ಚಿಂತೆಯ ಮಾಡದಿರು ಚದುರೆ ನಿನಗೆ ನಾನು
ಕಂತುಪಿತನನು ತೋರುವೆ ಪ
ಸಂತೋಷದಿಂದ ಸರ್ವಾಭರಣವಿಟ್ಟುಕೊಂಡು ನಿಂತು ಬಾಗಿಲೊಳು ನೋಡೆ ಪಾಡೆ.ಅ.ಪ
ಕುಸುಮ ಹಾರವನು ಸುಖನಿಧಿಗೆಕಂದರದಿ ನೀಡಿ ನೋಡೆಸಂದೇಹ ಬಿಟ್ಟು ಬಿಗಿದಪ್ಪಿ ಮನವೊಂದಾಗಿಎಂದೆಂದಿಗಗಲದಿರೆನ್ನ ರನ್ನ 1
ಆಸನವ ಕೊಟ್ಟು ಕಮಲಾಸನನ ಪಿತಗೆ ಸವಿ-ಯೂಟಗಳನುಣ್ಣಿಸಿಲೇಸಾಗಿ ತಾಂಬೂಲ ತವಕದಲಿ ತಂದಿಟ್ಟುವಾಸನೆಗಳನೆ ತೊಟ್ಟು ಸೂಸುವ ಸುಳಿಗುರುಳುಗಳ ತಿದ್ದುತಲಿ ನಕ್ಕುಶ್ರೀಶನ್ನ ಮರೆಯ ಹೊಕ್ಕುಆ ಸಮಯದಲಿ ನಿನಗೆ ದಾಸಿ ಎನ್ನಯ ಮನದಿವಾಸವಾಗು ಬಿಡದೆ ಎನ್ನ ರನ್ನ 2
ಇಂತು ಈ ಪರಿಯಲ್ಲಿ ಶ್ರೀಕಾಂತನನು ಕೂಡಿ ಏ-ಕಾಂತದಲಿ ರತಿಯ ಮಾಡಿಸಂತೋಷವನು ಪಡಿಸಿ ಸಕಲ ಭೋಗವ ತಿಳಿಸಿಸಂತತ ಸ್ನೇಹ ಬೆಳೆಸಿಅಂತರಂಗಕ್ಕೆ ಹಚ್ಚಿ ಅವನಾಗಿ ತಾ ಮೆಚ್ಚಿಪ್ರೀತಿಯಿಂದಧರ ಕಚ್ಚಿಕಂತು ಕೇಳಿಯೊಳು ಕಡುಚೆಲ್ವ ರಂಗವಿಠಲಇಂತು ನಿನ್ನಗಲ ಕಾಣೆ-ಜಾಣೆ.3