ಮರೆಯದಿರು ಮರೆಯದಿರು ಮನುಜಾನಾರಾಯಣನ ಸ್ಮರಣೆಯನು ಮಾಡು ಮನುಜಾ ಪ
ಸತಿ ಬಣಗು ಹೆಣ್ಣುಗಳೇಕೆಮಂಗಳಾತ್ಮಕನಿರಲಿಕ್ಕೆ ಪರದೈವವೇಕೆ 1
ಹಾಲು ಹಳ್ಳವಿರಲಿಕ್ಕೆ ವಾಳಿಯವ ತರಲೇಕೆಮೇಲು ನಾಮವಿರಲಿಕ್ಕೆ ಕಟುಕು ಇನ್ನೇಕೆಬಾಲ ಹನುಮನಿರಲಿಕ್ಕೆ ಹುಲು ಕಪಿಗಳೇಕೆಒಳ್ಳೆ ತುಳಸಿ ಇರಲಿಕ್ಕೆ ಕಗ್ಗೊರಲೆಯೇಕೆ 2
ಚಿನ್ನದ ಗಿರಿಯಿರಲಿಕ್ಕೆ ಕಬ್ಬಿಣದ ಮೊರಡಿಯೇಕೆರನ್ನ ಮಾಣಿಕವಿರಲಿಕ್ಕೆ ಕಾಜಿನ ಹರಳೇಕೆಅನ್ನ ತುಪ್ಪವಿರಲಿಕ್ಕೆ ಮದ್ಯಪಾನಗಳೇಕೆಚೆನ್ನಾದಿಕೇಶವನಿರೆ ಬಿನುಗು ದೈವಗಳೇಕೆ3