ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತನು ಸಹ ಕಾಂಬುದೆ ಬ್ರಹ್ಮಸತ್ಯವು ಸತ್ಯವ ಕೇಳೆಲೋ ತಮ್ಮತನು ಸಹ ಕಾಂಬುದೆ ಬ್ರಹ್ಮತನುವನು ಬಿಟ್ಟು ಬೇರೇನೂ ತೋರದುನಿನಗೆ ಅರಿದು ನಿಮ್ಮಪ್ಪಗೆ ಅರಿದು ಪ ಹೂವನೆ ಮುಂದೆ ಮುಂದಿಟ್ಟುಕೊಂಡುಸರ ಕಟ್ಟಬಹುದು ದೊಡ್ಡ ಚೆಂಡುಹೂವನೆ ಮುಂದಿಟ್ಟಿಕೊಂಡುಹೂವನೆ ಬಿಟ್ಟು ಪರಿಮಳ ಕಟ್ಟೆನೆಅವ್ವಗೆ ಅರಿದು ಅವ್ವನವ್ವಗೆ ಅರಿದು1 ಮುತ್ತದು ಕೇವಲ ಜ್ಯೋತಿ ಕಿವಿಗೆಮುತ್ತಿಡುವರಿಗದು ನೀತಿಮುತ್ತದು ಕೇವಲ ಜ್ಯೋತಿಮುತ್ತದು ಬಿಟ್ಟು ಜ್ಯೋತಿಯ ಬಿಡು ಎನೆಮುತ್ತದು ಅಜಗೆ ಅರಿದು ಮಹೇಶ್ವರಗರಿದು2 ಬೆಲ್ಲದ ಮುದ್ದೆಯ ನೋಡುಹಲ್ಲಿನಿಂದಲೇ ತಿನಬೇಕು ಕಡಿದುಬೆಲ್ಲದ ಮುದ್ದೆಯ ನೋಡುಬೆಲ್ಲವನು ಬಿಟ್ಟು ಸಿಹಿಯನು ತಿನ್ನೆನೆಬಲ್ಲ ಚಿದಾನಂದ ಸದ್ಗುರುಗರುದು 3
--------------
ಚಿದಾನಂದ ಅವಧೂತರು
ತೊಂಡ ನೆನಿಸ ಬೇಡ ಹರಿಯೇ ಪ ಪುಂಡರೀಕಾಕ್ಷನೆ ಕಾವ ತೊಂಡರ ತೊಂಡನೆನಿಸೋ ಅ.ಪ. ಹೆಂಡತಿಯ ಬಿಡಬಹುದು-ಕಾಡಿಗ್ಹೋಗಲಿ ಬಹುದು ಬಿಡದೆ ಜಪಿಸಲಿ ಬಹುದು-ಕಟುತಪವ ಮಾಡಲಿಬಹುದು ಒಡೆಯ ಕೃಷ್ಣನೆ ನಿನ್ನ ಅಡಿಯ ಕಾಡಲಿಬಹುದು ಕಂಡವರ ಊಳಿಗದಿ ಕೀರ್ತಿ ಪಡೆಯಲಾಗದೊ ದೇವ 1 ಆಶೆಯ ತೊರೆದು ನಿಜ ದಾಸನಾಗಲಿಬಹುದು ದೇಶ ದೇಶವ ತಿರುಗಿ ಕಾಸುಗಳಿಸಲಬಹುದು ಕೇಸರಿಯ ಹಿಡಿತಂದು ಪಾಶದಲಿ ಕಟ್ಟಬಹುದು ಶ್ರೀಶನಿನಗಲ್ಲದವರ ಸಂಗ ಏಸೇಸು ಜನ್ಮಕ್ಕು ಬ್ಯಾಡೋ 2 ಹೀನ ಜನರಾ ಸಂಗ ಮಾನವಂತರಿಗಲ್ಲ ದೀನಜನಮಂದಾರ ಕೊಡಬೇಡ ಇದು ಎನಗೇ ಮಾನಾಭಿಮಾನವನು ನಿನಗೆ ಒಪ್ಪಿಸಿದೆನೋ ಇನ್ನಾದರೂ ಸಲಹೋ ಶ್ರೀನಿವಾಸ ಕೃಷ್ಣವಿಠ್ಠಲನೆ ಜೀಯಾ 3
--------------
ಕೃಷ್ಣವಿಠಲದಾಸರು
ದುರ್ಜನರ ಸಂಗವನು ತ್ಯಜಿಸು ಮನವೆ, ಸಾಧು ಸಜ್ಜನರ ಸಂಗವನು ಭಜಿಸಿ ಸುಖಿಯಾಗೆಲವೊ ಪ ದುಷ್ಟ ವ್ಯಾಘ್ರನ ಕೈಯ ಮುಟ್ಟಿ ಹಿಡಿ ತರಬಹುದು ಅಟ್ಟಿಬಹ ಮದಕರಿಯ ಕಟ್ಟಬಹುದು ಕೃಷ್ಣಸರ್ಪನ ಹುತ್ತ ಕಲಕಿ ಜೀವಿಸಬಹುದು ದುಷ್ಟಾತ್ಮರಾದವರ ಬಿಟ್ಟು ಕಳೆ ಮನವೆ 1 ಚೇಳಬಾಲದ ಉರಿಯ ಜ್ವಾಲೆ ತಾಳಲುಬಹುದು ಕಾಲಮೇಘದ ಸಿಡಿಲು ಬೀಳಬಹುದು ಶೂಲಪಾಣಿಯ ಫಣೆಯ ಆಲಿ ಕೀಳಲುಬಹುದು ಕಾಳುಮೂಳರ ಸಂಗ ಮರೆದು ಕಳೆ ಮನವೆ 2 ಹರಿವ ಗರಗಸಿನಲ್ಲಿ ಶಿರವನೊಡ್ಡಲುಬಹುದು ಬೆರಸಿಬಹ ಕಾಡ್ಗಿಚ್ಚ ಧರಿಸಬಹುದು ಸರಿಸದಲಿ ನಿಂತು ಕೇಸರಿಯ ಕೆಣಕಲುಬಹುದು ಮರೆಸಿ ಕೊರಳನು ಕೊಯ್ವ ನರರ ಮರೆ ಮನವೆ 3 ಒಂದು ಜಾತಿಗೆ ವಿಷವು ಪುಚ್ಚದೊಳಗಿರುತಿಹುದು ಮ- ತ್ತೊಂದು ಜಾತಿಗೆ ದಂತದೊಳಗೆ ವಿಷವು ಒಂದು ಜಾತಿಗೆ ಮೈಯ ಅಂದವೆಲ್ಲವು ವಿಷವು ಹಿಂದೆಯಾಡುವ ನುಡಿಯು ಘೋರ ವಿಷ ಮನವೆ 4 ತೇರ ಕಂಡರೆ ತೊಲಗು ಮಾರೈದನಾಕ್ಷಣದಿ ವಾರುವಗೆ ಕಡೆ ಸಾರು ಈರೈದು ಮಾರುವನು ದಾರಿಯನು ಬಿಡು ಗಜಕೆ ಮೂರು ಸಾವಿರವನ್ನು ಊರ ಬಿಡು ದುರ್ಜನರ ಸೇರದಿರು ಮನವೆ 5 ಸತ್ಯವಂತರ ಕಂಡರರ್ಥಿಯಿಂದಲೆ ಎರಗು ನಿತ್ಯದೊಳು ಶ್ರೀಹರಿಯ ಕೀರ್ತನೆಯ ಮಾಡು ಉತ್ತಮೋತ್ತಮ ಪದವ ಹತ್ತಿಸುವವರ ಬೇಡು ಧೂರ್ತಮನುಜರ ಸಂಗ ಕಿತ್ತು ಕಳೆ ಮನವೆ 6 ಶುದ್ಧಮನವೆ ಎನ್ನ ಬುದ್ಧಿಯೊಳಗಡಗಿರ್ದು ಉದ್ಧರಿಸು ವರಾಹತಿಮ್ಮಪ್ಪನನು ನೆನೆದು ಮದ್ದನರೆ ಜನ್ಮದೊಳು ಮರಳಿಬಾರದ ಹಾಗೆ ಗದ್ದುಗೆಯ ಹಾಯ್ಕೆನ್ನ ಹೃದಯ ಮಧ್ಯದಲಿ 7
--------------
ವರಹತಿಮ್ಮಪ್ಪ
ರಾಮ ನಾಮಾಮೃತವ ಕೊಂಬವರೆಲ್ಲ |ಪ್ರೇಮದಿಂದಚ್ಯುತ ಪೇಟೆಗೆ ಬನ್ನಿರೆ ಪಒಮ್ಮನವೆರಸಿ ಬನ್ನಿ |ನಿಮ್ಮ ಮನಕೆ ಬಂದಂತಳೆದು ಕೊಳ್ಳಿ ||ರಾಮಟಿಂಕೆಯ ಸಲಿಸಿ ಶ್ರೀ ಕೃಷ್ಣನೆಂಬ |ಧರ್ಮದ ಸಂತೆ ನೆರೆದಿದೆ ಬನ್ನಿ 1ಉಂಟು ನಾಲ್ಕು ಕುದುರೆಗಳು |ಎಂಟಾನೆಯ ಬಿರುಬಲೆಯಲ್ಲಿ ಕಟ್ಟಬಹುದು ||ಸಾಲವರ್ಣದ ಪಟ್ಟಿಯು ಏಳಿರೆ |ಏಳುಲೋಕವು ಬಲ್ಲದು 2ಬೆಲೆಯಿಲ್ಲದ ಮುತ್ತುಂಟು |ಏಳೇಳ್ಪುಟಿಯ ಹೊಳೆವಪರಂಜಿಯ ಚಿನ್ನವುಂಟು ||ಥಳಥಳಿಸುವ ನೀಲಿಯ ಕೊಂಬುವರೆಲ್ಲ |ನಳಿನನಾಭನ ಸನ್ನಿಧಿಗೆ ಬನ್ನಿ 3ಎರಡು ಕಾಶಿಯಲಳೆವ ಕೊಳಗವು |ಪಿರಿದುದೊಂದು ಕಿರಿದೊಂದು ಉಂಟಲ್ಲಿಗೆ ||ಗರಳವವೊರಿಸಲು ರತ್ನವು |ಮರುತಾಶ್ರಯನ ಸನ್ನಿಧಿಗೆ 4ಆರಂಗಡಿಯ ಸುಟ್ಟು |ಸೂರೆಮಾಡಿ ಏಳು ಎಂಟು ಹಟ್ಟಕೊರವನೊ...ದುದು ||ಸಾರಿಸಿ ನವವಿಧ ಶುಚಿಯ ಹೇಳಿದ |ಸರ್ವಾತ್ಮಗೆ ಸೌದೆಯ 5ಸುಂಕಿಗರೈವರಿಗೆ ಹರುಷದಿಂದ |ಪಂಕಜನಾಭನ ಚೀಲ ತೋರಿ ||ಶಂಕೆಯಿಲ್ಲದೆ ನಡೆವ ಅವರನೆಲ್ಲ |ವಂಚಿಸಿ ಎದೆಯ ಟೊಣೆದು ಹೋಗುವಾ 6
--------------
ಪುರಂದರದಾಸರು