ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥಾ ಜಾಣೆಯೋ ಸುಪ್ರವೀಣೆಯೋ ಮುನ್ನಾಕೆಎಂಥಾ ನೋಂಪಿಯನೋಂತ ಫಲವೋಕಾಂತನ ಪರಕೀಯ ಕಾಂತೆಯೆಡೆಗ ಬಿಡ-ದಂತೆ ಸಂತಸದೊಳೇಕಾಂತ ಸುಖದೊಳಿರ್ಪ ಪ ನುತ ಹಂಸತೂಲತಲ್ಪದೊಳು ನಾನಾ ಬಂಧಗತಿಯಲಿ ಕಾಮಕೇಳಿಯನೆಸಗಿರತಿಸುಖಪಾರವಶ್ಯದೊಳೊಂದು ವರುಷದಮಿತಿಯನು ತೃಟಿಕಾಲವೆಂದುಸುರುವಳು ತಾ 1 ಹೆಣ್ಣು ಜನ್ಮದಿ ಹುಟ್ಟಿದುದಕೆ ಫಲವದುಕನ್ನೆಯರೊಳಗೆ ಕಟ್ಟಾಣಿಯಾಕೆಮುನ್ನೆಷ್ಟುಗಾಲ ತಪವ ಮಾಡಿ ತಾನಿಂಥಾಪುಣ್ಯವ ಪಡೆದಳಾಕೆಯ ಜನ್ಮ ಸಫಲವೋ2 ವರುಷವಾಗಲಿ ಒಂದು ದಿನವಾದರಾಗಲಾತರುಣಿಯ ಭೋಗದಂತಿರಬೇಡವೆಇರುಳು ಹಗಲು ಕಾಣದಂತೆ ಶ್ರೀ ಕೆಳದಿಯಪುರದ ರಾಮೇಶನೊಳ್ಪರಸದೊಳಿರುವಳಿಂ 3
--------------
ಕೆಳದಿ ವೆಂಕಣ್ಣ ಕವಿ
ಕಂಡೆನು ಹರಿಸತಿಯ ಸುರಚಿರದುಂಡ ಕಂಕಣ ಕೈಯ್ಯಾಮಂದಾರ ಮಲ್ಲಿಗೆಯ ಹೆರಳಲಿ ದಂಡೆ ಮುಡಿದ ಪರಿಯ ಪ ಪೈಜಣಯಿಟ್ಟಿಹಳು ಗಳದಿ ಕಟ್ಟಾಣಿಯ ಕಟ್ಟಿಹಳುಹಾಟಕ ಹಾರಗಳು ನೋಳ್ಪರ ನೋಟಕೆ ಹಬ್ಬಗಳು 1 ಹೇಮ ಕಂಚುಕ ಪುತ್ಥಳಿ ಮಾಲೆ ತೂಗುವ ಕಟಿಯು 2 ಸರಸಿಜನುವ ಮುಖಿಯು ನಾಶಿಕ್ಹರಳು ಮುತ್ತಿನ ಗೊನೆಯುಹರಳು ಓಲೆಯ ಪ್ರಭೆಯು ಕರ್ಣದಿ ಕುರುಡು ದ್ರಾಕ್ಷಾಲತೆಯು 3 ಸುಂದರಿ ಶುಭಗಾತ್ರೆ ಸುಖಮಯ ಸಿಂಧೂರ ಪಟಾಕಾ ಮಾತ್ರೆಮುಂದೆ ಫಲದ ಪಾತ್ರೆ ಇಟ್ಟಳು ಬಂದು ಸರಸ ನೇರಿ4 ನಂದಬಾಲನ ಮಡದಿ ಸ್ವಪ್ನದಿ ಬಂದು ನಿಂತಳು ಭರದಿಆನಂದವಾಯ್ತು ಮನದಿ ಕಂಡೆನು ಇಂದಿರೇಶನ ದಯದಿ 5
--------------
ಇಂದಿರೇಶರು
