ ಕಾಯನ್ನ | ಕುರೂಪಿಯಾದ ಕುಬಜೆ ವ್ಯಭಿ | ಚರಿಯ ಅಜಮಿಳನ ಕಾಯದ 1 ಬಡವನಾಗಿದ್ದ ಸುಧಾಮ ಕೊಲೆ ಗಡಿಕನಾದ ಕಿರಾತನ್ನ ನೋಡು | ನಡತೆ ತಪ್ಪಿದ ಸುಗ್ರೀವ ಕುಲವ | ಕಡಿದ ಪಾರ್ಥನ್ನ ಕಾಯದಾ 2 ಇಟ್ಟಿಗೆ ವಗೆದ ಪುಂಡಲೀಕನ | ಬೆಟ್ಟಲೆ ಬೆಟ್ಟವ ನೆತ್ತಿಸಿದವನಾ | ಪೆಟ್ಟನು ಫಣಿಗೆಯಿಟ್ಟ ಭೀಷ್ಮನ | ಕಟ್ಟಿಬಿಗಿದ ಗೋಪಿಯ ಕಾಯದಾ3 ಜನನ ನೋಡು ವಿದುರನ್ನ ಕ ರುಣಿ ಎಂಬೆನೆ ರುಕುಮಾಂಗದ | ಮನೆ ಉಳ್ಳವರೆ ಸನಕಾದಿಗಳು | ಮಣಿಹಾಕಿಸಿದ ಭೂಪತಿಯ ಕಾಯದಾ4 ಶಕುತಿ ಮಿಕ್ಕಾದ ಕರ್ಮಗಳು ನೋಡಾ | ಭಕುತಿಗೆ ಮಾತ್ರ ಸಿಲುಕುವವನು | ಭಕುತವತ್ಸಲ ಶ್ರೀನಿವಾಸಾ | ಅಕಳಂಕ ರೂಪ ವಿಜಯವಿಠ್ಠಲ 5
--------------
ವಿಜಯದಾಸ
ಮನವೆನ್ನ ಮಾತ ಕೇಳದು - ಮಂದಜ್ಞಾನದಿ |ತನುವಿನಾಸೆಯ ಬಿಡಲೊಲ್ಲದು ಪವನಜನಾಭನೆ ನಿನ್ನ ನಾಮ ಸಾಸಿರವ |ನೆನೆಯದೆ ಕಂಡಕಡೆಗೆ ಎರಗುತಲಿದೆ ಅ.ಪದೇಹ ಸಂಬಂಧಿಗಳಾದವರೈವರು |ಮೋಹಪಾಶದಿಕಟ್ಟಿಬಿಗಿದಿಹರೈ ||ಕಾಯಅನಿತ್ಯವೆಂಬುದನರಿಯದೆ |ಮಾಯಾಪ್ರಪಂಚದಿಂದಲಿ ಬದ್ಧನಾಗಿಹೆ1ಸಾಧುಸಜ್ಜನರ ಸಂಗವ ಮಾಡಿ ಪರಗತಿ-|ಗಾಧಾರವನು ಮಾಡಲೊಲ್ಲದಯ್ಯ ||ಕ್ರೋಧಕುಹಕದುಷ್ಟರೊಡನಾಡಿ ಕಾಲನ |ಬಾಧೆಗೆ ಒಳಗಾಗುವಂತೆ ಮಾಡುತಲಿದೆ 2ಮದಗಜ ಮೈಯ ಮರೆತು ಮುಂದುಗಾಣದೆ |ಕದುವಿನೊಳಗೆ ಬಿದ್ದಂತಾದೆನಯ್ಯ ||ಹೃದಯ ಕಮಲದಲಿ ನಿಂತ ರಕ್ಷಿಸೋ ಎನ್ನ |ಪದುಮಾಕ್ಷ ವರದ ಶ್ರೀಪುರಂದರವಿಠಲ3
--------------
ಪುರಂದರದಾಸರು