ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಲಶಾಬ್ಧಿಜಾತೆ ಸೀತೆಗಾರತಿಯನು ಬೆಳಗುವೆ ಲಲನಾಮಣಿಯ ಸೇರಿ ಸುಖಿಸಿ ನಲಿದು ಪಾಡುವೆ ಪ ಸರಸಿಜಾಸನಾದಿವಿನುತೆ, ಸುರವರಾರ್ಚಿತೆ ಶರದಿಂದುಹಾಸೆÉ ಧರಣಿಜಾತೆ ಕರುಣಿಸೆನ್ನುತೆ 1 ಕಮಲವದನೆ ಕಮಲನಯನೆ ಕಮಲವಾಸಿನೀ ವಿಮಲಚರಣೆ ರಾಮರಮಣಿ ಮಧುರಭಾಷಿಣಿ 2 ಶೇಷಶೈಲಾವಾಸದಯಿತೆ ವಿಶ್ವಸನ್ನುತೆ ಪೋಷಿಸೆನ್ನ ಜನಕಜಾತೆ ಸೀತೆಯೆನ್ನುತೆ 3
--------------
ನಂಜನಗೂಡು ತಿರುಮಲಾಂಬಾ
ಜಯತು ಜಯತು ಜಯತು ಪ. ಜಯತು ಜನಕಜಾತೆಯೆ ಜಯ ಭಜಕಜನ ಧಾತ್ರಿಯೆ ಜಯ ಜಡಭವ ನಮಿತ ಮೂರ್ತಿಯೆ ಜಯ ಜಗನ್ಮಾತೆಯೆ 1 ಪದ್ಮಸಂಭವೆ ಪದ್ಮಗಂಧಿನಿ ಪದ್ಮಮಾಲಿನಿ ಪದ್ಮಿನೀ ಪದ್ಮಲೋಚನೆ ಪದ್ಮವಾಸಿನಿ ಪದ್ಮನಾಭ ಕುಟುಂಬಿನಿ 2 ದೋಷರಹಿತ ಶ್ರೀ ಶೇಷ ಶೈಲನಿವಾಸ ಮನೋಲ್ಲಾಸಿನಿ ಪೋಷಿಸೆನ್ನ ನಿ ರ್ದೋಷಿ ಯೆನ್ನಿಸು ನಿತ್ಯನಿರ್ಮಲ ರೂಪಿಣಿ 3
--------------
ನಂಜನಗೂಡು ತಿರುಮಲಾಂಬಾ
ಫಣಿವೇಣಿ ಶುಕಪಾಣಿ ವನಜಾಕ್ಷಿ ರುಕ್ಮಿಣಿಪ. ಈರೇಳುಲೋಕದ ಮಾತೆ ಭೂಲೋಲಭೀಷ್ಮ ಕಜಾತೆ ಗುಣಶೀಲೆ ಗುಣಾತೀತೆ ತ್ರಿದಶಾಲಿಸನ್ನುತೆ1 ಶ್ರೀವಾಸುದೇವನ ರಾಣಿ ಲೋಕೇಶಮುಖ್ಯರ ಜನನಿ ಸುಪ್ರಕಾಶಿನಿ ಕಲ್ಯಾಣಿ ಕಲಹಂಸಗಾಮಿನಿ2 ಸುವಿಲಕ್ಷಣೈಕನಿಧಾನಿ ಮೀನಾಕ್ಷಿ ಪಲ್ಲವಪಾಣಿ ಸುಕ್ಷೇಮಸುಖದಾಯಿನಿ ಲಕ್ಷ್ಮೀನಾರಾಯಣಿ3
--------------
ತುಪಾಕಿ ವೆಂಕಟರಮಣಾಚಾರ್ಯ
