ದೂರಿಗೊಳಗಹುದೇನೆಲೊ ಬರಿ
ದೂರಿಗೊಳಗಹುದೇನೆಲೊ ಹರಿಧ್ಯಾನವನು ನೀ ಮಾಡದೇ ಪ
ಅಪರೂಪ ಜನ್ಮವು ಬಂದಿದೆ
ಕಪಿಚೇಷ್ಟೆಗಳು ನಿನ್ನ ಹೊಂದಿದೆ
ಜಪ ಶಾಸ್ತ್ರದೊಳು ಹೀಗೆಂದಿದೆ 1
ಕಟಪತನಗಳದ್ಯಾತಕೋ ಯಿದು
ತ್ರಿಪುಟಿಯೊಳಗದು ನೀತಿಕೋರ
ನ ಪರನಾಗಲಿದ್ಯಾಕೊ ನೋಡದ
ಗುಪಿತದಿಂದಲಿ ಭಜಿಸದೆ 2
ನಾನು ನನ್ನದು ಎಂಬುವೇ ಅಲ್ಲಿ
ಗೇನು ಬಂದರು ತಿಂಬುವೇ
ಹಾನಿಗೊಳಗಾಗಿ ನಮ್ಮಯ
ಶ್ರೀನಿವಾಸನ ಭಜಿಸದೆ 3
ಎಂಟುಗೇಣಿನ ದೇಹವು ಅದು
[ಕುಂಟು]ಸೋಹಮಸ್ಮಿಯ ಭಾವವು
ಕಂಟಕಾಂತಕ ತಲಸಿಮದ್ಗುರು
ವುಂಟು ನಿನ್ನೊಳಗರಿಯದೆ 4