ಗೋಪಿ ನೋಡಮ್ಮಾ ಪ
ಗೋಪಿ ನೋಡಮ್ಮಾ
ದೇವ ದೇವೋತ್ತಮನಾದ ಕೇವಲ ಪರಬ್ರಹ್ಮ|
ದೇವಿಮಗನಾಗಿ ಬಂದಿಹನೆ ನರರಂದದಿ ನಮ್ಮಾ
ಭಾವಿಸಿ ಬ್ರಹ್ಮನ ಜನಕನ ಶಿಶುವೆಂದು
ಮುದ್ದಾಡಿಸುವಾ ಸಂಭ್ರಮಾ1
ಮುಖಸಾರಭೋಕ್ತನಿಗೆ ಮೊಲೆ ಹಾಲನುಣಿಸಿ|
ಮಜ್ಜನ ಗೈಸಿ|
ಪ್ರಕಟಿದಿ ಶೇಷಶಾಯಿಗೆ ತೊಟ್ಟಿಲದಿ ಮಲಗಿಸಿ|
ಸುಖಯೋಗ ನಿದ್ರೆಯುಳ್ಳಂಗೆ ಮಲಗೆಂದು
ಜೋ ಜೋ ಎಂಬಳಾಕೆ 2
ಆವ ಯೋಗ ಮಾಯದಲಿ ಮೂಜಗವಾಡಿಸುವ|
ಆವ ಮುಂಜರಗ ಸಿಡಿದು ಬೆಣ್ಣೆ ಬೇಡುತ ಕುಣಿವಾ|
ಗೋಪಿ ಕೈಯೊಳಾಡುವಾ|
ಆವನಲಿ ಮಹಿಪತಿ-ಸುತ ಪ್ರಭು ಲೀಲೆಯ ಕಣ್ಣಲಿ
ನೋಡಿ ಸುಖಿಸುವಾ 3