ಮಾನವ ಅಜಹರವಿನುತ ನಿಜಪಾದ ಅನುದಿನವು ಭಜಸಿಬದುಕೆಲೊ ಪ ತ್ಯಜಿಸಿ ಅವಗುಣ ಸುಜನರೊಡಗೂಡಿ ನಿಜಾನಂದದಿ ಸುಜನ ಭಜಗಶಯನನ ಅ.ಪ ಹಲವು ಭ್ರಾಂತಿಗಳ್ಯಾಕೆಲೊ ಸುಳ್ಳೆ ಸುಳ್ಳೆ ಸಂಸಾರ ಕೊಳಪಟ್ಟು ಕೆಡದಿರೆಲೊ ಮಲಿನಮನಸಿನ ಸರ್ವ ಹೊಲೆಯ ಯೋಚನೆ ಬಿಟ್ಟು ತಿಳಕೊಂಡು ನಿಜಸುಖ ಪದವಿಗೆ ನದರಿಟ್ಟು ಉಳಕೋ ಸಿಕ್ಕ್ಹೊತ್ತುಗಳೆಯದಲೆ ಶುನಕೆಲುವು ಕಡಿದಂತೆ ಅಳಿವ ಸುಖದಾಸೆಗೆಳಸಿ ಕೆಡಬೇಡ ಜಲಜನಾಭನ ಒಲಿಸಿ ನಲಿಯೊ 1 ಬರುವಾಗ್ಗೆ ಬೆನ್ನಿನ್ಹಿಂದೆ ಹೆಡತಲೆ ಮೃತ್ಯುವಿನ ಕರಕೊಂಡು ಧರೆಗೆ ಬಂದಿ ಅರಲವದ ಸುಖಕಾಗಿ ಮರೆದು ಎಲ್ಲವ ನೀನು ಮರುಳನಾದದ್ದು ಕಂಡು ನಗುತಿಪ್ಪ ಮೃತ್ಯವ ಹೊರಳಿನೋಡದೆ ದುರುಳತನದ ಸ್ಥಿರದ ಪ್ರಪಂಚ ಖರೆಯೆಂದೆನ್ವುದು ಸರಿಯಲ್ಲೆಲೊ ಇದು ನಿರುತದ್ಹರಿಪಾದ ಸ್ಮರಣಾನಂದದಿ ಮರೆಯೊ ಬಿಡದೆ 2 ಫಣೆಯ ಬಾಯೊಳಗಿರುವಂಥ ಕಪ್ಪೆಯು ಮುಂದಾಡ್ವ ನೊಣಕ್ಹವಣಿಸುತಿರುವಂತೆ ಒಣಭ್ರಾಂತಿ ಪಡದಿರು ಮನಸಿಗೆ ಬಂದಂತೆ ಕ್ಷಣತೋರಿ ಅಡಗುವ ಕನಸು ಜಗಸುಖ ಜನನ ಮ ರಣೆಂಬ ದಣಿವು ಕಳೆವಂಥ ಜನಕಜಾತೆಯ ಧಣಿಯ ಶ್ರೀರಾಮನೊನರುಹಂಘ್ರಿಯ ಘನವ ಪೊಗಳುತ ಕುಣಿ ಕುಣಿದು ಧನ್ಯವಾಗೆಲೊ 3
--------------
ರಾಮದಾಸರು
ಫಣಿವೇಣಿ ಶುಕಪಾಣಿ ವನಜಾಕ್ಷಿ ರುಕ್ಮಿಣಿ ಪ.ಈರೇಳುಲೋಕದ ಮಾತೆ ಭೂಲೋಲಭೀಷ್ಮ ಕಜಾತೆಗುಣಶೀಲೆ ಗುಣಾತೀತೆ ತ್ರಿದಶಾಲಿಸನ್ನುತೆ 1ಶ್ರೀವಾಸುದೇವನ ರಾಣಿ ಲೋಕೇಶಮುಖ್ಯರಜನನಿಸುಪ್ರಕಾಶಿನಿ ಕಲ್ಯಾಣಿ ಕಲಹಂಸಗಾಮಿನಿ 2ಸುವಿಲಕ್ಷಣೈಕನಿಧಾನಿ ಮೀನಾಕ್ಷಿ ಪಲ್ಲವಪಾಣಿಸುಕ್ಷೇಮಸುಖದಾಯಿನಿ ಲಕ್ಷ್ಮೀನಾರಾಯಣಿ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