ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಗಾಭೋಗ ಅರ್ಚಿಪೆನೆಂಬಾಸೆ ಘನವಯ್ಯ ಹರಿ ನಿನ್ನಮೆಚ್ಚಿಸಿ ಬದುಕುವೆನೆಂಬ ಮನದಾಸೆ ಘನವಯ್ಯಹೆಚ್ಚು ಬಾರಿ ಬಾರಿ ಎನ್ನ ಬೆಚ್ಚಿಸುವುದು ಉದರ ಕಿಚ್ಚುಕಚ್ಚುವ ಬಲು ಹುಲಿಯಂತೆಹುಚ್ಚುಮಾಡಿ ಕೊಲ್ಲುತಿದೆ ಅಚ್ಚ ಸರ್ವೋಚ್ಚನಿಚ್ಚಟದಿಂದಲಾಚ್ಯುತ ನಿನ್ನ ಮೆಚ್ಚಿಬಂದೆನು ನಾಸಚ್ಚಿದಾನಂದ ಹಯವದನಕೊಚ್ಚಿ ನಾನಾವ್ಯಾಧಿಗಳ ದುಶ್ಚಿತ್ತವ ಬಿಡಿಸು ಬೇಗಸಚ್ಚರಿತ್ರ ಸಲಹಯ್ಯ
--------------
ವಾದಿರಾಜ
ತಾತ್ಸಾರಕಿದು ಕಾಲವಲ್ಲ ರಂಗಯ್ಯ ಶ್ರೀ- ವತ್ಸಲಾಂಛನ ಸುಖ ಚಿನ್ಮಯನೆ ವತ್ಸನ ಧ್ವನಿ ಕೇಳಿ ಒದಗುವ ಗೋವಂತೆ ಭೃತ್ಯರ ಸಲಹುವ ಬಿರುದುಳ್ಳ ನರಸಿಂಹ ಪ. ಹುಚ್ಚಾಗೆಲ್ಲರ ಕಚ್ಚುವ ನಾಯಂತೆ ತುಚ್ಛವಾದ ಬಗುಳುಚ್ಚರಿಸಿ ಇಚ್ಛಾನುಸಾರದಿಂದಿರುವ ಹೂಣನ ಬಾಯಿ ಮುಚ್ಚಿಸಿ ಮೂಲೆಯೊಳ್ಮುರಿದೊತ್ತು ಮುರಹರ 1 ನಿನ್ನ ಸೇವೆಯನ್ನು ನಿರುತದಿ ನಡೆಸುತ ಅನ್ಯರ ಲಕ್ಷಿಸದಿರಲೆನ್ನನು ಭಿನ್ನ ಭಾವದಿ ಭೀತಿ ಬಡಿಸುವ ದುಷ್ಟನ ಇನ್ನುಪೇಕ್ಷಿಸಿ ಸುಮ್ಮನಿರುವೆ ಯಾತಕೆ ಸ್ವಾಮಿ 2 ದುಷ್ಟ ಹಿರಣ್ಯಚರ್ಮಾದಿದಮನ ನಿನ- ಗೆಷ್ಟೆಂದು ಪೇಳಲಿ ವಿಧಿಜನಕ ಸೃಷ್ಟಿಗೊಡೆಯ ವೆಂಕಟೇಶನ ಹೂಣನ ಮಾಧವ 3
--------------
ತುಪಾಕಿ ವೆಂಕಟರಮಣಾಚಾರ್ಯ
ನೆಚ್ಚಬೇಡಿ ಪತಿತನಾರಿಯ | ಕಚ್ಚುವ ಹಾವಿನ ಸಂಗವೆನ್ನಿ || ಪ ಮೆಚ್ಚುಗೊಳಿಪಳು ಗುಣಿಸಿ ನೋಡಿ ನಿಚ್ಚದಲಿ ಚಿತ್ತ ಚಂಚಲಳಾಗಿ ಅ.ಪ ಪರಿಯಂತ | ಯಾವದನಿತು ಮೊಗವನೆತ್ತದಲೆ || ಎವೆ ತೆಗೆದು ದಿಕ್ಕುಗಳು ನೋಡದೆ | ಅವನಿಗೆ ಬಾಗಿ ನಡೆಯುತ || ತವರು ಮನೆಯವರನು ಹಳಿದು | ನವÀನವ ಪ್ರಾವರ್ತನವನು ತೋರುತ || ಅವಗುಣಂಗಳಿಲ್ಲ ದೋಷಾದಲಿ | ಲವಕಾಲವನು ಕಳೆವ ನಾರಿಯ 1 ಪ್ರಾಯಾವಸ್ಥೆ ಬಂದು ಪ್ರಾಪ್ತವಾಗಲು | ಆಯುತಾಕ್ಷಿಗಳ ತಿರುಹಿ ಮೆಲ್ಲನೆ || ಬಾಯಲ್ಲಿ ಒಂದೊಂದು ಕ್ರಮಾಸಾರದಿ | ನೋಯ ನೋಯದಂತೆ ವಚನವ || ದಾಯಿಗಳಂತೆ ಮತ್ಸರಿಸಿ ಬಯ್ಯದೆ | ಮಾಯಾವಿ ಕಲ್ಪಿಸಿ ಮುಸಿಮುಸಿ ನಗೆ || ಆಯಕೆ ತಗಲಿ ಕಂಡ ಜನರಿಗೆ | ಘಾಯ ಕಾಣಿಸದಂತೆ ಮಾಳ್ಪಳ 2 ಅತ್ತೆ ಮಾವಗೆ ಅತ್ಯಂತವಾಗಿ ತಾನು | ಪ್ರತಿ ಉತ್ತರ ಪೇಳಲು ಅಂಜಿ ಅಂಜಿದಂತೆ || ಉತ್ತಮರ ಮನೋರಥವ ಕೆಡಿಸಿ | ಅತ್ತಿಗಿ ನಾದುನಿ ಮಿಗಿಲಾದವರೆಲ್ಲ || ಕತ್ತೆ ನಾಯಿ ನರಿಯೆಂಬೊ ಸೊಲ್ಲಲ್ಲಾದೆ | ಎತ್ತಲಾದರು ವಂಚಿಸಿ ಗಂಡನ್ನ || ತನ್ನಂತೆ ಮಾಡಿಕೊಂಡು ಹಗಲಿರುಳು ಥೈ- | ತಥ್ಥಾ ಎಂದಾಡಿಸಿ ಕುಣಿಸುವ ಸತಿಯಳ 3 ಕೊಂಡ ತೆರದಿ | ಪತಿಯ ಸಮಯ ನೋಡದೆ ತಾನು || ಸಥೆಯಿಂದಲಿ ಸಂಸಾರದೊಳಗಿದ್ದು | ಸುತರ ಪಡೆದು ಹಮ್ಮಿಲಿ || ಕಥನವೆಬ್ಬಿಸಿ ಗಂಡನ್ನ ಅಡವಿ | ಪಥವ ಹಿಡಿಸಿ ಹಣದಗೋಸುಗ || ಸತತ ಮನೆಯೊಳಗಿದ್ದ ಬದುಕು | ಮಿತಿಯಿಲ್ಲದೆ ಭಕ್ಷಿಸುವ ನಾರಿಯ 4 ಒಲಿಪಗೆ ನೀವು ಮೋಸಗೊಂಡು | ಒಲಿಯದಿರಿ ಸ್ತ್ರೀಯರಿಗೆ ಸೋತು || ಕಲಿಗೆ ಪ್ರಥಮ ಪಟ್ಟದ ಗದ್ದಿಗೆ | ಸುಲಭವಲ್ಲವೋ ಸುಖವಿಲ್ಲಾ || ಕೆಲಕಾಲ ಮಹಾ ಕಾತರದಿಂದಲಿ | ವಳಗಾಗದಿರು ಒಳಿತು ಪೇಳುವೆ || ಜಲಜಾಕ್ಷ ವಿಜಯವಿಠ್ಠಲನ್ನ ನಂಬಿರೋ | ನಂಬಿರೋ ನಂಬಿರೋ ಚತುರರು 5
--------------
ವಿಜಯದಾಸ
ಬಾಲನಮ್ಮ ಬಾಲಕೃಷ್ಣ ಬಹಳ ಮಾಯಕಾರನೀತ ಪ ಬಾಲನೀನೆ ಗೋಪಾಲ ನೀಲಶ್ಯಾಮ ವನಮಾಲ ಬಾಲನಂತೆ ಕಣ್ಗೆತೋರಿ ಆಲಯ ಗೌಪ್ಯದಿಂದ ದೂರಿ ಅಧರ ಸುರಿವ ಅ.ಪ ಮಿಂದು ಮಡಿಯನುಟ್ಟಾನಂದದಿ ಶೋಭಿಸುವ ಅಂದಮಾದ ಹಂಸತಲ್ಪದಿ ಪವಡಿಸಿರುವ ಇಂದು ಮುಖಿಯವರ ಬಳಿಗೆ ಮುದದಿ ಮಂದಹಾಸದಿ ಮೋಹ ಮಾತನಾಡಿ ಬಾಧಿಸಿ ಕಂದರ್ಪನ್ಹೇವದಿ ಸುಲಿದುಕೊಂಡವ 1 ನಲಿನಲಿದು ಬೀಳುತೇಳುತ ಲಲನೆಯರಿಗೀ ಸುಲಿಯಪಲ್ಲು ತೋರಿನಗುತ ದಾರಿ ತರುಬಿ ಚೆಲುವಾದಾಟಗಳನೆ ಆಡುತ ಕೊಳಲನೂದುತ ಅರಿವು ಮರವೆಮಾಡಿ ತಿಳಿಯದ್ಹಾಗೆ ಘಳಿಲಿನ್ಹಾರಿ ಎಳೆದು ಏಕಾಂತಸ್ಥಳಕ್ಕೊಯ್ದು ಹಲವು ಕ್ರೀಡದಿಕಳೆಯ ಸೆಳೆದು ಗಲ್ಲಕಚ್ಚುವ ಜಿಗಿದು ಓಡುವ 2 ಹಿತದಿ ಆಡುವ ಸುತರ ಕೆಣಕುವ ಬಿಡಿಸಲ್ಹೋದ ಸತಿಯರ ಮೈಮೇಲೆ ಬರುವ ಸಣ್ಣವನೇನೇ ಪತಿ ನಾ ನಿಮಗೆಂದ್ಯವ್ವನ ತಾಳುವ ವ್ಯಥೆಯಬಡಿಸುವ ಮೀಸಲು ಮುರಿಸಿ ದೇವರು ತಾನೆಯೆನಿಸಿ ಪತಿತ ಶ್ರೀರಾಮ 3
