ಮಂಗಳಂ ಜಯ ಮಂಗಳಂ ಶುಭಮಂಗಳೆನ್ನಿರೇ
ಹಿಂಗದಂತರಂಗಲಿಪ್ಪಾ ನಂಗನಯ್ಯಗೆ ಪ
ಹೆಣ್ಣ ಮಾಡಿತಮನ್ನ ವಿಕ್ರಮ ಹೆಣ್ಣವೆನಿಸಿ ಹೆಣ್ಣಿಗೊಲಿದು
ಹೆಣ್ಣು ತೊ ಡಿಯೊಳಿನ್ನು ತಾಳಿ ಹೆಣ್ಣ ಮಡ ದಂಗೆ
ಹೆಣ್ಣಿನಳಿದು ಹೆಣ್ಣೆ ನೆಬ್ಬಿಸಿ ಹೆಣ್ಣ ಹಲವರೊಡನೆ ಆಡಿದ
ಹೆಣ್ಣ ವೃತಗೆಡಿಸಿ ಕುದುರೆ ಯಾರೋಹಣ ಗೈದಂಗೆ 1
ನಿಗಮ ತಂದು ನಗವನೆತ್ತಿ ಜಗವನುಳಹಿ ಮಗುವಿಗೊಲಿದು
ತುಂಬಿ ಮಿಗಿಲ ಭೂಸುರಗಳ ಹೊರದಂಗೆ
ಬಿಗಡಗೊಲಿಸಿದ ಸಗಟನೊತ್ತಿ
ವಿಗಡ ಕಲ್ಕಿಗೆ 2
ಮತ್ಸ್ಯರೂಪದಿ ಕಚ್ಚಪಾಗಿ ಸ್ವಚ್ಛಕೋಡದಿ ಬೆಚ್ಚ ನರಹರಿ
ಅಚ್ಚ ವಾಮನ ನಿಚ್ಛ ಕೊಡಲಿಯ ಮಚ್ಚು ಜನ ಕಂಗೆ
ಇಚ್ಛ ನಡೆಸಿದ ಮೆಚ್ಚಿ ಗೋಕುಲ ಹುಚ್ಚು ಮಾಡಿದ ಬಾಲನೆನಿಸಿ
ಸಚ್ಚರಿತ ಕಲಿನಾಶ ಮಹಿಪತಿ ನಂದ ನೊಡಿಯಂಗೆ 3