ಕೈತುತ್ತ ಹಾಕುವೆ ಬಾರೋ ರಂಗ
ಮೈತುಂಬಾ ಒಡವೆಯ ಇಡುವೆನು ಬಾರೋ ಪ
ಬೈತಲೆ ಬಾಚಿ ಹೂ ಮುಡಿಸುವೆ ಬಾರೋ
ತೈ ತೈ ತೈ ಎಂದು ಕುಣಿದಾಡು ಬಾರೋ ಅ.ಪ
ಬಿಸಿ ಬಿಸಿಯನ್ನವ ಮೊಸರಲಿ ಕಲಸಿ
ಹಸುವಿನ ಬೆಣ್ಣೆಯ ಅದರ ಮೇಲಿರಿಸಿ
ಕೇಸರಿ ಬೆರೆಸಿ
ತುಸು ಏಲಕ್ಕಿಯ ಪುಡಿಮಾಡಿರಿಸಿ 1
ಬಸಿರಲ್ಲಿ ಜಗಂಗಳ ತುಂಬಿಹೆನೆಂದು
ಹಸಿವಿಲ್ಲವೆನಬೇಡ ಅಸುರರಕೊಂದು
ಬಿಸದ ಕಾಳಿಂಗನ ತುಳಿದೆದ್ದುನಿಂದು
ಬಸವಳಿದಿರ್ಪೆನೀನಮರರ ಬಂಧು 2
ಹೊಸ ಪೀತಾಂಬರ ಕಟಿಬಂಧವಿಡುವೆ
ವಿಸರವ ಪಸರಿಪ ಹೂಗಳ ಮುಡಿವೆ
ರಸಸವಿನಾದದ ಕೊಳಲನು ಕುಡುವೆ
ನಸುನಗೆ ತೋರೋ ಮಾಂಗಿರಿರಂಗ ನಲಿವೆ 3