ಪೂರ್ವ ಜನ್ಮದಲಿ ನಾ ಮಾಡಿದ ಕರ್ಮದಿಂಉರ್ವಿಯೊಳು ಜನಿಸಿದೆನೊ ಕೃಷ್ಣ ಪ
ಕಾರುಣ್ಯನಿಧಿ ಎನ್ನ ಕಾಯಬೇಕಯ್ಯ ಹರಿವಾರಿಜನಾಭನೆ ಮುದ್ದುಕೃಷ್ಣಅ
ಪುಟ್ಟಿದಂದಿನಾರಭ್ಯ ಸುಖವೆಂಬುವುದನರಿಯೆಕಷ್ಟ ಪಟ್ಟೆನು ಕೇಳೋ ಕೃಷ್ಣತೊಟ್ಟಿಲ ಶಿಶು ತಾಯ್ಗೆ ಬಾಯ್ಬಿಟ್ಟ ತೆರದಿ ಕಂ-ಗೆಟ್ಟು ಶೋಕಿಪೆನೋ ಕೃಷ್ಣಮುಟ್ಟಲಮ್ಮರು ಎನ್ನ ಬಂಧುಗಳು ಕಂಡರೆಅಟ್ಟಿ ಬಡಿವುತಲಿಹರೊ ಕೃಷ್ಣದಟ್ಟ ದಾರಿದ್ರ್ಯವನು ಪರಿಹರಿಸದಿದ್ದರೆಮುಟ್ಟುವುದು ದೂರು ನಿನಗೆ ಕೃಷ್ಣ1
ಕಾಶಿಯಾ ವಾಸವನು ಬಯಸಿ ಬಹು ದಿನದಿಂದಘಾಸಿ ಪಟ್ಟೆನು ನಾನು ಕೃಷ್ಣಈ ಶರೀರವನಾಂತು ಹೀನಾಯಗೊಂಡೆನುನೀ ಸಲಹಬೇಕಯ್ಯ ಕೃಷ್ಣಹೇಸಿಗೆಯ ಸಂಸಾರದಿ ನೀನಿಂತು ಮಾಯಾಪಾಶದೊಳು ಬಿಗಿವರೇ ಕೃಷ್ಣಘಾಸಿ ಮಾಡದೆ ಎನ್ನ ಪಾಪವನು ಪರಿಹರಿಸೊಸಾಸಿರನಾಮದ ಮುದ್ದುಕೃಷ್ಣ 2
ಲೋಕದೊಳು ಎನ್ನಂಥ ಪಾಪಿಗಳು ಉಂಟೆಂದುನೀ ಕೇಳಿ ಬಲ್ಲೆಯಾ ಕೃಷ್ಣಸಾಕೇಳು ಎನಗೊಂದು ಗತಿಯ ತೋರಿಸಿ ಸದ್ವಿವೇಕಿಯನು ಮಾಡಯ್ಯ ಕೃಷ್ಣರಾಕೇಂದು ಮುಖಿ ದ್ರೌಪದಿಯ ಮಾನವನು ಕಾಯ್ದುಆಕೆಗಕ್ಷಯವಿತ್ತೆ ಕೃಷ್ಣನಾ ಕಾಣುವಂದದಲಿ ಉಡುಪಿಯಾದಿಕೇಶವಏಕೆ ದರಶುನವೀಯೆ ಕೃಷ್ಣ 3