ದೇವಿ ಭಜನೆ
ಓಂ ನಮೋ ಓಂ ನಮೋ ಓ ನಮೋ ದೇವಿ ||
ಓಂ ನಮೋ ಓಂ ನಮೋ ಭಕ್ತ ಸಂಜೀವಿ ಪ.
ಶಂಭು ಮನೋಹರೆ | ಶಾಂಭವಿ ದೆÉೀವಿ ||
ಜಂಭಾರಿ ಸುರನರ | ವಂದಿತೆ ದೇವಿ ಅ.ಪ.
ಮಧುಕೈಟಭಾಖ್ಯರ ವಧಿಸಿದ ದೇವಿ ||
ಮುದದೊಳೀ ಮಹಿಯ | ನುದ್ಧರಿಸಿದ ದೇವಿ 1
ಮಹಿಷಾಖ್ಯ ದಾನವ ಮರ್ದಿನಿ ದೇವಿ ||
ದಹಿಸಿದೆ ಧೂಮ್ರಾಕ್ಷ | ನನು ಮಹಾದೇವಿ 2
ಚಂಡಮುಂಡಾಖ್ಯರ | ಖಂಡಿಸಿ ಶಿರಗಳ ||
ಚೆಂಡಾಡಿದ ಶ್ರೀ ಚಾಮುಂಡಿ ದೇವಿ 3
ರುಧಿರಬೀಜಾಖ್ಯನ | ರುಧಿರವ ಹೀರಿ ||
ವಧಿಸಿದೆ ಅದ್ಭುತ | ಮಹಿಮೆಯದೋರಿ 4
ಶುಂಭ ನಿಶುಂಭ ನಿ | ಷೂದಿನಿ ದೇವಿ ||
ಕುಂಭಿನಿ ಭಾರವ | ಹರಿಸಿದ ದೇವಿ 5
ಅರುಣಾಸುರ ಸಂ | ಹಾರಿಣಿ ದೇವಿ ||
ಶರಣರಿಗೊಲಿದ ಶ್ರೀ | ಭ್ರಾಮರಿ ದೇವಿ6
ನಂದಿನಿ ನದಿಯೊಳು | ನೆಲೆಸಿದ ದೇವಿ ||
ಕಂದರಂತೆಮ್ಮನು | ಸಲಹುವ ದೇವಿ7
ನಂಬಿದ ಭಕ್ತರ | ವೃಂದವ ದೇವಿ ||
ಅಂಬಿಕೆ ಪಾಲಿಸು | ಜಗದಂಬ ದೇವಿ 8
ಜಟಾಧರೇಶನ | ರ್ಧಾಂಗಿನೀ ದೇವಿ ||
ಕಟಿಲೊಳು ಮೆರೆದ | ಭ್ರಮರಾಂಬ ದೇವಿ9