ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನೆಂದ್ಹೇಳಲಿ ಕಂಡದನುಭವನಾ ಅನುಭವನಾ ಸ್ವಾನಂದ ಸುಖಸದೋದಿತ ಸುಸಾಧನ ಧ್ರುವ ಘಮಿಘಮಿಸುವ ರವಿಕೋಟಿತೇಜನ ಠವಿಠವಿಸುದ ಕಂಡೆ ದಿವ್ಯಸ್ವರೂಪನ ಸವಿಸವಿ ಸುರುವ ಸುಖಸಂಬ್ರಹ್ಮನನು ಸೇವಿಸುವದು ಕಂಡೆ ಶುಕಮುನಿಜನ 1 ಥಳಥಳಿಸುವ ತೇಜೋಮಯ ನಿಧಾನ ಝಳಝಳಿಸುದು ಕಂಡೆ ಹೊಳೆವ ಪ್ರಕಾಶನ ಒಳಹೊರಗೊಂದೇಪರಿ ಭಾಸುವ ಗುಣ ಹೇಳಲಿನ್ನೇನದ ಸುಳವ್ಹು ಸೂಕ್ಷ್ಮನ 2 ಸಣ್ಣದೊಡ್ಡಾರೊಳಿಹ್ಯ ವಸ್ತುನಿರ್ಗುಣ ಬಣ್ಣಬಣ್ಣದಿ ಕಂಡ ಗುರುಸ್ವರೂಪನ ಕಣ್ಣಾರೆ ಕಂಡೆ ಸದ್ಗುರು ಚರಣ ಧನ್ಯಧನ್ಯವಾಯಿತು ಮಹಿಪತಿ ಜೀವನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಏಳು ಚೆನ್ನಿಗರಾಯ ನನ್ನೀನಾಗರ ಏಳು ಪ. ಏಳೆನ್ನ ಕಣ್ಮಣಿಯೇ ಕಾಳಿಮರ್ಧನಕೃಷ್ಣ ಅ.ಪ. ಮಾರನೆಯ ದಿನದಲ್ಲಿ ನೀ ಹಾರುತ್ಯಾರುತ ಬಂದು ಸೀರೆ ಸೆರಗನು ಪಿಡಿದು ಬೆಲ್ಲವನು ಬೇಡಲು ಕೇಳಿಕೊಳ್ಳವುದೇಕೆ ಹಗಲುಗಳ್ಳನೆ ಹೋಗು ಒಳಿತು ಚೋರರಿಗೆಲ್ಲ ಕೇಳಿ ಕೊಳಲೆಂದೆ 1 ಚೋರ ನೀನೆಂದುದಕ್ಕೆ ಈ ಸೀರೆಯನು ಜರಿವರೇ ಚೋರನಲ್ಲವೇ ನೀನು ಮಧ್ವರ ಹೃದಯ ಕದ್ದ 2 ಜಾರ ನೀನೆಂದುದಕೆ ಕರೆಕರೆಗೊಳಿಸುವರೆ ಜಾರೆಯಾಸಹುದು ನೀನಲ್ಲ ಜಾರರಮಣ 3 ಕಂಡದನು ಆಡಿದರೆ ಕಡುಕೋಪವ್ಯಾತಕೆ ಹಿಂಡು ಗೋವಳಲೊಡೆಯ ಪುಂಡನೀನಹುದು 4 ಮಜ್ಜನವ ಮಾಡಿಸುವೆ ಸುಳಿಗುರುಳ ತಿದ್ದುವೆ ಸಜ್ಜಾದ ಚಂದನದ ಚಂದ್ರಮನ ಫಣಿಯಲಿಡುವೆ 5 ಗೊಲ್ಲಬಾಲರು ಈಗ ಕರೆಯಲು ಬರುವರು ಮೆಲ್ಲಗೆ ಎದ್ದು ನೀ ಬೆಲ್ಲವನು ಮೆಲ್ವ ಬಾಲಕೃಷ್ಣ 6 ಮಧ್ವೇಶ ನೀನೇಳು ಮುದ್ದು ಮೊಗದವನೆ ಏಳು ಹದ್ದುವಾಹನ ಏಳೂ ಹಾಲಕುಡಿಯೇಳು 7 ಹಾಲು ಬೆಲ್ಲವ ಸವೆದು ಸುಧೆಯನು ಸುರಿಸೇಳೋ ಪಾಲಗಡಲ ಶಯನ ಶಯನದಿಂದೇಳೋ 8 ಮುನಿಸು ಏಕೇಕೆ ರಮಣ ಮುಸುಕನು ತೆಗೆದೇಳು ತಿನಿಸು ತಿಂಡಿಯ ಕೊಡುವೆ ತನಿವಣ್ಣ ಕೊಡುವೆ 9 ಚಿನ್ನದಾ ಒಂಟೆಳೆಯ ರನ್ನಧಾಭರಣ ಭಿನ್ನ ಭಿನ್ನವಾದ ಆಭರಣಗಳಿಡುವೆ ಕೃಷ್ಣ 10 ಹೆಚ್ಚೇನು ಪೇಳಲಿ ಮಗಸಾಮ್ರಾಜ್ಯದ ದೊರೆತನವು ನಿನ್ನದೊ ಸ್ವಚ್ಚಾಗಿ ಹೇಳುವೆನು ಫಲಿಸೇಳು ಕೃಷ್ಣಾ 11 ಬಾಧಿಸದೆ ಜಾಗವನು ಬಿಟ್ಟೇಳೊ 12 ಏನು ಬಯಸಿದ ಕೊಡುವೆ ಮನಬಯಕೆ ಪೂರೈಸೊ ಮನದನ್ನನೇ ಎನ್ನ ಕಾಳಿಮರ್ಧನಕೃಷ್ಣ 13
--------------
ಕಳಸದ ಸುಂದರಮ್ಮ
ವಾದಿರಾಜ ಪ್ರತಿವಾದಿ ಗಜೇಂದ್ರ ಧ ರಾಧರಾಟ ವಿಬೋಧದಿ ಚಂದ್ರ ಪ ಸಮಯವಿದೆಂದು ಉತ್ಕøಮಣವ ತೊರೆದೆ 1 ಬಂದು ಕರೆಯಲು ಪುರಂದರನಾಳ್ಗಳ ಹಿಂದಟ್ಟಿದೆ ಕರ್ಮಂದಿಗಳರಸ 2 ಆರ್ಥಿಗಳಿಗೆ ಪರಮಾರ್ಥ ಕೊಡುವ ಸ ತ್ತೀರ್ಥ ಪ್ರಬಂಧವ ಕೀರ್ತನೆ ಗೈದೆ 3 ಅದ್ವೈತ ಸಮಿಧಿ ಮಧ್ವ ಸುಸಿದ್ಧಾಂ ತಿಧ್ಮಜಿಂಹದಿ ಪ್ರಧ್ವಂಶಿಸಿದೆ 4 ಪಾವನೀಯ ಸುಮತಾವಲಂಬಿಗಳ ತಾವಕರೆಂದೀವುದು ವರವ 5 ಎಲರುಣಿ ಭಯಕಂಜಿಲಿ ನಿಮ್ಮಾಸನ ಕೆಳಗಿರೆ ಕಂಡದನುಳುಹಿದೆ ಕರುಣಿ 6 ಹಯಮುಖ ಪಾದದ್ವಯ ಭಕ್ತಾಗ್ರನೀ ದಯದಿ ವಿಪ್ರನಿಗೆ ನಯನಗಳಿತ್ತೆ 7 ಭಾಗೀರಥಿಯಂತ್ಯೋಗಿ ವರಗುರು ವಾಗೀಶರ ಕರಾಬ್ಜ ಸಂಭವನೆ 8 ನಮಿಪೆ ತ್ವತ್ಪದಕಮಲಗಳಿಗೆಮ ಧ್ವಮತ ಸರೋರುಹ ದ್ಯುಮಣಿಯೆ ನಿರುತ 9 ಗರಮಿಶ್ರಿತ ನರಹರಿ ನೈವೇದ್ಯವ ನರಿತು ಪೇಳೆ ಉಂಡರಗಿಸಿಕೊಂಡೆ 10 ಪೂತಾತ್ಮ ಜಗನ್ನಾಥವಿಠಲನ ಖ್ಯಾತಿಯ ತುತಿಸುವನಾಥ ಜನಾಪ್ತ 11
--------------
ಜಗನ್ನಾಥದಾಸರು