ಕಾಮನ ಪಿತ ಕೃಷ್ಣ ಕಾಮಿನಿಯಾದನು ಕಾಮನ ಪಿತ ಕೃಷ್ಣ ಕಾಮಿನಿ ಆಗುವೊ ಕಾರಣ ಕೇಳಿರಿ ಕಾಮಿಸಿ ಶ್ರೀಹರಿ ಆ ಮಹಾಸುರರಿಗೆ ಸುಧೆಯನ್ಹಂಚುಣಿಸಲು ಶ್ರೀ ಮಾಯಾಪತಿಯು ತಾ ಸ್ತ್ರೀಯಾದ ಚೆಲುವಿಕೆ ಪ ರುಳಿ ಲುಲ್ಲು ಗೆಜ್ಜೆ ಪೈಜಣ ಪಾಗಡವನಿಟ್ಟು ಚರಣದಿ ಕಾಲುಂಗರ ಪಿಲ್ಯ ಮೆಂಟಿಕೆ ಝಣ ಝಣ ನಾದ ಕಾಳಿಯ ಫಣ ತುಳಿದಂಥ ಖಳರ ಮರ್ದನ ದಿವ್ಯ ತರುಣಿ ತಾನಾದನು 1 ಸೆರಗು ನಿರಿಯು ಜರತಾರಿ ಪೀತಾಂಬರ ಬಿಡಿ ಮುತ್ತಿನುಡಿಗಂಟೆ ನಡುವಿನ್ವೊಡ್ಯಾಣ ಸಡಗರದಿಂದ್ವೊಪ್ಪೊ ತಾಳಿ ಪದಕವಿಟ್ಟು ಮೃಡನ ಪ್ರಿಯನು ಮುದ್ದು ಮಡದಿ ತಾನಾದನು 2 ಕಂಚುಕ ತೋಳಿನಲ್ವಂಕಿ ಬÁಜುಬಂದು ಮಿಂಚಿನಂದದಿ ನಲಿದಾಡುತ ಗೊಂಡ್ಯವು ಕಂಕಣ ತೋಡ್ಯ ವಜ್ರದ್ವಾರ್ಯ ಹರಡಿಯು ಪಂಚ ಬೆರಳಿನಲ್ಲುಂಗುರವನಿಟ್ಟು ಸೊಬಗಲಿ 3 ಚಿಂತಾಕು ಸರಿಗೆ ಚಿನ್ನದ ಗುಂಡು ಹವಳವು ಕೆಂಪು ಏಕಾವಳಿ ಮಲಕು ತಾಯಿತ ಮುತ್ತು ಮಿಂಚುವೋ ಪದಕ ಮುತ್ತಿನ ಕಟ್ಟಾಣಿಯು ಪಂಚರತ್ನದ ಹಾರ ಪರಮಾತ್ಮಗಲೆಯುತ4 ಉಂಗುರ ಕೂದಲು ಶೃಂಗಾರ ಕ್ಯಾದಿಗೆ ಚಂದ್ರ ಚೌರಿ ಜಡೆಬಂಗಾರ ರಾಗಟೆ ಮುಂದೆ ಮುತ್ತಿನದಂಡೆ ಮುಡಿಯಲ್ಲೆ ಒಪ್ಪಿದ ದುಂಡು ಮಲ್ಲಿಗೆ ದÉೂೀಷದೂರನಿಗಲೆವುತ 5 ವಾಲೆ ಬುಗುಡಿ ಬಾಳ್ಯ ಚಳತುಂಬು ಚಂದ್ರ ಮುರುವು ಚಿನ್ನದ ಕಡ್ಡಿ ಕಿವಿಯಲ್ಲಿ ಕುಂದಣ ಕುಸುರು ವಜ್ರಗಳು ಕೆಂಪ್ಹೊಳೆವಂಥ ದುಂಡು ಮುತ್ತಿನ ಮುಕುರ್ಯವ ಮೂಗಿನಲ್ಲಿಟ್ಟು 6 ಅಚ್ಚ ಮುತ್ತಿನ ದಂಡೆ ಕುಚ್ಚು ತೊಂಡಿಲುಗಳು ಹಚ್ಚೆಯ ಬೊಟ್ಟು ಕಸ್ತೂರಿ ಕುಂಕುಮನಿಟ್ಟು ಪಚ್ಚೆ ಮಾಣಿಕ್ಯದರಳೆಲೆ ಚಂದ್ರ ಸೂರ್ಯರು