ತಂದೆ ನಿನ್ನ ಕೃಪೆಯು ಎಂದಿಗೊ ಗೋವಿಂದ ಹರೆ ಪ
ತಂದೆ ನಿನ್ನ ಕೃಪೆಯು ಎಂದಿಗೆ ------ಸಿಗುವದೆಂದೆ
ಮಂದರಾಧರ ಮಾಧವಕೇಶವ ಅ.ಪ
ಸಾರೆ ಸಾರೆ ---- ಚ್ಚ ಸಂಸಾರದೊಳು ಮುಳುಗಿ ತೇಲುತಾ
ಇರುವುದು ಒಂದೆ ಧೀರ ನಿಮ್ಮಯ ಸ್ಮರಣೆಯ ತೋರದೆ
ಕಾಣದಂತೆ ಆಯಿತು 1
ಸಕಲವೇದ ಶಾಸ್ತ್ರ ಪುರಾಣ----ರಿತಾ ಪ್ರಕಟ
ಭಕ್ತ ಪಂಡಿತಾರ್ಯರಾ ಭಜಿಸದೆ ಮನದಿ
ವಿಕಟನಾಗಿ ನಿಮ್ಮ ಮಹಿಮೆಯನು ಕಾಣದೆ-----ತು
ಸಕಲಲೋಕ ಕರ್ತ ದೇವ ಸಾಧು ಜನರ ರಕ್ಷಿಸುವಾ 2
ಬ್ರಹ್ಮೇಂದ್ರ ರುದ್ರಾದಿಗಳಿಗೆ ವಶವು ----
ಮಹಿಮೆಯನು ಹೇಳಾ ನೀ
ಅನೇಕ ಚರಿತ ತೋಯಜನಕನಾದ
ಪರಬ್ರಹ್ಮ `ಹೆನ್ನವಿಠ್ಠಲಾ ' ಸಂ-----ತೋರದು ನಿಮ್ಮ
ಕರುಣ ತೋರಿದರೆ ಸರಿ 3