ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವರ್ಣಿಸಲು ಸಾಧ್ಯವೆ ಧರೆಯೊಳಿನ್ನು ಗುರುವರ್ಯಸುಶೀಲೇಂದ್ರ ತೀರ್ಥರ ಮಹಿಮೆಯನ್ನು ಪ ಭಾನುನಂದನನಂತೆ ದೀನ ಮಾನವರಿಗೆ ಸಾನುರಾಗದಿ ಕೊಡುವ ದಾನ ನೋಡಿ || ಏನು ಹೇಳಲಿ ದಿವಿಜಧೇನು ಭೂರುಹಮಣಿ ಕ್ಷೋಣಿಯೊಳು ಜಡಪಶು ರೂಪ ತಾಳಿದವು 1 ಪರಮಠಾಧೀಶರು ಪರಿಪರಿಯಲಿಂದವರ ಪರಮ ಔದಾರ್ಯಗುಣ ಪರೀಕ್ಷಿಸುತಲಿ ಬೆರಳು ಕಚ್ಚುತಲಿ ಬೆರಗಾಗಿ ಜಗದೊಳಗೆ ಸರಿ ಇವರಿಗಿಲ್ಲೆಂದು ಶಿರದೂಗಿ ಹೊಗಳಿದರು 2 ಧೀಮಂತ ಜನರೊಡೆಯ ಶ್ರೀಮಂತಮಂದಿರದ ಸ್ವಾಮಿಗಳ ಪೂರ್ಣ ಪ್ರೇಮ ಪಡೆದು | ತಾಮರಸ ಭಾವ ಪೂಜ್ಯ ಶಾಮಸುಂದರ ಮೂಲ ರಾಮ ಮೂರ್ತಿಯನು ಭೂಮಿಯೊಳು ಮೆರೆಸಿದರು 3
--------------
ಶಾಮಸುಂದರ ವಿಠಲ
ಶ್ರೀನಿಕೇತನ ಲಕ್ಷ್ಮೀ ಕಾಂತನ ಪದಪದ್ಮ ಧ್ಯಾನ ಮಾಡುತ ಎನ್ನ ಸ್ಥಿತಿಯ ದೀನಭಾವನೆಯಿಂದಲೊರೆವೆನು ಗುರುಪವ ಮಾನ ಪಾಲಿಸಲಿ ಸನ್ಮತಿಯ ಪ. ತಾನು ತನ್ನದೆಂಬ ಹೀನ ಭಾವನೆಯಿಂದ ನಾನಾ ಯೋನಿಗಳಲ್ಲಿ ಚರಿಸಿ ಮಾನವ ಜನ್ಮವನೆತ್ತಲು ಮುಂದಾದ- ದೇನೆಂಬೆ ಗರ್ಭದೊಳುದಿಸಿ 1 ಮಾತಾಪಿತರುಗಳು ಮೋಹದಿ ರಮಿಸಲು ಕೇತ ತತಿಗೆ ಸರಿಯಾಗಿ ಆತು ಬಂದಿಹೆನು ಗರ್ಭದಿ ಮೆಲು ನರ ವ್ರಾತ ಬಂಧಕೆ ಗುರಿಯಾಗಿ 2 ಸೇರಿದ ಕ್ರಿಮಿ ಪರಿವಾರ ಕಚ್ಚುತಲಿರೆ ಚೀರಲಾದರು ಶಕ್ತಿಯಿರದೆ ಭಾರ ವಸ್ತುವು ಕಣ್ಣಸಾರವು ತಡೆಯದೆ ಗಾರುಗೊಂಡೆನು ಗರ್ಭದೊಳಗೆ 3 ಮೂರರಾ ಮೇಲೆ ಮತ್ತಾರುಮಾಸಗಳಿಂತು ಭಾರಿ ಭವಣೆಗೊಂಡು ಕಡೆಗೆ ಭೋರನೆ ಭೂಮಿಗೆ ದೂರಿ ಬಂದೆನು ಮಲ ಧಾರೆಯಾ ಕೂಡಿ ಮೈಯೊಳಗೆ 4 ಹೇಸಿಗೆ ಮಲಮೂತ್ರ ರಾಶಿಯ ಒಳಗೆ ದು- ರ್ವಾಸನೆ ಬರುವ ಗೆರಸಿಯ ಹಾಸಿಗೆ ಒಳಗೆ ಹಾಕಿರುತಿರೆ ದೇಹದ ಲೇಶ ಸ್ವಾತಂತ್ರ್ಯವೇನಿರದೆ 5 ಮೂಸಿ ಮುತ್ತುವ ನುಸಿಮುತ್ಕುಣ ಬಾಧೆಗೆ ಘಾಸಿಗೊಳುತ ಬಾಯ ತೆರದೆ ದೋಷ ಶಂಕಿಸಿ ಮೈಯೊಳಿಕ್ಕಿದ ಬರೆಗಳ ಬಾಸಲೆಯುನು ತಾಳ್ದೆ ಬರಿದೆ 6 ನಾಲ್ಕು ಕಾಲುಗಳಿಂದ ನಾಯಿಗೆ ಪರಿಯಾಗಿ ಸೋಕಿದೆ ಸರ್ವತ್ರ ತಿರುಗಿ ಸಾಕುವ ಜನರೆಡಬಲಗಾಲ ತುದಿಯಿಂದ ದೂಕಿದರಲ್ಲಿಯೆ ಸುಳಿದೆ 7 ವಾಕುಗಳೆಂಬ ಕೂರಂಬನು ಸಹಿಸಿ ಪ- ರಾಕೆಂದು ಪರರ ಸೇವಿಸಿದೆ ಮಾಕಳತ್ರನೆ ನಿನ್ನ ಕೃಪೆಯಾದ ಬಳಿಕ ಮೋ- ಹಾಕಾರ ಮಡುವಿನೊಳಿಳಿದೆ 8 ಈಗಲಾದರು ದೇಹ ಭೋಗವೆ ಬಯಸುತ ನೀಗಿದೆ ವ್ರತ ನೇಮಾದಿಗಳ ಸಾಗದ ಫಲ ತನಗಾಗಬೇಕೆಂಬ ಮ- ನೋಗತಿಯಿಂದ ಕರ್ಮಗಳ 9 ಮೂಗಭಾವನೆಯನ್ನು ನೀಗದೆನಿಸಿ ಮುಂ- ದಾಗಿಯಾಡುವೆ ಮಥನಗಳ ಕಾಗೆಯು ಕುಂಭದ ಜಲ ಕುಕ್ಕುವಂತೆ ಬೆಂ- ಡಾಗಿ ಕೊಂಡೆನು ಝಗಳಗಳ 10 ಕಂತುಜನಕ ಕಂಜನಾಭ ವೆಂಕಟರಾಜ ಚಿಂತಾಮಣಿ ಸುರತರುವೆ ಎಂತಾದರು ನಿನ್ನ ದಾಸ್ಯ ಸೇರಿದ ಮೇಲೆ ಇಂತುಪೇಕ್ಷಿಸುವುದು ಥರವೆ 11 ಭ್ರಾಂತಿ ಎಂಬುದ ಬಿಡಿಸಿನ್ನಾದರು ಲಕ್ಷ್ಮೀ ಕಾಂತ ಕಾರುಣ್ಯ ವಾರುಧಿಯೆ ಚಿಂತಿತದಾಯಿ ಎನ್ನಂತರಂಗದಿ ಬೇಗ ನಿತ್ಯ ವಿಧಿಯೆ 12
--------------
ತುಪಾಕಿ ವೆಂಕಟರಮಣಾಚಾರ್ಯ
ಆರ ಮುಂಧೇಳಲಿ ಕರಕರಿಯ ಈ |ಪೋರನು ಕೊಡವಲ್ಲನಲ್ಲೇ ಸೀರೆಯ ಪದಾರಿಯೊಳ್ಹೋಗಿ ಬಹರ್ಯಾರೆನ್ನ ಕಂಡರೆ |ಊರೆಲ್ಲ ಹೋಗಿ ದೂರರೇನೆ1ಸಂತಿಗೆ ಹೋಗ್ಯಾಕೆ ನಿಂತರೆಂದುಡುಕುತ |ಕಾಂತನೇ ಬಂದರೇನಂತ ಹೇಳುವಾ 2ಬತ್ತಲಾರಾಗಿ ಜಲ ಮತ್ತೀಗ ಸೇರುವಾಗಿ |ಮೃತ್ಯು ಬಂದನಂಬುದರ್ತಿವೇನೆ 3ನೀರ ಹಾವುಗಳೆಲ್ಲ ಶರೀರವ ಸುತ್ತುತಿವೆ |ಗಾರಾದೆವಲ್ಲೆ ವಾರಿಜಾಸ್ಯೆ 4ಮುಳ್ಳು ತೆಪ್ಪವು ಮೋರೆಗೆಲ್ಲ ಮುಚ್ಚುತಲಿವೆ |ಖುಲ್ಲಪೋರಗೆ ದಯೆಯಿಲ್ಲವಲ್ಲೇ 5ಜಲ ಜಂತುಗಳೆಲ್ಲ ಗುಳು ಗುಳು ಮಾಡುತವೆ |ಜಲಜಾಕ್ಷಗ್ಯೇತಕೆ ತಿಳಿಯದಮ್ಮ 6ಮೀನಾಗಳಲ್ಲಿ ಹತ್ತಿ ಏನೇನೋ ಮಾಡುತವೆ |ಏಣಾಕ್ಷಿ ನಮಗೇ ಏನು ಬಂತೇ 7ಹಿಂದತ್ತ ಹೋದರೆ ಕಂಧರದುದ್ದ ನೀರು |ಮುಂದತ್ತ ಬರೆ ಎದೆಗಿಂದ ಕೆಳಗೆ 8ಏಡಿಗಳೆಲ್ಲ ಕಾಲು ನೋಡಿ ಕಚ್ಚುತಲಿವೆ |ಮಾಡಲಿನೆ ಮೋರೆ ಬಾಡಿತಲ್ಲೆ 9ಮೂಗುತಿ ಮಣಿಯೆಲ್ಲ ಹೇಗೋ ಎಲ್ಲ್ಯೋ ಎನಲು |ಈ ಗತಿಯಾಗೆ ಮನೆಗೆ ಹೋಗೋದ್ಹ್ಯಾಂಗೆ 10ಏನಾದರಾಗಲಿ ಪ್ರಾಣೇಶ ವಿಠಲಗೆ |ನೀನೇ ಗತಿಯೋ ಕಾಯೊ ಎನ್ನಬೇಕೇ 11
--------------
ಪ್ರಾಣೇಶದಾಸರು