ನಿತ್ಯ ತೃಪ್ತನು ನೀಲವರ್ಣದಂತ್ಹೊಳೆಯುತ 7 ಆ ಮಹಾವೈಕುಂಠಪುರದರಸಾದ ಈ ಮಹಾ ರಜತ- ಪೀಠ ಪುರದಲಿ ಬಂದು ಪ್ರೇಮದಿ ನಿಂತು ನೋಡುತ ಬಂದ ಜನರಿಗೆ ಕಾಮಿತ ಫÀಲ ಮುಕ್ತಿ ಕೊಡುವ ಕಮಲಾಪತಿ 8 ಅಷ್ಟಯತಿಗಳಿಂದಲಿ ಪೂಜೆಯಗೊಂಬೊ ಲಕ್ಷ್ಮಿಯ ಪತಿಯು ಸ್ತ್ರೀರೂಪವ ಧರಿಸಿರೆ ದೃಷ್ಟಿಂದೆ ನೋಡದಿನ್ನಿರುವೋರೆ ಭೀಮೇಶ- ಕೃಷ್ಣ ನಿನ್ನ ಮನದಲ್ಲಿಟ್ಟು ಸ್ತುತಿಸುವೆನು 9
--------------
ಹರಪನಹಳ್ಳಿಭೀಮವ್ವ
ದೇವೇಂದ್ರನ ಸೊಸೆ ದೇವಕ್ಕಿ ತನಯಳು ಏನೇನು ಬಯಸಿದಳು ಪ ಒಂದು ತಿಂಗಳು ತುಂಬಲು ಸುಭದ್ರ ಅಂಜೂರಿ ದ್ರಾಕ್ಷಿ ಕಿತ್ತಳೆ ಜಂಬುನೇರಳು ಬಯಸಿದಳು ಅಂಬುಜಾಕ್ಷನ ತಂಗಿ ಪೈಜಣ ರುಳಿ ಗೆಜ್ಜೆ ಕಾ- ಲುಂಗುರ ಕಿರುಪಿಲ್ಯ ಇಟ್ಟೇನೆಂಬುವಳು 1 ಎರಡು ತಿಂಗಳು ತುಂಬಲು ಸುಭದ್ರ ಪರಡಿ ಮಾಲತಿ ಸಣ್ಣ ಶ್ಯಾವಿಗೆ ಬಯಸಿದಳು ಪರಿವೇಶನ ತಂಗಿ ಹರಡಿ ಕಂಕಣ ಹಸ್ತ ಕಡಗ ಹಿಂಬಳೆ ದ್ವಾರ್ಯ ಇಟ್ಟೇನೆಂಬುವಳು 2 ಮೂರುತಿಂಗಳು ತುಂಬಲು ಸುಭದ್ರ ವಾಲ್ಯ ಪಚ್ಚದ ಚಂದ್ರ ಬಾಳ್ಯವ ಬಯಸಿದಳು ಮಾರನಯ್ಯನ ತಂಗಿ ತೋಳಿಗ್ವಜ್ರದ ವಂಕಿ ಮಾಣಿಕ್ಯದ್ವೊಡ್ಯಾಣ ಇಟ್ಟೇನೆಂಬುವಳು 3 ನಾಲ್ಕು ತಿಂಗಳು ತುಂಬಲು ಸುಭದ್ರ ಆಕಳ ತುಪ್ಪ ಅನಾರಸ ಬಯಸಿದಳು ಶ್ರೀಕಾಂತನ ತಂಗಿ ತೂಕದ ಸರಿಗೆಯಿಟ್ಟು ಏಕಾವಳಿಯ ಸರ ಹಾಕೇನೆಂಬುವಳು 4 ಐದು ತಿಂಗಳು ತುಂಬಲು ಸುಭದ್ರ ಕೆನೆಮೊಸರ್ಹಾಕಿದ ಬುತ್ತಿ ಚಿತ್ರಾನ್ನವ ಬಯಸಿದಳು ಅಸುರಾಂತಕನ ತಂಗಿ ಹಸುರುಪತ್ತಲನುಟ್ಟು ಕುಸುಮ ಮಲ್ಲಿಗೆಮೊಗ್ಗು ಮುಡಿದೇನೆಂಬುವಳು 5 ಆರು ತಿಂಗಳು ತುಂಬಲು