--------------
ರಾಮದಾಸರು
ಸುಳ್ಳಿಗೆ ನಗರೇನೊರಂಗಯ್ಯನಿನ್ನ ಕಳ್ಳತನವ ನೋಡಿ ಪ. ಹಾರುವ ಹದ್ದನೇರಿ ತಿರುಗಾಡುವಿಜಾರಿಬಿದ್ದರೆ ತೆರನೇನೊ ಜಾರಿಬಿದ್ದರೆ ತೆರನೇನೊ ನಿನಗೆ ಬುದ್ಧಿಯಾರು ಹೇಳುವರೊ ಧರೆ ಮ್ಯಾಲ1 ಕ್ಷೀರ ಸಮುದ್ರಶಾಯಿ ಎಂದರೆ ಹಿಗ್ಗುವಿಯಾರು ಅರಿಯರು ನಿನ್ನ ಹುಳುಕುಯಾರು ಅರಿಯರು ನಿನ್ನ ಹುಳುಕು ಅತ್ತೆಮನೆ ಸೇರಿದವನೆಂದು ನಗತಾರೊ 2 ನೀರೊಳು ನಿನ್ನ ಮನೆ ಹಾವಿನ ಮ್ಯಾಲೆ ನಿದ್ರೆ ಹಾರುವ ಹದ್ದನೇರುವಿಹಾರುವ ಹದ್ದನೇರುವಿ ತಿರುತಿಂಬೊಮೂರು ಅಹಂಕಾರ ನಿನಗ್ಯಾಕೊ3 ಮಗಳ ಕೊಟ್ಟೆನೆಂದು ಮಮಕಾರದಿಂದಲೆಸುಗುಣ ಸಮುದ್ರ ಉಳುಹಿದಸುಗುಣ ಸಮುದ್ರ ಉಳುಹಿದ ಕಚ್ಚುವ ಶೇಷಖಗರಾಜನಿಂದ ಕೈಕಾಯ್ದ4 ಕರವ ಕರವ ನೆಗಹಿದ ಕಾರಣ ಹಾರುವ ಗರುಡ ಕೈ ಕಾಯ್ದ5 ಕಾಲ ಯವನನ ಕೂಡ ಕಲಹವ ಮಾಡಿಬಂದು ಮೂಲೆಲೆ ಹೋಗಿ ಅಡಗಿದಿಮೂಲೆಲೆ ಹೋಗಿ ಅಡಗಿದಿ ಮುಚಕುಂದ ರಾಯ ನಿಂತಾಗ ಉಳದೆಲ್ಲೊ6 ಮಧುವೈರಿ ನೀನು ಗೆಲಲಿಲ್ಲಮಧುವೈರಿ ನೀನು ಗೆಲಲಿಲ್ಲ ರಮಿಯರಸ ಮಧೂಕದಿಂದ ಅವರ ಮುಡುಹಿದ 7
--------------
ಗಲಗಲಿಅವ್ವನವರು
ನಿನ್ನ ಮಗನ ಮುದ್ದು ನಿನಗಾದರೆಗೋಪಿಆರಿಗೇನೆ? |ಎನ್ನ ಕೂಡ ಸರಸವಾಡಲು ಓರಗೆಯೇನೆ? ಪಹೆಚ್ಚಿನ ಸತಿಯರ ಕಚ್ಚೆಯ ಬಿಚ್ಚುವ ಹುಚ್ಚನೇನೆ?-ಅಮ್ಮ |ಇಚ್ಛೆಯರಿತು ನಮ್ಮ ಗಲ್ಲವ ಕಚ್ಚುವ ನೆಚ್ಚನೇನೆ? 1ಚೆಂಡೆಂದು ಮಿಂಡೆಯರು ದುಂಡು ಕುಚವ ಪಿಡಿವ ಗಂಡನೇನೆ? |ಕಂಡಕಂಡಲ್ಲಿ ಉದ್ದಂಡವ ಮಾಡುವ ಪುಂಡನೇನೆ 2ಹೊಸ ಕೂಟವರಿತು ಹಾಸಿಗೆಯನು ಹಾಕುವ ಶಿಶುವು ಏನೆ? |ಅಸಹಾಯ ಶೂರ ಶ್ರೀ ಪುರಂದರವಿಠಲರಾಯ ಕಾಣೆ 3
--------------
ಪುರಂದರದಾಸರು