ಸುಭದ್ರ ಚೌರಿ ರಾಗಟೆ ಜಡೆಬಂಗಾರ ಬಯಸಿದಳು ಮಾರನಯ್ಯನ ತಂಗಿ ನಾಗಮುರಿಗೆನಿಟ್ಟು ಜಾಜಿ ಮಲ್ಲಿಗೆಮೊಗ್ಗು ಮುಡಿದೇನೆಂಬುವಳು 6 ಏಳು ತಿಂಗಳು ತುಂಬಲು ಸುಭದ್ರ ಕ್ಷೀರ ಮಂಡಿಗೆ ಬುಂದ್ಯ ಫೇಣಿಯ ಬಯಸಿದಳು ಕಮಲ ಕ್ಯಾದಿಗೆ ಮುಡಿಯ ನಿಂಬಾವಳಿ ಪತ್ತಲ ನಿರಿದುಟ್ಟೇನೆಂಬುವಳು7 ಎಂಟು ತಿಂಗಳು ತುಂಬಲು ಸುಭದ್ರ ಚಿಂತಾಕು ಪದಕ ಕಟ್ಟಾಣಿಯ ಬಯಸಿದಳು ವೈಕುಂಠಪತಿಯ ತಂಗಿ ಇಂಟರ್ ಪಪ್ಪುಳಿನುಟ್ಟು ಸೀಮಂತದುತ್ಸವ ಮಾಡೆ ಸುಖದಿಂದಿರುವಳು 8 ಒಂಬತ್ತು ತಿಂಗಳು ತುಂಬಲು ಸುಭದ್ರೆಗೆ ಬಂಗಾರದ್ಹೊರಸಿನಲ್ಲಿರಿಸಿ ಆರತಿ ಮಾಡಲು ಮಂಗಳಮಹಿಮ ಭೀಮೇಶಕೃಷ್ಣನ ತಂಗಿ ಕಂದ ಅಭಿಮನ್ಯು ಎಂಬುವನ ಪಡೆದಳು 9
--------------
ಹರಪನಹಳ್ಳಿಭೀಮವ್ವ
ವಾಣೀ ನೀ ಬಾರೆ ಪನ್ನಗವೇಣೀ ಓ ಪುಸ್ತಕ ಪಾಣಿ ಪ ಆಣಿಮುತ್ತಿನ ಹಾರ ಕಟ್ಟಾಣಿಯ ಕೊರಳಿನ ತ್ರಾಣಿ ಪಲ್ಲವÀಪಾಣಿ ಹಿರಣ್ಯಗರ್ಭನ ರಾಣಿ ಅ.ಪ. ಕರವ ಮುಗಿದು ನಾ ನಮಿಪೆನೆ ಮಯೂರಯಾನೆ ಕರುಣಾದಿ ನೋಡೆ ಮದಗಜಗಮನೆ ಚರಣ ಸೇವಕರ ಬಹುದುರಿತಗಳೋಡಿಸಿ ಸಿರಿರಮಣನೊಲಿಸುವ ಪರಿಯ ತೋರುತಲಿ ಬೇಗ 1 ಪ್ರದ್ಯುಮ್ನ ಜಠರಾ ಸಂಭೂತೆ ಪೂರ್ವಾಭಾರತೆ ಸದ್ವಿದ್ಯಾಭಿಮಾನಿ ದೇವತೆ ಮಧ್ವವನದಲಿ ನೀನೆ ಬದ್ಧವಾಗಿ ನೆಲೆಸುತ ಶುದ್ಧ ಮನದಲಿ ಅನಿರುದ್ಧನ ನಾಮ ನುಡಿಸುತ 2 ಸರಸೀಜನವದನೆ ಮಂದಸ್ಮಿತ ಬೀರೆ ಸಿತವಸನಧಾರೆ ಸಿರಿ ರಂಗೇಶಾವಿಠಲನ ತೋರೆ ಅರೆಬಿರಿದೆಸೆಯುವ ತಾವರೆಸುಮವನು ಪೋಲ್ವಸಿರಿಚರಣಂಗಳಿಗೆ ನಾ ನಿರುತದಿ ಎರಗುವೆ 3
--------------
ರಂಗೇಶವಿಠಲದಾಸರು